ETV Bharat / sitara

ಒಟಿಟಿ ರಿಲೀಸ್​​ ತಾತ್ಕಾಲಿಕ: ಚಿತ್ರಮಂದಿರಗಳಿಗೆ ಸಮಸ್ಯೆ ಆಗಲ್ಲ ಎಂದ ಸಿನಿ ಪಂಡಿತರು - ಚಿತ್ರಮಂದಿರಗಳಿಗೆ ಬೆದರಿಕೆ ಇಲ್ಲ ಎಂದ ಸಿನಿ ಪಂಡಿತರು

ನೇರವಾಗಿ ಡಿಜಿಟಲ್ ಮಾಧ್ಯಮಗಳಲ್ಲಿ ನೂತನ ಚಿತ್ರಗಳು ಬಿಡುಗಡೆಯಾಗುತ್ತಿದ್ದರೂ ಇದರಿಂದ ಚಿತ್ರಮಂದಿರಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂಬುದು ಸಿನಿರಂಗದ ಹಲವರ ಅಭಿಪ್ರಾಯವಾಗಿದೆ.

Direct-to-OTT release
ಚಿತ್ರಮಂದಿರಗಳಿಗೆ ಬೆದರಿಕೆ ಇಲ್ಲ
author img

By

Published : May 16, 2020, 1:53 PM IST

ನವದೆಹಲಿ: ಕೊರೊನಾ ಸಾಂಕ್ರಾಮಿಕದ ಮಧ್ಯೆ ಚಿತ್ರಮಂದಿರಗಳು ಮುಚ್ಚಿರುವ ಕಾರಣ ಅಮಿತಾಬ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ಅಭಿನಯದ ಗುಲಾಬೊ ಸೀತಾಬೊ ಮತ್ತು ವಿದ್ಯಾ ಬಾಲನ್​ ಅವರ ಶಕುಂತಲಾ ದೇವಿ ಸೇರಿದಂತೆ ಹಲವಾರು ಚಿತ್ರಗಳು ಡಿಜಿಟಲ್ ಪ್ಲಾಟ್‌ಫಾರ್ಮ್​ನಲ್ಲಿ ಬಿಡುಗಡೆಗಾಗಿ ಸಾಲಾಗಿ ನಿಂತಿದ್ದು, ಇದು ನಿರ್ಮಾಪಕರು ಮತ್ತು ಪ್ರದರ್ಶಕರ ನಡುವಿನ ಯುದ್ಧಕ್ಕೆ ಕಾರಣವಾಗಿದೆ.

ಅಕ್ಷಯ್ ಕುಮಾರ್ ಅವರ ಲಕ್ಷ್ಮಿ ಬಾಂಬ್, ಅನುರಾಗ್ ಬಸು ಅವರ ಲುಡೋ, ಸಿದ್ಧಾರ್ಥ್ ಮಲ್ಹೋತ್ರಾ ಅವರ ಶೆರ್ಶಾ, ಜಾನ್ವಿ ಕಪೂರ್ ಅವರ ಗುಂಜನ್ ಸಕ್ಸೇನಾ: ಕಾರ್ಗಿಲ್ ಗರ್ಲ್, ಕೈರಾ ಅಡ್ವಾಣಿಯ ಇಂದೂ ಕಿ ಜವಾನಿ ಸೆರಿದಂತೆ ಹಲವು ಚಿತ್ರಗಳು ಚಿತ್ರಮಂದಿರಗಳ ಬದಲು ನೇರವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್​ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಡೈರೆಕ್ಟ್-ಟು-ಒಟಿಟಿ ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದು. ಆದರೆ ಇದರಿಂದ ಚಿತ್ರಮಂದಿರಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಸಿನಿಮಾ ಮಂದಿ ಹೇಳುತ್ತಿದ್ದಾರೆ. ಬದಲಾಗಿ ಇದು ಹೊಸ ಯುಗದ ಉದಯವಾಗಿದೆ. ಎರಡೂ ಮಾದರಿಗಳ ಸಮನ್ವಯತೆಗೆ ಒಂದು ಮಾರ್ಗವನ್ನು ಕಂಡುಕೊಳ್ಳಬಹುದು ಎನ್ನಲಾಗಿದೆ.

ಉದ್ಯಮವು ಈಗ ಕೆಲವು ನಿರ್ಣಾಯಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಾರಂಭಿಸಿದೆ. ಕೆಲವು ಚಲನಚಿತ್ರ ಬಿಡುಗಡೆ ಮಾಡುವ ಕ್ರಮವು ನಿರ್ಮಾಣ ಸಂಸ್ಥೆಗಳ ಅಲ್ಪಾವಧಿಯ ಆರ್ಥಿಕ ಒತ್ತಡ ನಿವಾರಿಸುತ್ತದೆ. ಆದಾಗ್ಯೂ ಭಾರತೀಯ ಚಲನಚಿತ್ರೋದ್ಯಮವು ಬಾಕ್ಸ್​​ ಆಫೀಸ್​ ಅವಲಂಬಿಸಿದೆ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ಜೆಹಿಲ್ ಠಕ್ಕರ್ ತಿಳಿಸಿದ್ದಾರೆ.

ಸಾಲ ತೆಗೆದುಕೊಂಡಿರುವ ಅನೇಕ ನಿರ್ಮಾಪಕರು ಇದ್ದಾರೆ ಅಥವಾ ಇತರ ಹಣಕಾಸಿನ ಸಮಸ್ಯೆ ನಿರ್ಮಾಪಕರು ಚಿತ್ರಗಳನ್ನು ಮಾರಾಟ ಮಾಡಲು ಕಾರಣಗಳಾಗಿವೆ. ಅದೂ ಅಲ್ಲದೆ ಚಿತ್ರಮಂದಿರಗಳು ಯಾವಾಗ ತೆರೆಯುತ್ತವೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಸರಿಯಾದ ಸುರಕ್ಷತಾ ಮುನ್ನೆಚ್ಚರಿಕೆಗಳೊಂದಿಗೆ ಚಿತ್ರಮಂದಿರಗಳು ಶೀಘ್ರದಲ್ಲೇ ತೆರೆದರೂ ಸಹ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ವ್ಯಾಪಾರ ವಿಶ್ಲೇಷಕ ಗಿರೀಶ್ ಜೋಹರ್ ಹೇಳಿದ್ದಾರೆ.

ಆದರೆ ಇಂತಹ ಬದಲಾವಣೆಗಳು ತಾತ್ಕಾಲಿಕ ಮಾತ್ರ ಎಂದು AZURE ಎಂಟರ್‌ಟೈನ್‌ಮೆಂಟ್‌ನ ಸಿಇಒ ಸುನೀರ್ ಖೇಟರ್‌ಪಾಲ್ ಹೇಳಿದ್ದಾರೆ.

ನಮ್ಮ ಕೆಲವು ನಿರ್ಮಾಪಕರು ನೇರವಾಗಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗೆ ಹೋಗಲು ನಿರ್ಧರಿಸಿದ್ದರಿಂದ ನಾವು ನಿರಾಶೆಗೊಂಡಿದ್ದೇವೆ. ಚಿತ್ರಮಂದಿರಗಳು ಮತ್ತೆ ತೆರೆಯುವವರೆಗೆ ತಮ್ಮ ಚಿತ್ರದ ಬಿಡುಗಡೆಯನ್ನು ತಡೆ ಹಿಡಿಯುವ ನಮ್ಮ ಮನವಿಗೆ ನಿರ್ಮಾಪಕರು ಒಪ್ಪುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಪಿವಿಆರ್ ಪಿಕ್ಚರ್ಸ್‌ನ ಸಿಇಒ ಕಮಲ್ ಜಿಯಾನ್‌ ಚಂದಾನಿ ಹೇಳಿದ್ದಾರೆ.

ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್​ಗಳಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿರುವುದು ಇದೇ ಮೊದಲೇನಲ್ಲ. ಸಿನಿಮಾ ಪ್ರದರ್ಶನವು ಕಳೆದ ಹಲವು ವರ್ಷಗಳಿಂದ ಹೊಸ ಉದಯೋನ್ಮುಖ ವಿತರಣಾ ವೇದಿಕೆಗಳಿಂದ ಸ್ಪರ್ಧೆ ಎದುರಿಸುತ್ತಿದೆ ಎಂದು ಕಮಲ್ ಜಿಯಾನ್‌ಚಂದಾನಿ ಹೇಳಿದ್ದಾರೆ.

ಒಟಿಟಿ 200 ಕೋಟಿ ರೂಪಾಯಿಗಳ ಚಲನಚಿತ್ರ ಖರೀದಿಸಲು ಆದಾಯದ ವೇದಿಕೆಯಾಗಲು ಸಾಧ್ಯವಿಲ್ಲ. ಸದ್ಯ ಎಲ್ಲರೂ ಮನೆಯಲ್ಲಿರುವುದರಿಂದ ಗರಿಷ್ಠ ಚಂದಾದಾರರನ್ನು ಪಡೆಯಲು ಅನುಕೂಲವಾಗುವ ಕಾರಣ ನೂತನ ಸಿನಿಮಾಗಳನ್ನು ಖರೀದಿಸಲು ಮುಂದಾಗಿವೆ. ಪರಿಸ್ಥಿತಿ ತಿಳಿಯಾಗುತ್ತಿದ್ದಂತೆ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ಗಿರೀಶ್ ಜೋಹಾರ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.