ETV Bharat / sitara

'ಏಕ್ ಲವ್ ಯಾ' ನಲ್ಲಿ ಲಿಪ್​​ಲಾಕ್ ಜೊತೆಗೆ ಧಮ್ ಎಳೆದ ಡಿಂಪಲ್ ಕ್ವಿನ್​​​​​​​​​...! - ರಾಣಾ ಜೊತೆ ಲಿಪ್​​ಲಾಕ್ ಮಾಡಿದ ರಚಿತಾ

'ಏಕ್​ ಲವ್ ಯಾ' ಚಿತ್ರದಲ್ಲಿ ರಚಿತಾ, ರಾಣಾ ಜೊತೆ ಬೋಲ್ಡ್ ಆಗಿ ನಟಿಸಿದ್ದಾರೆ ಎನ್ನಲಾಗಿದೆ. ಯುವ ನಟ ರಾಣಾ ಜೊತೆಗೆ ರಚಿತಾ ಲಿಪ್​ಲಾಕ್​​​ ಮಾಡಿದ್ದಾರಂತೆ. ಅಷ್ಟೇ ಅಲ್ಲ, ರಚಿತಾ ಈ ಚಿತ್ರದಲ್ಲಿ ಸಿಗರೇಟ್ ಕೂಡಾ ಸೇದಿದ್ದು ಡಿಂಪಲ್ ಕ್ವೀನ್ ಸಿಗರೇಟ್ ಸೇದುವ ಫೋಟೋಗಳು ರಿವೀಲ್ ಆಗಿವೆ

Ek love ya
'ಏಕ್ ಲವ್ ಯಾ'
author img

By

Published : Feb 13, 2020, 4:41 PM IST

ನಿರ್ದೇಶಕ ಪ್ರೇಮ್ ತಮ್ಮ ಮೈದುನ ರಾಣಾಗಾಗಿ 'ಏಕ್​ ಲವ್ ಯಾ' ಸಿನಿಮಾ ಮಾಡುತ್ತಿರುವುದು ತಿಳಿದ ವಿಷಯ. ನಾಳೆ ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆ ವಿಶೇಷವಾಗಿ 'ಏಕ್​ ಲವ್ ಯಾ' ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಕೊಡಗಿನ ರೀಷ್ಮಾ ರಾಣಾಗೆ ನಾಯಕಿಯಾಗಿ ನಟಿಸಿದ್ದರೆ, ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.

Rachita ram
ರಚಿತಾ ರಾಮ್ (ಧೂಮಪಾನ ಆರೋಗ್ಯಕ್ಕೆ ಹಾನಿಕರ)

ಉಪೇಂದ್ರ ಜೊತೆ 'ಐ ಲವ್ ಯು' ಚಿತ್ರದಲ್ಲಿ ರಚಿತಾ ರಾಮ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಇದೀಗ 'ಏಕ್​ ಲವ್ ಯಾ' ಚಿತ್ರದಲ್ಲಿ ಕೂಡಾ, ರಚಿತಾ ರಾಣಾ ಜೊತೆ ಬೋಲ್ಡ್ ಆಗಿ ನಟಿಸಿದ್ದಾರೆ ಎನ್ನಲಾಗಿದೆ. ಯುವ ನಟ ರಾಣಾ ಜೊತೆಗೆ ರಚಿತಾ ರಾಮ್ ಲಿಪ್​ಲಾಕ್​​​ ಮಾಡಿದ್ದಾರಂತೆ. ಅಷ್ಟೇ ಅಲ್ಲ, ರಚಿತಾ ಈ ಚಿತ್ರದಲ್ಲಿ ಸಿಗರೇಟ್ ಕೂಡಾ ಸೇದಿದ್ದು ಡಿಂಪಲ್ ಕ್ವೀನ್ ಸಿಗರೇಟ್ ಸೇದುವ ಫೋಟೋಗಳು ರಿವೀಲ್ ಆಗಿವೆ. ಫೋಟೋ ನೋಡಿದ ರಚಿತಾ ಅಭಿಮಾನಿಗಳು ಆಕೆ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಂಡಿದ್ದಾರೆ ಎಂಬುದನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.

Ek love ya shooting time
'ಏಕ್​ ಲವ್ ಯಾ' ಚಿತ್ರೀಕರಣ

ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳಿರುವ 'ಏಕ್ ಲವ್ ಯಾ' ಸ್ಯಾಂಡಲ್​​​ವುಡ್​​​​​​​ನಲ್ಲಿ ಒಂದಲ್ಲಾ ಒಂದು ವಿಷಯಕ್ಕೆ ಸದ್ದು ಮಾಡುತ್ತಿದೆ. ಪತ್ನಿ ರಕ್ಷಿತಾ ಪ್ರೇಮ್ ಸಹೋದರ ರಾಣಾ, ಈ ಚಿತ್ರದ ಮೂಲಕ ಸ್ಯಾಂಡಲ್​​ವುಡ್​​ಗೆ ಎಂಟ್ರಿ ಆಗಲು ರೆಡಿಯಾಗುತ್ತಿದ್ದಾರೆ. ರಕ್ಷಿತಾ ಪ್ರೇಮ್ ತಮ್ಮನ ಚಿತ್ರಕ್ಕೆ ಬಂಡವಾಳ ಹೂಡಿದ್ದು ನಾಳೆ ಟೀಸರ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.