''ಹಿಟ್ಲರ್ ಕಲ್ಯಾಣ'' ಧಾರಾವಾಹಿಯ ಮೂಲಕ ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್ ನಟನೆಗೆ ಮರಳಿದ್ದಾರೆ. ಈಗಾಗಲೇ ಧಾರಾವಾಹಿಯ ಪ್ರೋಮೋ ಪ್ರಸಾರವಾಗುತ್ತಿದ್ದು, ಸದ್ಯದಲ್ಲಿಯೇ ಧಾರಾವಾಹಿ ಪ್ರಸಾರವಾಗಲಿದೆ.
ದಿಲೀಪ್ ರಾಜ್ ಅವರ ಹೋಮ್ ಬ್ಯಾನರ್ ಅಡಿಯಲ್ಲಿ ಪ್ರಸಾರವಾಗಲಿರುವ ಈ ಧಾರಾವಾಹಿ ವೀಕ್ಷಕರ ಕುತೂಹಲ ಹೆಚ್ಚಿಸಿದೆ. ಕಳೆದ ಕೆಲ ವರ್ಷಗಳಲ್ಲಿ ಟಿವಿ ಉದ್ಯಮ ಬೆಳೆದ ಹಾದಿ ನೋಡಿದರೆ ತುಂಬಾ ಸಂತಸವಾಗುತ್ತಿದೆ. ಪ್ರೋಮೋ ಶೂಟಿಂಗ್ ಇದ್ದರೂ ಅಲ್ಲಿ ಕಠಿಣ ಶ್ರಮ ಇರುತ್ತದೆ. "ಹಿಟ್ಲರ್ ಕಲ್ಯಾಣ'ವನ್ನು ಕೆಲವರು ನೋಡಿದ್ದಾರೆ, ಹಲವು ಜನ ಇದು ಧಾರಾವಾಹಿಯೋ, ಸಿನಿಮಾವೋ ಎಂದು ಕೇಳಿದವರಿದ್ದಾರೆ. ಇದು ಗುಣಮಟ್ಟವನ್ನು ತೋರಿಸುತ್ತದೆ ಎಂದಿದ್ದಾರೆ ದಿಲೀಪ್ ರಾಜ್.
ಈ ಧಾರಾವಾಹಿಯಲ್ಲಿ ಶ್ರೀಮಂತ ಹೋಟೆಲ್ ಉದ್ಯಮಿ ಅಭಿರಾಮ್ ಜಯಶಂಕರ್ ಪಾತ್ರದಲ್ಲಿ ದಿಲೀಪ್ ಕಾಣಿಸಿಕೊಂಡಿದ್ದಾರೆ. ತಮ್ಮ ಲುಕ್ ಮೂಲಕ ಧಾರಾವಾಹಿ ಆರಂಭಕ್ಕೂ ಮುನ್ನವೇ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ನಟನೆಗೆ ಮರಳಿರುವ ಕುರಿತು ಮಾತನಾಡಿರುವ ದಿಲೀಪ್ ರಾಜ್, ನಾನು ಹೋಟೆಲ್ ಉದ್ಯಮಿಯಾಗಿ ಕಾಣಿಸಿಕೊಂಡಿದ್ದೇನೆ. ಚೆಫ್ ಆಗಿ ಉದ್ಯಮಕ್ಕಿಳಿದ ಅವನು ಹೋಟೆಲ್ ವ್ಯವಹಾರವನ್ನು ಅರ್ಥ ಮಾಡಿಕೊಳ್ಳುತ್ತಾನೆ. ಎಲ್ಲವೂ ಅವನು ಹೇಳಿದಂತೆಯೇ ಆಗಬೇಕಿರುತ್ತದೆ. ಅಶಿಸ್ತನ್ನು ಅವನು ಸಹಿಸಿಕೊಳ್ಳುವುದಿಲ್ಲ ಎಂದು ಪಾತ್ರದ ಬಗ್ಗೆ ಹೇಳಿದ್ದಾರೆ ದಿಲೀಪ್ ರಾಜ್.
'ಹಿಟ್ಲರ್ ಕಲ್ಯಾಣ' ಮಾಡಲು ಮತ್ತೆ ಕಿರುತೆರೆಗೆ ಬಂದ ದಿಲೀಪ್ ರಾಜ್ - ಹಿಟ್ಲರ್ ಕಲ್ಯಾಣ ಹೊಸ ಧಾರಾವಾಹಿ
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಶ್ರೀಮಂತ ಹೋಟೆಲ್ ಉದ್ಯಮಿ ಅಭಿರಾಮ್ ಜಯಶಂಕರ್ ಪಾತ್ರದಲ್ಲಿ ದಿಲೀಪ್ ಕಾಣಿಸಿಕೊಂಡಿದ್ದಾರೆ. ತಮ್ಮ ಲುಕ್ ಮೂಲಕ ಧಾರಾವಾಹಿ ಆರಂಭಕ್ಕೂ ಮುನ್ನವೇ ಪ್ರೇಕ್ಷಕರ ಮನ ಗೆದ್ದಿದ್ದಾರೆ.