ಮುಂಬೈ : ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್ಆರ್ಆರ್’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ಉದ್ದಕ್ಕೂ ರಾಮ್ ಚರಣ್ ಹಾಗೂ ಜ್ಯೂ.ಎನ್‌ಟಿಆರ್ ಮಿಂಚಿದ್ದಾರೆ.
ನಿನ್ನೆ ನಗರದಲ್ಲಿ ಚಿತ್ರತಂಡ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ನಿರ್ದೇಶಕ ರಾಜಮೌಳಿ, ಜೂನಿಯರ್ ಎನ್‌ಟಿಆರ್, ಆಲಿಯಾ ಭಟ್, ಅಜಯ್ ದೇವಗನ್ ಮತ್ತು ಇತರರು ಭಾಗವಹಿಸಿದ್ದರು.
ಅಜಯ್ ದೇವಗನ್ ಜೊತೆ ನನ್ನನ್ನು ಹೋಲಿಕೆ ಮಾಡಬೇಡಿ, ನಾವು ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇವೆ. ಅಜಯ್ ತಮ್ಮದೇ ನಟನಾ ಶೈಲಿ ಹೊಂದಿದ್ದಾರೆ.
ಆರ್ಆರ್ಆರ್ ಸಿನಿಮಾದಲ್ಲಿ ನಾನು ಅವರ ಜೊತೆ ಸ್ಕ್ರೀನ್ ಶೇರ್ ಮಾಡಿಲ್ಲ. ಆದರೆ, ಶೂಟಿಂಗ್ ವೇಳೆ ಅವರ ಅಭಿನಯ ನೋಡಿ ತುಂಬಾ ಸಂತೋಷವಾಯಿತು ಎಂದು ಜೂನಿಯರ್ ಎನ್‌ಟಿಆರ್ ಅಜಯ್ರನ್ನು ಹಾಡಿ ಹೊಗಳಿದರು.
ಎನ್‌ಟಿಆರ್ ಹೊಗಳಿಕೆಯನ್ನು ಕೇಳಿದ ಬಳಿಕ ಅಜಯ್, ನನಗೆ ವಯಸ್ಸಾಯಿತು ಎಂಬ ಭಾವನೆ ಉಂಟು ಮಾಡಿದ್ದಕ್ಕೆ ಧನ್ಯವಾದ ಎಂದು ನಗುತ್ತಾ ಪ್ರತಿಕ್ರಿಯಿಸಿದರು. ನಾವು ಸಿನಿಮಾದಲ್ಲಿ ಒಟ್ಟಿಗೆ ನಟಿಸಿಲ್ಲ. ಆದರೆ, ಶೂಟಿಂಗ್ ಸೆಟ್ಗೆ ಎನ್‌ಟಿಆರ್ ಭೇಟಿ ನೀಡಿದ್ದ ವೇಳೆ ಉತ್ತಮವಾದ ಸಮಯವನ್ನು ಕಳೆದಿದ್ದೇದೆ ಎಂದರು.
ಬಿಗ್ ಬಜೆಟ್ ಆರ್ಆರ್ಆರ್ ಸಿನಿಮಾದಲ್ಲಿ ಜ್ಯೂ.ಎನ್ ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಅಲಿಯಾ ಭಟ್ ಹಾಗೂ ಇತರರು ಮುಖ್ಯ ಭೂಮಿಕೆಯಲ್ಲಿದ್ದಾರೆ. 2022ರ ಜನವರಿ 7ರಂದು ತೆಲುಗು, ಕನ್ನಡ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಚಿತ್ರ ತೆರೆ ಕಾಣಲಿದೆ.
ಇದನ್ನೂ ಓದಿ: Watch.. ಮತ್ತೆ ಯಾವತ್ತೂ ಈ ಹಾಡು ಹಾಡುವುದಿಲ್ಲ... ಅಪ್ಪು ನೆನೆದು ಎನ್‌ಟಿಆರ್ ಭಾವುಕ