ಸ್ಯಾಂಡಲ್ವುಡ್ನಲ್ಲಿ ಈಗಾಗಲೇ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಬಂದಿವೆ. ಅಲ್ಲದೇ ಕೆಲವು ಚಿತ್ರಗಳು ಸಿನಿಪ್ರಿಯರಿಂದ ಶಿಳ್ಳೆ ಗಿಟ್ಟಿಸಿಕೊಂಡಿರುವುದರ ಜೊತೆಗೆ
ನಿರ್ಮಾಪಕರ ಜೇಬು ತುಂಬಿಸಿವೆ. ಇದೀಗ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಸೆಟ್ಟೇರಲು ಸಿದ್ಧವಾಗಿದೆ.
ನಿರ್ದೇಶಕ, ನಾಯಕ-ನಾಯಕಿ ಎಲ್ಲಾ ಹೊಸಬರೇ ಕೂಡಿರುವ ಚಿತ್ರತಂಡವೊಂದು 'ಧೀರ ಸಾಮ್ರಾಟ್' ಎಂಬ ಪವರ್ಫುಲ್ ಟೈಟಲ್ನೊಂದಿಗೆ ಗಾಂಧಿನಗರಕ್ಕೆ ಎಂಟ್ರಿ ಕೊಡಲು ರೆಡಿಯಾಗಿದೆ.
ಭರ್ಜರಿ ಚೇತನ್ ಗರಡಿಯಿಂದ ಬಂದಿರುವ ಪವನ್ ಕುಮಾರ್ (ಪಚ್ಚಿ) ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗಲು ರೆಡಿಯಾಗಿದ್ದು, ಹೊಸ ಪ್ರತಿಭೆ ಖುಷ್, 'ಧೀರ ಸಾಮ್ರಾಟ' ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಲಿದ್ದಾರೆ.
ಚಿತ್ರವನ್ನು ನಿರ್ದೇಶಿಸುತ್ತಿರುವ ಪಚ್ಚಿ ಒಂದು ಉತ್ತಮ ಟೀಂ ಕಟ್ಟಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಉಪೇಂದ್ರರ 'ಐ ಲವ್ ಯೂ' ಸಿನಿಮಾದಲ್ಲಿ ಹಾಡುಗಳಿಂದಲೇ ಮೋಡಿ ಮಾಡಿದ್ದ ಡಾ. ಕಿರಣ್ ತೋಟಂ ಬೈಲು ಈ ಚಿತ್ರಕ್ಕೂ ಸಂಗೀತ ನೀಡಲಿದ್ದಾರೆ. ಅಲ್ಲದೆ ಚಿತ್ರಕ್ಕೆ ನಿರ್ದೇಶಕ ಭರ್ಜರಿ ಚೇತನ್ ಮೂರು ಹಾಡುಗಳನ್ನು ಬರೆಯಲಿದ್ದು, ಪದಗಳಿಂದಲೇ ಕಮಾಲ್ ಮಾಡಲು ರೆಡಿಯಾಗಿದ್ದಾರೆ.
ಗುರು ಬಂಡಿ ನಿರ್ಮಾಣ ಮಾಡುತ್ತಿರುವ, ಎ. ಆರ್.ಸಾಯಿರಾಮ್ ಸಂಭಾಷಣೆ ಇರುವ ಈ ಸಿನಿಮಾ ಇದೀಗ ಪ್ರೀ ಪ್ರೊಡಕ್ಷನ್ ವರ್ಕ್ನಲ್ಲಿ ಬ್ಯುಸಿ ಇದ್ದು, ಆಷಾಢದ ನಂತರ ನಾಯಕಿಯನ್ನು ಫೈನಲ್ ಮಾಡಿ ಶೂಟಿಂಗ್ ಶುರು ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಅಲ್ಲದೇ ಚಿತ್ರದ ಟೈಟಲ್ಅನ್ನು ಸ್ಟಾರ್ ನಟರೊಬ್ಬರಿಂದ ಲಾಂಚ್ ಮಾಡಿಸಲು ಚಿತ್ರತಂಡ ಪ್ಲಾನ್ ಮಾಡಿದೆ.