ಕನ್ನಡ ಚಿತ್ರರಂಗದ ಐಕಾನ್ ಆಗಿ ಕೋಟ್ಯಂತರ ಅಭಿಮಾನಿಗಳ, ಹೃದಯ ಸಿಂಹಾಸನದಲ್ಲಿ ರಾರಾಜಿಸುತ್ತಿರುವ ಮೇರುನಟ ಡಾ. ರಾಜ್ ಕುಮಾರ್ ಅವರನ್ನು ಎಷ್ಟು ಹೊಗಳಿದರೂ ಕಡಿಮೆಯೇ. ಅಭಿಮಾನಿಗಳು ನಟಸಾರ್ವಭೌಮನ ಹೆಸರನ್ನು ಅಜರಾಮರವಾಗಿರಿಸಲು ತಮ್ಮದೇ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
- " class="align-text-top noRightClick twitterSection" data="
">
ಇನ್ನು ಡಾ. ರಾಜ್ಗೆ ಸಾಮಾನ್ಯ ಜನರು ಮಾತ್ರವಲ್ಲ ಎಲ್ಲಾ ಸೆಲಬ್ರಿಟಿಗಳು ಕೂಡಾ ಅಭಿಮಾನಿಗಳೇ. ಅದರಲ್ಲಿ ಮೊಮ್ಮಗ, ನಟ ರಾಮ್ಕುಮಾರ್ ಪುತ್ರ ಧೀರೆನ್ ರಾಮ್ಕುಮಾರ್ ಕೂಡಾ ಒಬ್ಬರು. ಅಣ್ಣಾವ್ರ ಫೋಟೋವನ್ನು ಅದೆಷ್ಟೋ ಅಭಿಮಾನಿಗಳು ಮನೆಯಲಿಟ್ಟು ಪೂಜೆ ಮಾಡಿರುವ ಉದಾಹರಣೆಗಳಿವೆ. ಕೆಲವು ದಿನಗಳ ಹಿಂದೆ ಡಾ. ರಾಜ್ಕುಮಾರ್ ಭಾವಚಿತ್ರ ಇರುವ ಅಂಗಿಯನ್ನು ಮೊಮ್ಮಗ ಧೀರೆನ್ ರಾಮ್ಕುಮಾರ್ ಧರಿಸುವ ಮೂಲಕ ಸುದ್ದಿಯಲ್ಲಿದ್ದರು. ಅಣ್ಣಾವ್ರು ನಟಿಸಿರುವ, ಆಪರೇಷನ್ ಡೈಮಂಡ್ ರಾಕೆಟ್, ಕಸ್ತೂರಿ ನಿವಾಸ ಮತ್ತು ಮೇಯರ್ ಮುತ್ತಣ್ಣ ಚಿತ್ರಗಳ ಭಾವಚಿತ್ರಗಳಿರುವ ಅಂಗಿಯನ್ನು ಧೀರೆನ್ ಧರಿಸಿ ಟ್ರೆಂಡ್ ಸೃಷ್ಟಿಸಿದ್ದರು. ಇದೀಗ ಮಾವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭಾವಚಿತ್ರ ಇರುವ ಶರ್ಟ್ ನ್ನು ಧರಿಸಿ ಗಮನ ಸೆಳೆದಿದ್ದಾರೆ. ಈ ಶರ್ಟ್ ಮೇಲೆ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ' ಹಾಗೂ ಕಳೆದ ವರ್ಷ ಬಹಳ ಸೌಂಡ್ ಮಾಡಿದ 'ಮಫ್ತಿ' ಚಿತ್ರದ ಬೈರತಿ ರಣಗಲ್ ಭಾವಚಿತ್ರಗಳು ಇವೆ. ಈ ಫೋಟೋಗಳನ್ನು ಧೀರೆನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="">