ETV Bharat / sitara

ಲೂಧಿಯಾನದ ರೈಖಿ ಸಿನಿಮಾ ಹಾಲ್​ ಕುರಿತು ಧರ್ಮೇಂದ್ರ ಬೇಸರ: ಕಾರಣ? - ಧರ್ಮೇಂದ್ರ ಡಿಯೋಲ್

ಬಾಲಿವುಡ್​ನ ಹಿರಿಯ ನಟ ಧರ್ಮೇಂದ್ರ ಡಿಯೋಲ್​ ಲೂಧಿಯಾನದ ಹಳೆಯ ರೈಖಿ ಸಿನಿಮಾ ಮಂದಿರದ ಇಂದಿನ ಸ್ಥಿತಿ ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್​ನ ಹಿರಿಯ ನಟ ಧರ್ಮೇಂದ್ರ ಡಿಯೋಲ್​
ಬಾಲಿವುಡ್​ನ ಹಿರಿಯ ನಟ ಧರ್ಮೇಂದ್ರ ಡಿಯೋಲ್​
author img

By

Published : Jul 6, 2020, 7:53 AM IST

ನವದೆಹಲಿ: ಬಾಲಿವುಡ್​ನ ಹಿರಿಯ ನಟ ಧರ್ಮೇಂದ್ರ ಡಿಯೋಲ್​ ಅವರು ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಈ ವೇಳೆ ಲೂಧಿಯಾನದ ಹಳೆಯ ರೈಖಿ ಸಿನಿಮಾ ಮಂದಿರದ ಕುರಿತಾಗಿ ಮಾತನಾಡಿರುವ ಅವರು, ಸದ್ಯ ಶಿಥಿಲಾವಸ್ಥೆಯಲ್ಲಿರುವ ಥಿಯೇಟರ್​ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್​ನಲ್ಲಿ ಈ ಕುರಿತು ಮಾತನಾಡಿದ ಅವರು, "ರೈಖಿ ಸಿನಿಮಾ, ಲೂಧಿಯಾನ. ನಾನು ಒಂದು ಕಾಲದಲ್ಲಿ ಈ ಚಿತ್ರಮಂದಿರಲ್ಲಿ ಅನೇಕ ಸಿನಿಮಾಗಳನ್ನು ವೀಕ್ಷಿಸಿದ್ದೇನೆ, ಆದರೆ ಈ ಚಿತ್ರಮಂದಿರದ ಸದ್ಯದ ಪರಿಸ್ಥಿತಿ ನೋಡಿದರೆ ಬೇಸರವಾಗುತ್ತಿದೆ" ಎಂದಿದ್ದಾರೆ.

  • Rikhy cinema, ludhiyana..... unginnat filmen 🎥 dekhi hain yahaan....ye sannata ......dekh kar ..... dil udaas ho gaya mera ..... pic.twitter.com/MGY5VG3z0S

    — Dharmendra Deol (@aapkadharam) July 4, 2020 " class="align-text-top noRightClick twitterSection" data=" ">

ರೈಖಿ ಚಿತ್ರಮಂದಿರವು ಲೂಧಿಯಾನದ ಎರಡನೇ ಅತೀ ಹಳೆಯ ಸಿನಿಮಾ ಹಾಲ್​ ಆಗಿದೆ. ಇದು 1933ರಲ್ಲಿ ಸ್ಥಾಪನೆಯಾಗಿದ್ದು, ಸದ್ಯ ಶಿಥಿಲಾವಸ್ಥೆಯಲ್ಲಿದೆ. ಈ ಹಿನ್ನಲೆಯಲ್ಲಿ ಸಿನಿಮಾ ಮಂದಿರದ ಫೋಟೋ ಶೇರ್​ ಮಾಡಿ ಧರ್ಮೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

ನೀವು ರೈಖಿಯಲ್ಲಿ ನೋಡಿದ ಕೊನೆಯ ಸಿನಿಮಾ ಯಾವುದು ಎಂದು ಧರ್ಮೇಂದ್ರ ಅಭಿಮಾನಿಯೊಬ್ಬರು ಟ್ವಿಟ್ಟರ್​ನಲ್ಲಿ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ‘ ದಿಲೀಪ್ ಕುಮಾರ್ ಅವರ ದೀದಾರ್ ಸಿನಿಮಾ. ಆದರೆ ನನಗೆ ದಿನಾಂಕ ನೆನಪಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.