ETV Bharat / sitara

'ತಲ್ವಾರ್​' ಹಿಡಿದ ನವಗ್ರಹ ನಟನಿಗೆ ಸಾಥ್​ ಕೊಟ್ಟ ಡಿ ಬಾಸ್​, ಕ್ಲಾಪ್​ ಮಾಡಿ ಹಾರೈಸಿದ ದಾಸ

author img

By

Published : Sep 20, 2019, 11:56 PM IST

Updated : Sep 21, 2019, 3:38 PM IST

ಇಷ್ಟು ದಿನ ಸ್ಯಾಂಡಲ್​​ವುಡ್​​​ನಲ್ಲಿ ಚಾಕೊಲೇಟ್ ಹೀರೋ ಆಗಿ ಮಿಂಚಿದ್ದ ಧರ್ಮ ಕೀರ್ತಿರಾಜ್ ಈಗ ಪಕ್ಕಾ ಮಾಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ 'ತಲ್ವಾರ್​' ಎಂದು ಹೆಸರಿಡಲಾಗಿದ್ದು ಮುರಳಿ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಧರ್ಮ ಕೀರ್ತಿರಾಜ್

ಸ್ಯಾಂಡಲ್​​​​​ವುಡ್​​ ಕ್ಯಾಡ್​​​ಬರಿ ಧರ್ಮ ಕೀರ್ತಿರಾಜ್ ರೊಚ್ಚಿಗೆದ್ದಿದ್ದು ಈಗ 'ತಲ್ವಾರ್' ಹಿಡಿಯೋಕೆ ರೆಡಿಯಾಗಿದ್ದಾರೆ. ಅಲ್ಲದೆ ತಲ್ವಾರ್ ಹಿಡಿದಿರುವ ಧರ್ಮಗೆ ಚಾಲೆಂಜಿಂಗ್ ಸ್ಟಾರ್​​ ದರ್ಶನ್​ ಸಾಥ್ ನೀಡಿದ್ದಾರೆ.ಇಷ್ಟು ದಿನ ಲವರ್ ಬಾಯ್ ಆಗಿ ಮಿಂಚಿದ್ದ ಧರ್ಮ ಕೀರ್ತಿರಾಜ್ ಈಗ ಈ ಚಿತ್ರದ ಮೂಲಕ ಅಂಡರ್​​​ವರ್ಲ್ಡ್​​ಗೆ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ.

'ತಲ್ವಾರ್​' ಮುಹೂರ್ತ

ಇಂದು ಧರ್ಮಗಿರಿ ಮಂಜುನಾಥ ದೇವಾಲಯದಲ್ಲಿ 'ತಲ್ವಾರ್​​​' ಚಿತ್ರದ ಮುಹೂರ್ತ ನೇರವೇರಿದೆ. ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ನಟ ದರ್ಶನ್ ಆಗಮಿಸಿ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಚಿತ್ರಕ್ಕಾಗಿ ಧರ್ಮ ಗೆಟಪ್ ಬದಲಾಯಿಸಿಕೊಂಡು ಪಕ್ಕಾ ಮಾಸ್​​​​ ಲುಕ್ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಇದೊಂದು ಪಕ್ಕಾ ರೌಡಿಸಂ ಕಥೆ ಹೊಂದಿರುವ ಮಾಸ್ ಎಂಟರ್​​​​​​ಟೈನ್ಮೆಂಟ್​​​​​​ ಚಿತ್ರವಾಗಿದೆ. ಈ ಹಿಂದೆ ಧರ್ಮ ಕೀರ್ತಿರಾಜ್ ಅಭಿನಯದ 'ಮಮ್ತಾಜ್' ಚಿತ್ರವನ್ನು ನಿರ್ದೇಶನ ಮಾಡಿದ್ದ ಮುರಳಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 'ಅಖಿರ' ಚಿತ್ರದಲ್ಲಿ ನಟಿಸಿದ್ದ ಅದಿತಿ ರಾವ್ ಈ ಸಿನಿಮಾಗೆ ಧರ್ಮ ಜೊತೆ ನಾಯಕಿಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರವನ್ನು ಟಚ್ ಸ್ಟೋನ್ ಪಿಕ್ಚರ್ಸ್ ಬ್ಯಾನರ್ ಅಡಿ ಸುರೇಶ್ ಬೈರಸಂದ್ರ ನಿರ್ಮಾಣ ಮಾಡುತ್ತಿದ್ದಾರೆ. ಸುರೇಶ್​​​​​​​​ ಈ ಹಿಂದೆ 'ಬಹುಪರಾಕ್​​​' ಚಿತ್ರವನ್ನು ನಿರ್ಮಿಸಿದ್ದರು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, 'ಮಮ್ತಾಜ್' ಚಿತ್ರಕ್ಕೆ ಸಂಗೀತ ನೀಡಿದ್ದ ಪ್ರವೀಣ್ ಕುಮಾರ್ ಈ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ.

dharma
ಅದಿತಿ ರಾವ್, ಧರ್ಮ ಕೀರ್ತಿರಾಜ್

Intro:ಸ್ಯಾಂಡಲ್ ವುಡ್ ನ ಚಾಕ್ ಲೆಟ್ ಹಿರೋ ಕ್ಯಾಡ್ ಬೆರಿ ಧರ್ಮ ಕೀರ್ತಿ ರಾಜ್ ರೊಚ್ಚಿಗೆದ್ದಿದ್ದು" ತಲ್ವಾರ್" ಹಿಡಿಯೋಕೆ ರೆಡಿಯಾಗಿದ್ದಾರೆ. ಅಲ್ಲದೆ "ತಲ್ವಾರ್" ಹಿಡಿದಿರುವ ಧರ್ಮ ಗೆ ದಾಸ ಸಾಥ್ ನೀಡಿದ್ದಾರೆ.ಎಸ್ ಇಷ್ಟು ದಿನ ಲವರ್ ಬಾಯ್ ಆಗಿ ಮಿಚ್ಚಿದ್ದ ಧರ್ಮ ಕೀರ್ತಿರಾಜ್ ಈಗ " ತಲ್ವಾರ್" ಚಿತ್ರದ ಮೂಲಕ ಅಂಡರ್ವರ್ಲ್ಡ್ ಎಂಟ್ರಿಕೊಡೊಕೆ ರೆಡಿಯಾಗಿದ್ದಾರೆ.

Body:ಎಸ್ ಧರ್ಮ ತಲ್ವಾರ್ ಚಿತ್ರದ ಮೂಲಕ ಲಾಂಗ್ ಹಿಡಿಯಲು ರೆಡಿಯಾಗಿದ್ದು,ಇಂದು ಧರ್ಮಗಿರಿ ಮಂಜುನಾಥ ದೇವಾಲಯದಲ್ಲಿ " ತಲ್ವಾರ್ " ಚಿತ್ರದ ಮುಹುರ್ತ ನೇರವೇರಿದೆ.
ಅಲ್ಲದೆ ತಲ್ವಾರ್ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿ ಕ್ಲಾಪ್ ಮಾಡುವ ಮೂಲಕ " ತಲ್ವಾರ್" ಚಿತ್ರತಂಡಕ್ಕೆ ಶುಭ ಹಾರೈಸಿದ್ರು.ಇನ್ನೂ ಈ ಚಿತ್ರಕ್ಕಾಗಿ ಧರ್ಮ ಗೆಟಪ್ ಚೇಂಜ್ ಮಾಡ್ಕೋಂಡ್ ಪಕ್ಕಾ ಮಾಸ್ ಲುಕ್ ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.ಇನ್ನೂ ತಲ್ವಾರ್ ಚಿತ್ರ ಪಕ್ಕಾ ರೈಡಿಸಂ ಕಥೆ ಹೊಂದಿರೊ ಮಾಸ್ ಎಂಟರ್ಟೈನ್ಮೆಂಟ್ ಚಿತ್ರವಾಗಿದ್ದು,ಚಿತ್ರಕ್ಕೆ ಈ ಹಿಂದೆ ಧರ್ಮ ಕೀರ್ತಿ ರಾಜ್ ಅಭಿನಯದ " ಮಮ್ತಾಜ್" ಚಿತ್ರವನ್ನು ನಿರ್ದೇಶನ ಮಾಡಿದ್ದ ಮುರುಳಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಇನ್ನೂ ಚಿತ್ರದಲ್ಲಿ ನಾಯಕಿಯಾಗಿ ಅಖಿರ ಚಿತ್ರದಲ್ಲಿ ನಟಿಸಿದ್ದ ಅದಿತಿ ರಾವ್ ನಾಯಕಿಯಾಗಿ ಧರ್ಮ ಜೊತೆ ಸ್ಕ್ರೀನ್ ಶೇರ್ ಮಾಡಲು ರೆಡಿಯಾಗಿದ್ದು,ಎರಡು ವರ್ಷಗಳ ನಂತರ ಮತ್ತೆ ಬಣ್ಣದ ಲೋಕಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ.

Conclusion:ಇನ್ನೂ ಈ ಚಿತ್ರವನ್ನು ಟಚ್ ಸ್ಟೋನ್ ಪಿಕ್ಚರ್ಸ್ ಬ್ಯಾನರ್ ಅಡಿ "ಬಹುಪರಾಕ್ " ಚಿತ್ರವನ್ನು ನಿರ್ಮಾಣ ಮಾಡಿದ್ದ ಸುರೇಶ್ ಬೈರಸಂದ್ರ ನಿರ್ಮಾಣ ಮಾಡ್ತಿದ್ದಾರೆ‌.ಅಲ್ಲದೆ ಚಿತ್ರದಲ್ಲಿ ಕ್ಯಾಮರ ವರ್ಕ್ ಅನ್ನು ಸುರೇಶ್ ನಿಭಾಯಿಸ್ತಿದ್ದಾರೆ.ಚಿತ್ರದಲ್ಲಿ ನಾಲ್ಕು ಹಾಡಿಗಳಿದ್ದು, ಮಮ್ತಾಜ್ ಚಿತ್ರಕ್ಕೆ ಸಂಗೀತ ನೀಡಿದ್ದ ಪ್ರವೀಣ್ ಕುಮಾರ್ ಸಂಗೀತ ಇರಲಿದೆ.

ಸತೀಶ ಎಂಬಿ
Last Updated : Sep 21, 2019, 3:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.