"ಸಲ್ಮಾನ್ ಖಾನ್ ಅಭಿನಯದ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್'' ನಂತರ, ಈಗ ತಮಿಳು ಸ್ಟಾರ್ ನಟ ಧನುಷ್ ಅವರ ಚಿತ್ರ ಜಗಮೆ ತಾಂಧಿರಾಮ್ಗೆ ಪೈರಸಿ ಕಾಟ ಶುರುವಾಗಿದೆ. ತಮಿಳುರಾಕರ್ಸ್ ಮತ್ತು ಟೆಲಿಗ್ರಾಮ್ನಲ್ಲಿ ಕಿಡಿಗೇಡಿಗಳು ಜಗಮೆ ತಂಧಿರಾಮ್ ಅನ್ನು ಲೀಕ್ ಮಾಡಿದ್ದಾರೆ. ಈ ಚಿತ್ರವು ಇಂದು ಮಧ್ಯಾಹ್ನ 12: 30 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಯಿತು. ಆದರೆ, ಚಂದಾದಾರರು ಅದನ್ನು ನೋಡುವ ಮೊದಲೇ ಜಗಮೆ ತಾಂಧಿರಾಮ್ ಪೈರಸಿ ವೆಬ್ಸೈಟ್ಗಳಲ್ಲಿ ಕಾಣಿಸಿಕೊಂಡಿದೆ.
ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಈ ಚಿತ್ರದಲ್ಲಿ ಧನುಷ್ ಸೇರಿದಂತೆ ಐಶ್ವರ್ಯ ಲಕ್ಷ್ಮಿ, ಜೋಜು ಜಾರ್ಜ್, ಕಲೈರಸನ್ , ಶರತ್ ರವಿ, ಜೇಮ್ಸ್ ಕೋಸ್ಮೊ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಗಮೆ ತಾಂಧಿರಾಮ್ ಆರಂಭದಲ್ಲಿ ಥಿಯೇಟರ್ನಲ್ಲಿಯೇ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ, ಕೊರೊನಾ ಲಾಕ್ಡೌನ್ ಕಾರಣಕ್ಕೆ ಚಿತ್ರಮಂದಿರಗಳನ್ನು ಬಂದ್ ಮಾಡಿದ್ದರಿಂದ OTT ಯಲ್ಲಿ ಸಿನಿಮಾ ಬಿಡುಗಡೆಯಾಗಿದೆ.
ಜಗಮೆ ತಂಧಿರಾಮ್ ನಲ್ಲಿ ಧನುಷ್ ದರೋಡೆಕೋರನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಒಳ್ಳೆಯ ಮತ್ತು ಕೆಟ್ಟದ್ದರ ನಡುವೆ ಆರಿಸಬೇಕಾದ ಅಲೆಮಾರಿ ದರೋಡೆಕೋರನ ಕಥೆಯನ್ನು ಹೇಳುತ್ತದೆ. ಸಿನಿಮಾ ತಯಾರಕರು ಇಂದು ಒಟಿಟಿಯಲ್ಲಿ ಬಿಡುಗಡೆ ಮಾಡಲು ಕಾಯುತ್ತಿದ್ದರೆ, ಜಗಮೆ ತಂಧಿರಾಮ್ ಹೆಚ್‌ಡಿ ಗುಣಮಟ್ಟದಲ್ಲಿ ಉಚಿತ ಡೌನ್‌ಲೋಡ್‌ಗೆ ಪೈರಸಿ ಜಾಲತಾಣಗಳು ಈಗಾಗಲೇ ಬಿಡುಗಡೆ ಮಾಡಿವೆ.
ಬಾಲಿವುಡ್ನ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ವಾಟ್ಸ್ಆ್ಯಪ್ ಮತ್ತು ಟೆಲಿಗ್ರಾಮ್ ಮೂಲಕ ಪೈರಸಿಗೆ ಒಳಗಾಗಿತ್ತು. ಪೈರಸಿಯಿಂದ ಉಂಟಾದ ಹಾನಿಯನ್ನು ನಿಯಂತ್ರಿಸಲು ಜಗಮೆ ತಾಂಧಿರಾಮ್ ಸಿನಿಮಾ ತಯಾರಕರು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ.