ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಇಯರ್ ಎಂಡ್ನಲ್ಲಿ ಕಲರ್ ಪುಲ್ ಫ್ಯಾಷನ್ ಶೋಗಳು ಆಯೋಜನೆಯಾಗುತ್ತಿದೆ. ಈ ಹಿನ್ನಲೆ 'ಫೇಸ್ ಆಪ್ ಸೆಲಬ್ರಿಟಿ ಫ್ಯಾಷನ್ ಶೋ' ಕೂಡಾ ಏರ್ಪಡಿಸಲಾಗಿತ್ತು.
ಬೆಂಗಳೂರಿನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಸ್ಯಾಂಡಲ್ ವುಡ್ ನಟರಾದ ಡಾಲಿ ಧನಂಜಯ್, ಶ್ರೀಲೀಲಾ, ನಿರ್ದೇಶಕರಾದ ಭರ್ಜರಿ ಚೇತನ್ ,ಅಯೋಗ್ಯ ಖ್ಯಾತಿಯ ಮಹೇಶ್ , ನಿರ್ಮಾಪಕರಾದ ಸೂರಪ್ಪ ಬಾಬು ಹಾಗೂ ರಮೇಶ್ ಯಾದವ್ ಭಾಗವಹಿಸಿದ್ದರು. ಜೊತೆಗೆ ಮಾಡೆಲ್ಗಳು ಕೂಡಾ ಕ್ಯಾಟ್ ವಾಕ್ ಮಾಡಿ ಗಮನ ಸೆಳೆದರು. ಇವರೊಂದಿಗೆ ಮಕ್ಕಳು ಹಾಗೂ ಗೃಹಿಣಿಯರು ಕೂಡಾ ವೇದಿಕೆ ಮೇಲೆ ಸೊಂಟ ಬಳುಕಿಸಿ ಕ್ಯಾಟ ವಾಕ್ ಮಾಡಿದರು. ಕೊನೆಗೆ ಒತ್ತಾಯದ ಮೇರೆಗೆ ಧನಂಜಯ್, ಶ್ರೀಲೀಲಾ, ಚೇತನ್ ಹಾಗೂ ಮಹೇಶ್ ಕೂಡಾ ಕ್ಯಾಟ್ ವಾಕ್ ಮಾಡಿ ಗಮನ ಸೆಳೆದರು.