ETV Bharat / sitara

ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನ ಅಭಿಮಾನಿಗಳಿಗೆ ಅರ್ಪಿಸಿದ ಡೈನಾಮಿಕ್ ಸ್ಟಾರ್​ ದೇವರಾಜ್​

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಈ ವರ್ಷ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ 66 ಸಾಧಕರನ್ನು ಆಯ್ಕೆ ಮಾಡಲಾಗಿದೆ. ನಟ ದೇವರಾಜ್​ಗೆ ಕೂಡ ಈ ಬಾರಿ ಪ್ರಶಸ್ತಿ ಲಭಿಸಿದ್ದು, ಈ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನ ಅವರು ಅಭಿಮಾನಿಗಳಿಗೆ ಸಮರ್ಪಿಸಿದ್ದಾರೆ.

ದೇವರಾಜ್
ದೇವರಾಜ್
author img

By

Published : Nov 1, 2021, 10:28 AM IST

ಕಳೆದ ಮೂರು ದಶಕಗಳಿಂದ ಕನ್ನಡ, ತೆಲುಗು ಹಾಗು ತಮಿಳು ಚಿತ್ರಗಳಲ್ಲಿ ಅಭಿನಯಿಸಿ ಬೆಳ್ಳಿ ತೆರೆ ಮೇಲೆ ನಟ, ಖಳ ನಟನಾಗಿ ಮಿಂಚಿದ ದೇವರಾಜ್ ಅವರ ಕಲಾಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನ ಘೋಷಿಸಿದೆ.

ಈ ಕುರಿತು 'ಈಟಿವಿ ಭಾರತ' ಜೊತೆ ಮಾತನಾಡಿದ ಡೈನಾಮಿಕ್​ ಸ್ಟಾರ್​ ದೇವರಾಜ್, ಪ್ರಶಸ್ತಿ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ನಾನು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದರೂ ಕೂಡ ಅಭಿಮಾನಿಗಳು ನನ್ನನ್ನ ಡೈನಾಮಿಕ್ ಸ್ಟಾರ್ ಅಂತಲೇ ಕರೆಯುತ್ತಾರೆ. ರಾಜ್ಯ ಸರ್ಕಾರ ಕೊಟ್ಟಿರುವ ಈ ಪ್ರಶಸ್ತಿಯನ್ನ ‌ನನ್ನ ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ಸಿನಿಮಾ ರಂಗಕ್ಕೆ ಒಂದೇ ಪ್ರಶಸ್ತಿ ಬಂದಿರುವುದಕ್ಕೆ ಸ್ವಲ್ಪ ಬೇಸರವಾಯಿತು. ಬೇರೆ ಬೇರೆ ಕ್ಷೇತ್ರಕ್ಕೆ ಎರಡು, ಮೂರು ಪ್ರಶಸ್ತಿಗಳು ಬಂದಿವೆ. ಮುಂದಿನ ದಿನಗಳಲ್ಲಿ ನಮ್ಮ ಸಿನಿಮಾ ಕ್ಷೇತ್ರಕ್ಕೆ ಕೂಡ ಹೆಚ್ಚಿನ ಪ್ರಶಸ್ತಿ ನೀಡಿ ಎಂದು ಮನವಿ ಮಾಡಿದರು.

ದೇವರಾಜ್ ಕುಟುಂಬ
ದೇವರಾಜ್ ಕುಟುಂಬ

ದೇವರಾಜ್ ಅವರು ಸಿನಿಮಾ ರಂಗಕ್ಕೆ ಬರಲು ಮುಖ್ಯ ಕಾರಣ ಕರಾಟೆ ಕಿಂಗ್ ಶಂಕರ್ ನಾಗ್. ಹೌದು, ಸ್ಪಂದನ ರಂಗ ತಂಡದಲ್ಲಿದ್ದ ದೇವರಾಜ್, ಬಳಿಕ ಶಂಕರನಾಗ್‌ ಅವರ ಸಂಕೇತ್‌ ಕಲಾತಂಡವನ್ನ ಸೇರಿಕೊಂಡರು. ಹೆಚ್‌ಎಂಟಿಯಲ್ಲಿ ಉದ್ಯೋಗಿಯಾಗಿದ್ದ ದೇವರಾಜ್‌ ಅವರು 'ತ್ರಿಶೂಲ' ಚಿತ್ರದ ಮೂಲಕ ಖಳನಟರಾಗಿ ಬೆಳ್ಳಿ ಪರದೆಗೆ ಎಂಟ್ರಿ ಪಡೆದರು. ಆದರೆ ದೇವರಾಜ್‌ ನಟನೆಯಲ್ಲಿ ಬಿಡುಗಡೆಯಾದ ಪ್ರಥಮ ಚಿತ್ರ ' 27 ಮಾವಳ್ಳಿ ಸರ್ಕಲ್‌'. ಇದು 1986ರಲ್ಲಿ ತೆರೆಗೆ ಬಂತು.

1980ರ ದಶಕದಲ್ಲಿ ದೇವರಾಜ್‌ ಅವರು ಕನ್ನಡ ಸಿನಿರಸಿಕರ ಪಾಲಿನ ನೆಚ್ಚಿನ ಖಳನಟರಾದರು. 1990 ರಲ್ಲಿ ಖಳ ನಟನ ಪಾತ್ರದಿಂದ ನಾಯಕ ನಟನ ಪಾತ್ರಕ್ಕೆ ಬಡ್ತಿ ಸಿಕ್ಕಿತು. 'ಹತ್ಯಾಕಾಂಡ' ಎಂಬ ಚಿತ್ರದಲ್ಲಿ ಪ್ರಪ್ರಥಮ ಬಾರಿಗೆ ನಾಯಕನಾಗಿ ಕಾಣಿಸಿಕೊಂಡರು. ಡೈನಾಮಿಕ್ ಸ್ಟಾರ್ ಆರಂಭದಲ್ಲಿ ವಿಲನ್​ ಪಾತ್ರಗಳಲ್ಲಿ ಮಿಂಚತೊಡಗಿದರು. ಇದರ ಜೊತೆಗೆ ಪೊಲೀಸ್‌ ಪಾತ್ರಗಳು ಸಹ ಅವರನ್ನು ಹುಡುಕಿಕೊಂಡು ಬರಲಾರಂಭಿಸಿದವು.

'ಲಾಕಪ್‌ಡೆತ್‌', 'ಗೋಲಿಬಾರ್‌', 'ಗ್ಯಾಂಗ್‌ ಲೀಡರ್‌', 'ಸರ್ಕಲ್‌ ಇನ್‌ಸ್ಪೆಕ್ಟರ್‌' ಸಿನಿಮಾಗಳು ದೇವರಾಜ್‌ ಅವರಿಗೆ ಹೆಸರು ತಂದುಕೊಟ್ಟವಲ್ಲದೇ, ಅಭಿಮಾನಿ ಬಳಗ ಸೃಷ್ಟಿಯಾಗಲು ಕಾರಣವಾದವು. 'ವೀರಪ್ಪನ್‌' ಚಿತ್ರದ ನಟನೆಗಾಗಿ ದೇವರಾಜ್‌ ಆವರಿಗೆ ಆ ಸಾಲಿನ ಉತ್ತಮ ನಟ ರಾಜ್ಯಪ್ರಶಸ್ತಿ ಕೂಡ ಒಲಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.