ಪ್ರಿಯಾಂಕ ಉಪೇಂದ್ರ ಹಾಗೂ ಐಶ್ವರ್ಯ ಉಪೇಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ದೇವಕಿ' ಸಿನಿಮಾ ಇದೇ ಶುಕ್ರವಾರ ತೆರೆ ಕಾಣುತ್ತಿದೆ. ಇಂದು ರಾಜಾಜಿನಗರದ ಪಿವಿಆರ್ನಲ್ಲಿ ಚಿತ್ರದ ಪ್ರೀಮಿಯರ್ ಶೋ ಏರ್ಪಡಿಸಲಾಗಿದೆ.
ಸಿನಿಮಾ ಬಿಡುಗಡೆಗೆ ಎರಡು ದಿನಗಳ ಮೊದಲೇ ಸಿ.ಎಸ್. ಸಿನಿಮಾಸ್ ಹಾಗೂ ರುಬಿನ್ ರಾಜ್ ಪ್ರೊಡಕ್ಷನ್ ಸೇರಿ ರೆಡ್ ಕಾರ್ಪೆಟ್ ಹಾಸಿ ಸೆಲಬ್ರಿಟಿಗಳನ್ನು ಬರಮಾಡಿಕೊಳ್ಳುತ್ತಿದೆ. ಈ ಚಿತ್ರದ ಮೂಲಕ ಉಪೇಂದ್ರ ಪುತ್ರಿ ಐಶ್ವರ್ಯ ಉಪೇಂದ್ರ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ‘ಮಮ್ಮಿ...ಸೇವ್ ಮಿ’ ನಂತರ ನಿರ್ದೇಶಕ ಲೋಹಿತ್ ಈ ಸಿನಿಮಾ ನಿರ್ದೇಶಿಸಿದ್ದಾರೆ. ಮಕ್ಕಳ ಅಪಹರಣ, ತಾಯಿ ಮಗಳ ಹುಡುಕಾಟ, ಮೊಬೈಲ್ನೊಂದಿಗೆ ಲೋಕವವನ್ನೇ ಮರೆಯುವವರ ಬಗ್ಗೆ ಕೂಡಾ ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಕೋಲ್ಕತ್ತಾದ ಹೌರಾ ಬ್ರಿಡ್ಜ್ ಹಾಗೂ ಸುತ್ತ ಮುತ್ತ ಮಾಡಲಾಗಿದೆ. ರವೀಶ್ ಆರ್.ಸಿ ಹಾಗೂ ಅಕ್ಷಯ್ ಸಿ.ಎಸ್. ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಇಂದು ಸಂಜೆ 6.15ಕ್ಕೆ ಏರ್ಪಡಿಸಲಾಗಿರುವ ಪ್ರಿಮಿಯರ್ ಶೋಗೆ ಕ್ರೇಜಿಸ್ಟಾರ್ ರವಿಚಂದ್ರನ್, ಉಪೇಂದ್ರ, ರಾಜೇಂದ್ರ ಸಿಂಗ್ ಬಾಬು, ಸುನಿಲ್ ಕುಮಾರ್ ದೇಸಾಯಿ, ಶಶಾಂಕ್, ಕವಿತಾ ಲಂಕೇಶ್, ದಯಾಳ್ ಪದ್ಮನಾಭನ್, ಗುರುಕಿರಣ್, ತಾರಾ ವೇಣು, ವಿಜಯ ರಾಘವೇಂದ್ರ, ರಾಗಿಣಿ ದ್ವಿವೇದಿ, ಸುಧಾರಾಣಿ, ಮಯೂರಿ, ರಮೇಶ್ ಅರವಿಂದ್, ಪಾರೂಲ್ ಯಾದವ್, ಸೋನು ಗೌಡ, ನೇಹ ಸಕ್ಸೇನಾ, ಸಂಚಾರಿ ವಿಜಯ್, ಹರ್ಷಿಕಾ ಪೂಣಚ್ಚ ಹಾಗೂ ಇನ್ನಿತರರು ಬರಲಿದ್ದಾರೆ.