ಚೆನ್ನೈ: ನಟ ವಿಜಯ್ ಸೇತುಪತಿ ಅವರ ಅಭಿಮಾನಿ ಮತ್ತು ಮ್ಯಾನೇಜರ್ ಮಧ್ಯೆ ನಡೆದ ಹೊಡೆದಾಟ ವಿಚಾರಕ್ಕೆ ಸಂಬಂಧಪಟ್ಟಂತೆ ನಟನ ವಿರುದ್ಧ ಇಲ್ಲಿನ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಹೂಡಲಾಗಿದೆ.
ಸೈತಾಪೇಟೆಯ ಮಹಾಗಾಂಧಿ ಎಂಬುವವರು ನಟ ವಿಜಯ್ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ನಾನು ಈ ಹಿಂದೆ ನಟ ವಿಜಯ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿದ್ದೆ. ಈ ವೇಳೆ ನಟ ವಿಜಯ್ ಸಾಧನೆಗಾಗಿ ಅವರನ್ನು ಶ್ಲಾಘಿಸಿದೆ. ಆದರೆ, ಅವರು ನನ್ನ ಮೆಚ್ಚುಗೆಯನ್ನು ತಿರಸ್ಕರಿಸಿದರು. ಅಲ್ಲದೇ, ಸಾರ್ವಜನಿಕವಾಗಿ ನನ್ನನ್ನು ನಿಂದಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಡುಮ್ಮಿಯಲ್ಲಮ್ಮಿ ಬಳುಕೋ ಬಳ್ಳಿಗೂ ಇಲ್ಲ ಕಮ್ಮಿ.. 3 ತಿಂಗಳಲ್ಲಿ 20 ಕೆಜಿ ಇಳಿಸಿಕೊಂಡು ಅರಳಿದ 'ಖುಷ್ಬೂ'
ಬಳಿಕ ವಿಜಯ್ ಸೇತುಪತಿ ಅವರ ಮ್ಯಾನೇಜರ್ ನನ್ನ ಮೇಲೆ ಏಕಾಏಕಿ ಹಲ್ಲೆ ಮಾಡಿದರು. ಈ ವೇಳೆ ನನ್ನ ಕಿವಿಗಳಿಗೆ ಹಾನಿಯಾಗಿದೆ. ಇದರಿಂದ ನನ್ನ ಶ್ರವಣ ಸಾಮರ್ಥ್ಯ ಕ್ಷೀಣಿಸಿದೆ. ಘಟನೆಯ ಮರುದಿನ ನಟ ಸೇತುಪತಿ ಮ್ಯಾನೇಜರ್ ಜಾನ್ಸನ್ ಮೇಲೆ ನಾನೇ ಹಲ್ಲೆ ಮಾಡಿದೆ ಎಂದು ಸುಳ್ಳು ಸುದ್ದಿ ಹರಡಿದ್ದಾರೆ. ಇದು ಅಪರಾಧ ಕೃತ್ಯವಾಗಿದೆ. ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ದೂರುದಾರ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.