ಮುಂಬೈ: ದೇಶವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಎದುರಿಸಲು ಸಹಾಯ ಮಾಡುವುದಾಗಿ ಹೇಳಿರುವ ಬಾಲಿವುಡ್ನ ದೀಪಿಕಾ-ರಣ್ವೀರ್ ದಂಪತಿ ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.
![Deepika, Ranveer pledge support to PM-CARES](https://etvbharatimages.akamaized.net/etvbharat/prod-images/6656805_deepvir.jpg)
ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಪಿಎಂ ಕೇರ್ಸ್ ನಿಧಿಗೆ ನಾವಿಬ್ಬರೂ ದೇಣಿಗೆ ನೀಡುವುದಾಗಿ ಪ್ರತಿಜ್ಞೆ ಮಾಡುತ್ತಿದ್ದೇವೆ. ನೀವೂ ಕೂಡಾ ಕೊರೊನಾ ನಿಯಂತ್ರಿಸಲು ಕೈ ಜೋಡಿಸಿ ಎಂದು ತಿಳಿಸಿದ್ದಾರೆ.