ETV Bharat / sitara

ಕಳರಿಪಯಟ್ಟು ಆಧರಿಸಿ ತಯಾರಾದ 'ದೇಹಿ' ಆಡಿಯೋ ಬಿಡುಗಡೆ

author img

By

Published : Jan 14, 2020, 8:04 PM IST

ಪ್ರಸ್ತುತ ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆ ಕಳರಿಪಯಟ್ಟಿನ ಮೂಲಕ ಹೇಗೆ ಸಮಸ್ಯೆ ಬಗೆಹರಿಸಿಕೊಳ್ಳುತ್ತಾಳೆ ಎಂಬುದನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನಕ್ಕೆ ನಿರ್ದೇಶಕ ಧನಶೇಖರನ್ ಪ್ರಯತ್ನ ಪಟ್ಟಿದ್ದಾರೆ.

Deehi audio release
'ದೇಹಿ' ಆಡಿಯೋ ಬಿಡುಗಡೆ

ಕಳರಿಪಯಟ್ಟು ಕಲೆಯನ್ನು ಆಧರಿಸಿ ನಿರ್ಮಿಸಿರುವ 'ದೇಹಿ' ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಕಲಾವಿದರ ಸಂಘದಲ್ಲಿ ನಡೆದ ಕಲರ್ ಪುಲ್ ಕಾರ್ಯಕ್ರಮದಲ್ಲಿ ಚಿತ್ರದ ಆಡಿಯೋವನ್ನು ನಟ ವಿಜಯ ರಾಘವೇಂದ್ರ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

'ದೇಹಿ' ಆಡಿಯೋ ಬಿಡುಗಡೆ ಸಮಾರಂಭ

ಬೆಂಗಳೂರಿನ ಚಿಕ್ಕ ಗುಬ್ಬಿಯಲ್ಲಿರುವ ಕಳರಿ ಗುರುಕುಲದ ವಿದ್ಯಾರ್ಥಿಗಳು ಕ್ರೌಡ್ ಫಂಡಿಂಗ್ ಸಂಗ್ರಹಿಸುವ ಮೂಲಕ ಚಿತ್ರವನ್ನು ನಿರ್ಮಾಣ ಮಾಡಿರುವುದು ವಿಶೇಷವಾಗಿದೆ. ಚಿತ್ರದಲ್ಲಿ ಗುರುಕುಲಂ ವಿದ್ಯಾರ್ಥಿನಿ ಉಪಾಸನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಳರಿಪಯಟ್ಟು ಹೇಳಿಕೊಡುವ ಗುರು ಪಾತ್ರದಲ್ಲಿ ಖಳನಟ ಕಿಶೋರ್ ನಟಿಸಿದ್ದಾರೆ. ಕಳರಿಪಯಟ್ಟು ಕೇವಲ ಒಂದು ಕಲೆಯಲ್ಲ ಅದು ದೇಹ ಮತ್ತು ಮನಸ್ಸಿನ ನಡುವೆ ಸಮತೋಲನ ಕಾಪಾಡಿಕೊಳ್ಳುವಲ್ಲಿ ತುಂಬಾ ಸಹಕಾರಿಯಾಗಿದೆ. ಪ್ರಸ್ತುತ ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆ ಕಳರಿಪಯಟ್ಟಿನ ಮೂಲಕ ಹೇಗೆ ಸಮಸ್ಯೆ ಬಗೆಹರಿಸಿಕೊಳ್ಳುತ್ತಾಳೆ ಎಂಬುದನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನಕ್ಕೆ ನಿರ್ದೇಶಕ ಧನಶೇಖರನ್ ಪ್ರಯತ್ನ ಪಟ್ಟಿದ್ದಾರೆ.

Deehi audio released
'ದೇಹಿ' ಆಡಿಯೋ ಬಿಡುಗಡೆ ಮಾಡಿದ ವಿಜಯ ರಾಘವೇಂದ್ರ

ಚಿತ್ರದಲ್ಲಿ ರಂಜನ್ ಮುಲ್ಲಾರತ್ ಎಂಬುವವರು ಕಳರಿಪಟ್ಟು ಕಲೆಯನ್ನು ಕೊರಿಯೋಗ್ರಫಿ ಮಾಡಿದ್ದಾರೆ. ಈಗಾಗಲೇ 'ದೇಹಿ' ಸಿನಿಮಾ ಶೂಟಿಂಗ್ ಮುಗಿದಿದ್ದು ಹಂಪಿ ಬೇಲೂರು ಹಾಗೂ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ನೊಬಿನ್ ಪೌಲ್ ಸಂಗೀತ ನೀಡಿದ್ದು ಒಂದು ಹಾಡು ಹಾಗೂ ಮೂರು ಬಿಟ್ ಹಾಡುಗಳಿವೆ ಎಂದು ಸಂಗೀತ ನಿರ್ದೇಶಕ ನೊಬಿನ್ ಹೇಳಿದ್ದಾರೆ. ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಕಿಶೋರ್​​ ಹಾಗೂ ನಿರ್ದೇಶಕ ಧನಶೇಖರನ್ ಕಾರಣಾಂತರಗಳಿಂದ ಹಾಜರಾಗಿರಲಿಲ್ಲ.

Intro:ಕಳರಿ ಪಟ್ಟು ಕಲೆಯನ್ನು ಆಧರಿಸಿ ನಿರ್ಮಿಸಿರುವ " ದೇಹಿ" ಚಿತ್ರದ ಆಡಿಯೋ ಬಿಡುಗಡೆಯಾಗಿದೆ.ಕಲಾವಿದರ ಸಂಘದಲ್ಲಿ ನಡೆಯ ಕಲರ್ ಪುಲ್ ಕಾರ್ಯಕ್ರಮದಲ್ಲಿ ಚಿತ್ರದ
ಆಡಿಯೋವನ್ನು ಚಿನಾರಿ ಮುತ್ತ ವಿಜಯ್ ರಾಘವೇಂದ್ರ ಬಿಡುಗಡೆಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ರು. ಇನ್ನು ಈ ಚಿತ್ರವನ್ನು ಬೆಂಗಳೂರಿನ ಚಿಕ್ಕ ಗುಬ್ಬಿ ಯಲ್ಲಿರುವ ಕಳರಿ ಗುರುಕುಲದ ವಿದ್ಯಾರ್ಥಿಗಳು ಕ್ರೌಡ್ ಫಂಡಿಂಗ್ ಸಂಗ್ರಹಿಸುವ ಮೂಲಕ ಚಿತ್ರವನ್ನು ನಿರ್ಮಾಣ ಮಾಡಿರುವುದು ವಿಶೇಷವಾಗಿದೆ.

Body:ಅಲ್ಲದೆ ಈ ಚಿತ್ರದಲ್ಲಿ ಕಳರಿ ಗುರುಕುಲಂ ವಿದ್ಯಾರ್ಥಿನಿ ಉಪಾಸನಾ ಪ್ರಮುಖ ಪಾತ್ರ ನಿರ್ವಹಿಸಿದ್ದು, ಕಳರಿ ಪಟ್ಟು ಕಲಿಸುವ ಗುರುವಿನ ಪಾತ್ರದಲ್ಲಿ ಖಳನಟ ಕಿಶೋರ್ ನಟಿಸಿದ್ದಾರೆ. ಕಲರಿಪಟ್ಟು ಕೇವಲ ಒಂದು ಕಲೆಯಲ್ಲ ಅದು ದೇಹ ಮತ್ತು ಮನಸ್ಸನ ನಡುವೆ ಸಮತೋಲನ ಕಾಪಾಡಿಕೊಳ್ಳುವಲ್ಲಿ ತುಂಬಾ ಸಹಕಾರಿಯಾಗಿದೆ. ಪ್ರಸ್ತುತ ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆ ಕಳರಿ ಪಟ್ಟಿನ ಮೂಲಕ ಹೇಗೆ ಸಮಸ್ಯೆ ಬಗೆಹರಿಸಿಕೊಳ್ಳುತ್ತಾಳೆ ಎಂಬುದನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನಕ್ಕೆ ನಿರ್ದೇಶಕ ಧನ ಶೇಖರನ್ ಪ್ರಯತ್ನಪಟ್ಟಿದ್ದಾರೆ.ಅಲ್ಲದೆ ಚಿತ್ರದಲ್ಲಿ ಕಳರಿ ಕಲೆಯನ್ನು ರಂಜನ್ ಮುಲ್ಲಾರತ್ ಡೈರೆಕ್ಷನ್ ಮಾಡಿದ್ದು,

Conclusion:ಇನ್ನು ಈಗಾಗಲೇ ದೇಹಿ ಚಿತ್ರ ಸಂಪೂರ್ಣ ಶೂಟಿಂಗ್ ಕಂಪ್ಲೀಟ್ ಆಗಿದ್ದು ಹಂಪಿ ಬೇಲೂರು ಹಾಗೂ ಬೆಂಗಳೂರಿನ ಸುತ್ತಮುತ್ತ ಚಿತ್ರದ ಚಿತ್ರೀಕರಣ ಮಾಡಿದ್ದು ಚಿತ್ರತಂಡದಲ್ಲಿ ಬಿಸಿಯಾಗಿದೆ.
ದೇಹಿ ಚಿತ್ರಕ್ಕೆ ನೊಬಿನ್ ಪೌಲ್ ಸಂಗೀತ ನೀಡಿದ್ದು.ಚಿತ್ರದಲ್ಲಿ ಒಂದು ಸಾಂಗ್ ಇದ್ದು ಮೂರ್ ಬಿಟ್ ಸಾಂಗ್ ಗಳಿವೆ ಎಂದು ಚಿತ್ರದ ಸಂಗೀತದ ಬಗ್ಗೆ ನೊಬಿನ್ ಹೇಳಿದ್ರು.ಇನ್ನು ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಕಿಶೋರ್ ಹಾಗೂ ನಿರ್ದೇಶಕ ಧನಶೇಖರನ್ ಗೈರಾಗಿದ್ದು ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತು

ಸತೀಶ ಎಂಬಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.