ಕಾಡು ಪ್ರಾಣಿಗಳ ಮೇಲೆ ಆಗಿಂದಾಗ್ಗೆ ಒಂದಲ್ಲ ಒಂದು ರೀತಿಯಲ್ಲಿ ಹಿಂಸೆ ನಡೆಯುತ್ತಲೇ ಇವೆ. ಕಳೆದ ವರ್ಷ ಕೇರಳದಲ್ಲಿ ಸ್ಫೋಟಕವನ್ನಿಟ್ಟು ಕಿಡಿಗೇಡಿಗಳು ಗರ್ಭಿಣಿ ಆನೆಯೊಂದನ್ನು ಕೊಂದಿದ್ದರು. ಇದರ ನೋವು ಮಾಸುವ ಮುನ್ನವೇ ತಮಿಳುನಾಡಿನಲ್ಲಿ ಒಂಟಿ ಸಲಗಕ್ಕೆ ಬೆಂಕಿ ಹಚ್ಚಿ ಕೊಂದಿರುವ ಘಟನೆ ನಡೆದಿದೆ.
![ರಮ್ಯಾ](https://etvbharatimages.akamaized.net/etvbharat/prod-images/10360296_thumb.jpg)
ಈ ಬಗ್ಗೆ ದೇಶಾದ್ಯಂತ ವ್ಯಾಪಕವಾಗಿ ಖಂಡನೆ ವ್ಯಕ್ತವಾಗುತ್ತಿದೆ. ಅಲ್ಲದೆ ಆನೆಯು ಬೆಂಕಿಯಿಂದ ನರಳಿದ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇದೇ ಹಿನ್ನೆಲೆಯಲ್ಲಿ ಸ್ಯಾಂಡಲ್ವುಡ್ ನಟಿ ಹಾಗೂ ರಾಜಕಾರಿಣಿ ರಮ್ಯಾ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
![ರಮ್ಯಾ](https://etvbharatimages.akamaized.net/etvbharat/prod-images/10360296_thumb76.jpg)
ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಬರೆದಿರುವ ನಟಿ ರಮ್ಯಾ ಏಕೆ? ಏಕೆ? ಏಕೆ? ಏಕೆ ?ನಾವು ಇಷ್ಟೊಂದು ಕ್ರೂರಿಗಳಾಗಬೇಕು. ದಯೆ ಮತ್ತು ಕರುಣೆ ಇಂದು ಇರಲು ಸಾಧ್ಯವಿಲ್ಲವೇ. ಭೂಮಿಯು ಪ್ರತಿಯೊಬ್ಬ ಜೀವಿಗೂ ಸೇರಿದೆ. ಶಾಂತಿಯುತವಾಗಿ ಸಹಬಾಳ್ವೆ ನಡೆಸಲು ನಾವು ಯಾವಾಗ ಕಲಿಯುತ್ತೇವೆ. ಮಾನವರು ಈ ಭೂಮಿ ಮೇಲೆ ಇರುವ ಕೆಚ್ಚ ಜೀವಿಗಳು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : Watch:ಆಹಾರ ಅರಸಿ ಬಂದ ಗಜರಾಜನಿಗೆ ಬೆಂಕಿ ಹಚ್ಚಿದ ಮನುಜ; ನೋವಿನ ಘೀಳು ಕಲ್ಲು ಹೃದಯವ ಕರಗಿಸದಿರದು!
ಸದ್ಯ ರಮ್ಯಾ ನಟನೆಯಿಂದ ಹಾಗೂ ರಾಜಕೀಯದಿಂದ ಕೊಂಚ ದೂರವೇ ಉಳಿದಿದ್ದಾರೆ. ರಮ್ಯಾ ನಟಿಸಿದ ಕೊನೆಯ ಸಿನಿಮಾ ದಿಲ್ ಕಾ ರಾಜ. ಅದಕ್ಕೂ ಮುಂಚೆ ನಾಗರಹಾವು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು.
![ರಮ್ಯಾ](https://etvbharatimages.akamaized.net/etvbharat/prod-images/10360296_thumb2.jpg)