ಏನಾದರೂ ಮಾಡುತಿರು ತಮ್ಮ, ಅದು ಎಲ್ಲರಿಗೂ ಉಪಯೋಗ ಆಗುವ ರೀತಿ ಎನ್ನುವ ಪಾಲಿಸಿಯನ್ನು ಅನುಸರಿಸಿಕೊಂಡಿರುವ ನಿರ್ದೇಶಕ ದಯಾಳ್ ಪದ್ಮನಾಭನ್ ಕೊರೊನಾ ಲಾಕ್ ಡೌನ್‌ಅನ್ನು ಸದುಪಯೋಗ ಮಾಡಿಕೊಂಡಿದ್ದಾರೆ. ಸಿನಿಮಾ ಮಾಡಲು ಮೂರು ಕಥೆಗಳನ್ನು ಸಿದ್ಧಪಡಿಸಿದ್ದು, ಅವೆಲ್ಲವನ್ನು ಸ್ಕ್ರಿಪ್ಟ್ ರೈಟರ್ ಅಸೋಸಿಯೇಶನ್ ಮುಂಬೈನಲ್ಲಿ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ.
ಮೊದಲ ಸಿನಿಮಾಗೆ ‘ವಾರ್ ವಿತಿನ್’ ಎಂದು ನಾಮಕರಣ ಮಾಡಿದ್ದಾರೆ. ಎರಡನೆಯದು ‘ಮಾರುತಿ ನಗರ ಪೊಲೀಸ್ ಸ್ಟೇಷನ್’ ಕ್ರೈಂ ಥ್ರಿಲ್ಲರ್ ಕಥಾ ವಸ್ತು. ಮೂರನೇ ಕಥೆ ‘ಮಾಯಾವತಿ’. ಈ ಸಿನಿಮಾ ಬಹಳ ಭಾವನಾತ್ಮಕವಾದ ಕಥಾ ವಸ್ತುವನ್ನು ಹೊಂದಿದೆ. ಅಲ್ಲದೆ ಕನ್ನಡ ಚಿತ್ರ ರಂಗದಲ್ಲಿ ಹೊಸ ಪ್ರಯೋಗ ಅಂತಾರೆ ದಯಾಳ್.
ಇದರ ಜೊತೆಗೆ ತೆಲುಗಿನ ಹೆಸರಾಂತ ಬ್ಯಾನರ್‌ನಲ್ಲೂ ಕೆಲಸ ಮಾಡಲು ಅರವಿಂದ್ ಅವರ ಜೊತೆ ಮಾತು ಕಥೆ ಆಗಿದೆಯಂತೆ. ನಿರ್ದೇಶಕ ದಯಾಳ್ ಪದ್ಮನಾಭನ್ ‘ಆ ಕರಾಳ ರಾತ್ರಿ’ ಸಿನಿಮಾವನ್ನು ತೆಲುಗಿನಲ್ಲಿ ರಿಮೇಕ್ ಮಾಡಲು ಸಜ್ಜಾಗಿದ್ದಾರೆ. ತೆಲುಗು ನೇಟಿವಿಟಿ ಗಮನದಲ್ಲಿಟ್ಟುಕೊಂಡು ಚಿತ್ರಕಥೆಗೆ ಮರುರೂಪ ಕೊಟ್ಟಿದ್ದಾರೆ.
ಇವರ ನಿರ್ದೇಶನದ ‘ಒಂಬತ್ತನೇ ದಿಕ್ಕು’ ಚಿತ್ರ ಸೆನ್ಸಾರ್ಗೆ ಹೋಗಲು ಸಿದ್ದವಾಗಿದೆ. ಆದ್ರೆ ಲಾಕ್ ಡೌನ್ ಮುಗಿದ ನಂತರವಷ್ಟೇ ಈ ಎಲ್ಲಾ ಸಿನಿಮಾಗಳ ಕೆಲಸ ಆರಂಭವಾಗಲಿದೆ.