ETV Bharat / sitara

ದಯಾಳ್ ಪದ್ಮನಾಭನ್ ನಿರ್ದೇಶನದ 'ರಂಗನಾಯಕಿ' ಚಿತ್ರದ ಟ್ರೇಲರ್ ಬಿಡುಗಡೆ - ರಂಗನಾಯಕಿ

ಮಹಿಳಾ ಪ್ರಧಾನ 'ರಂಗನಾಯಕಿ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ದಯಾಳ್ ಪದ್ಮನಾಭನ್ ಈ ಸಿನಿಮಾವನ್ನು ನಿರ್ದೇಶಿಸಿದ್ದು ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎಸ್​​.ವಿ. ನಾರಾಯಣ್ ಈ ಸಿನಿಮಾವನ್ನು ನಿರ್ಮಿಸಿದ್ದು ಅಕ್ಟೋಬರ್​​​ನಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.

'ರಂಗನಾಯಕಿ'
author img

By

Published : Sep 4, 2019, 11:28 AM IST

ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಅದಿತಿ ಪ್ರಭುದೇವ ನಟಿಸಿರುವ 'ರಂಗನಾಯಕಿ' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ನಿನ್ನೆ ಮಲ್ಲೇಶ್ವರಂ ಐನಾಕ್ಸ್​​​​​​​​​​​​ನಲ್ಲಿ ನಡೆದ ಸರಳ ಸಮಾರಂಭಕ್ಕೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಹಿರಿಯ ನಟಿ ತಾರಾ ಆಗಮಿಸಿ ಚಿತ್ರದ ಟ್ರೇಲರ್​​​​​​​​​​ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

'ರಂಗನಾಯಕಿ' ಟ್ರೇಲರ್ ಬಿಡುಗಡೆಗೊಳಿಸಿದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್

ಸಿನಿಮಾಗೆ ಈಗಾಗಲೇ ಸೆನ್ಸಾರ್ ಬೋರ್ಡಿನಿಂದ ಯು/ಎ ಸರ್ಟಿಫಿಕೇಟ್ ದೊರೆತಿದೆ. ಇದು ಮಹಿಳಾ ಪ್ರಧಾನ ಕಥೆಯನ್ನೊಂದಿದ್ದು ದೆಹಲಿ ನಿರ್ಭಯ ಅತ್ಯಾಚಾರ ಪ್ರಕರಣ ಆಧಾರಿತ ಸಿನಿಮಾವಾಗಿದೆ. ಚಿತ್ರದಲ್ಲಿ ಯಾವುದೇ ರೀತಿಯ ವಲ್ಗರ್ ಇರುವುದಿಲ್ಲ, ಕುಟುಂಬ ಸಮೇತ ಬಂದು ಈ ಚಿತ್ರವನ್ನು ನೋಡಬಹುದು ಎಂದು ನಿರ್ದೇಶಕ ದಯಾಳ್ ಪದ್ಮನಾಭನ್ ಹೇಳಿದ್ದಾರೆ. ನಂತರ ಮಾತನಾಡಿದ ಅದಿತಿ ಪ್ರಭುದೇವ, 'ನನಗೆ ಒಮ್ಮೆಯಾದರೂ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸಬೇಕೆಂಬ ಕನಸು ಇತ್ತು. ಆದ್ದರಿಂದ ಕಥೆ ಕೇಳಿದ ಕೂಡಲೇ ಒಪ್ಪಿಕೊಂಡೆ. ದಯವಿಟ್ಟು ನಮ್ಮ ಸಿನಿಮಾವನ್ನು ಪ್ರೋತ್ಸಾಹಿಸಿ' ಎಂದು ಮನವಿ ಮಾಡಿಕೊಂಡರು.

ranganayaki
'ರಂಗನಾಯಕಿ' ಟ್ರೇಲರ್ ಬಿಡುಗಡೆ ಸಮಾರಂಭ

ಚಿತ್ರದಲ್ಲಿ ಶ್ರೀನಿವಾಸ ಕಲ್ಯಾಣ ಖ್ಯಾತಿಯ ಶ್ರೀನಿ ಹಾಗೂ ಪದ್ಮಾವತಿ ಧಾರಾವಾಹಿ ಖ್ಯಾತಿಯ ತ್ರಿವಿಕ್ರಮ್ ನಟಿಸಿದ್ದಾರೆ. ಎಸ್​​.ವಿ. ಬ್ಯಾನರ್ ಅಡಿಯಲ್ಲಿ ಎಸ್​​.ವಿ. ನಾರಾಯಣ್ 'ರಂಗನಾಯಕಿ' ಸಿನಿಮಾವನ್ನು ನಿರ್ಮಿಸಿದ್ದಾರೆ. ದಯಾಳ್ ಪದ್ಮನಾಭನ್ ಅವರ 'ಪುಟ 109' ಹಾಗೂ 'ಆ ಕರಾಳ ರಾತ್ರಿ' ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ನಟ ನವೀನ್ ಕೃಷ್ಣ ಈ ಚಿತ್ರಕ್ಕೂ ದಯಾಳ್ ಜೊತೆಯಾಗಿದ್ದಾರೆ. ಚಿತ್ರದ ಹಾಡುಗಳಿಗೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದು ರಾಕೇಶ್ ಛಾಯಾಗ್ರಹಣ ಚಿತ್ರಕ್ಕಿದೆ. ಅಕ್ಟೋಬರ್​​​ನಲ್ಲಿ ಸಿನಿಮಾ ತೆರೆ ಕಾಣಲಿದೆ.

  • " class="align-text-top noRightClick twitterSection" data="">

Intro:ಶಾನೆ ಟಾಪ್ ಆಗಿರೋ ಸುಂದರಿ ಅದಿತಿ ಪ್ರಭುದೇವ್ ಅಭಿನಯದ ದಯಾಳ್ ಪದ್ಮನಾಭ್ ನಿರ್ದೇಶನದ ರಂಗನಾಯಕಿ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ಮಲ್ಲೇಶ್ವರಂ ಐನಾಕ್ಸ್ ನಲ್ಲಿ ನಡೆದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ಮೇಷ್ಟ್ರು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಟಿ ತಾರಾ ಆಗಮಿಸಿ ರಂಗನಾಯಕಿ ಚಿತ್ರದ ಟ್ರೈಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

Body: ರಂಗನಾಯಕಿ ಚಿತ್ರ ಈಗಾಗಲೇ ಸೆನ್ಸಾರ್ ಬೋರ್ಡ್ ನಿಂದ ಯುಎಸ್ ಸರ್ಟಿಫಿಕೇಟ್ ತೆಗೆದುಕೊಂಡಿದ್ದು . ರಂಗನಾಯಕಿ ಚಿತ್ರ ದೆಹಲಿಯ ನಿರ್ಭಯ ಕೆಸ್ ಆಧಾರಿತ ಸಿನಿಮಾವಾಗಿದೆ. ಅಲ್ಲದೆ ರಂಗನಾಯಕಿ ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದ್ದು ಇದರಲ್ಲಿ ಯಾವುದೇ ರೀತಿಯ ವಲ್ಗರ್ ಇರುವುದಿಲ್ಲ ಕುಟುಂಬ ಸಮೇತರಾಗಿ ಈ ಚಿತ್ರವನ್ನು ಬಂದು ಸಿನಿಮಾ ನೋಡಬಹುದಾಗಿದೆ. ಅಲ್ಲದೇ ರಂಗನಾಯಕಿ ಚಿತ್ರವನ್ನು ಅಕ್ಟೋಬರ್ ನಲ್ಲಿ ರಿಲೀಸ್ ಮಾಡುವುದಾಗಿ ನಿರ್ದೇಶಕ ದಯಾಳ್ ಪದ್ಮನಾಭ್ ತಿಳಿಸಿದರು.

Conclusion:ರಂಗನಾಯಕಿ ಚಿತ್ರದಲ್ಲಿ ಪ್ರಧಾನ ಪಾತ್ರ ನಿಭಾಯಿಸಿರುವ ಅಧಿತಿ ಒಮ್ಮೆಯಾದರೂ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸಬೇಕೆಂಬ ಕನಸು ಪ್ರತಿಯೊಬ್ಬ ನಟಿಗೂ ಇರುತ್ತೆ. ಹಾಗಾಗಿ ಈ ಚಿತ್ರದ ಕಥೆಯನ್ನು ಕೇಳಿದ ತಕ್ಷಣ ನಾನು ಅಲ್ಲದೆ ಸಿನಿಮಾ ನೋಡಿದರೆ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ ದಯವಿಟ್ಟು ರಂಗನಾಯಕಿ ಗೆ ಪ್ರೋತ್ಸಾಹಿಸಿ ಹಿಂದೂ ಸಿನಿ ಪ್ರಿಯರಲ್ಲಿ ಮನವಿ ಮಾಡಿಕೊಂಡರು. ಇನ್ನು ರಂಗನಾಯಕಿ ಚಿತ್ರದಲ್ಲಿ ಶ್ರೀನಿವಾಸ ಕಲ್ಯಾಣ ಕ್ಯಾದಿಗೆ ಶ್ರೀನಿ ಹಾಗೂ ಪದ್ಮಾವತಿ ಸೀರಿಯಲ್ ಖ್ಯಾತಿಯ ತ್ರಿವಿಕ್ರಮ್ ಕಾಣಿಸಿದ್ದು ಎಸ್ ವಿ ಬ್ಯಾನರ್ ನಲ್ಲಿ ಎಸ್ ವಿ ನಾರಾಯಣ್ ರಂಗನಾಯಕಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ದಯಾಳ್ ಪದ್ಮನಾಭನ್ ಅವರ ಪುಟ109 ಹಾಗೂ ಆ ಕರಾಳ ರಾತ್ರಿ ಚಿತ್ರದಲ್ಲಿ ಸಂಭಾಷಣೆ ಬರೆದಿದ್ದ ನಟ ನವೀನ್ ಕೃಷ್ಣ ಈ ಚಿತ್ರದಲ್ಲೂ ದಯಾರ ಪದ್ಮನಾಭನ್ ಅವರ ಜೊತೆ ಕಾಣಿಸಿದ್ದು ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ ಮಣಿಕಾಂತ್ ಕದ್ರಿ ಚಿತ್ರಕ್ಕೆ ಸಂಗೀತ ನೀಡಿದ್ದು ರಾಕೇಶ್ ಕ್ಯಾಮೆರಾ ಕಣ್ಣಿನಲ್ಲಿ ರಂಗನಾಯಕಿ ಸೆರೆಯಾಗಿದ್ದು ಮುಂದಿನ ತಿಂಗಳು ರಂಗನಾಯಕಿ ತೆರೆಮೇಲೆ ರಾರಾಜಿಸಲಿದ್ದಾಳೆ.

ಸತೀಶ ಎಂಬಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.