ETV Bharat / sitara

ಹೋಳಿ ಹಬ್ಬ ರಂಗೇರಿಸಿದ  'ಬಸಣ್ಣಿ'...  ಯಜಮಾನ ಹಾಡಿಗೆ ಬೆಣ್ಣೆ ನಗರಿಯಲ್ಲಿ ಡ್ಯಾನ್ಸ್​​ ಝಲಕ್​ ​

ಚಾಲೆಂಜಿಂಗ್ ಸ್ಟಾರ್ ದರ್ಶನ್​ ನಟನೆಯ ಯಜಮಾನ ಚಿತ್ರದ ಎಲ್ಲ ಸಾಂಗ್ಸ್​ ಸೂಪರ್ ಹಿಟ್​​ ಆಗಿವೆ. ಅದರಲ್ಲೂ 'ಬಸಣ್ಣಿ ಬಾ' ಸಾಂಗ್ ಮೇಲೆ ಪಡ್ಡೆ ಹುಡುಗರ ಲವ್ ಸ್ವಲ್ಪ ಜಾಸ್ತಿನೇ.

author img

By

Published : Mar 21, 2019, 5:55 PM IST

ಬಸಣ್ಣಿ ಸಾಂಗ್​ಗೆ ಕುಣಿದ ದಾವಣಗೆರೆ ಜನ

ದಚ್ಚು ಅಭಿಮಾನಿಗಳಷ್ಟೇ ಅಲ್ಲದೇ ಕನ್ನಡ ಸಿನಿಪ್ರಿಯರ ಮೊಬೈಲ್​​ನ​ ಸಾಂಗ್ ಆಲ್ಬಂನಲ್ಲಿ ಬಸಣ್ಣಿ ಮೊದಲ ಸ್ಥಾನದಲ್ಲಿದ್ದಾಳೆ. ನಿತ್ಯ ನಾಲ್ಕಾರು ಬಾರಿಯಾದ್ರು ಬಸಣ್ಣಿನ ನೆನಪಿಸಿಕೊಳ್ಳುತ್ತಿರುತ್ತಾರೆ ದಾಸನ ಹುಡುಗರು. ಇನ್ನು ಯಾವುದೇ ಸಭೆ-ಸಮಾರಂಭಗಳಲ್ಲಂತೂ ಬಸಣ್ಣಿ ಪ್ರತ್ಯಕ್ಷವಾಗುತ್ತಾಳೆ.

  • ದಾವಣಗೆರೆಯಲ್ಲಿ ಇಂದು ನಡೆದ ಹೋಳಿ ಆಚರಣೆಯ ಸಂಭ್ರಮದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬ್ಲಾಕ್ಬಸ್ಟರ್ ಯಜಮಾನ ಚಿತ್ರದ ಬಸಣ್ಣಿ ಹಾಡಿಗೆ ಕುಣಿದು ಕುಪ್ಪಳಿಸಿದ ದಾವಣಗೆರೆ ಜನತೆ 😍@dasadarshan @harimonium @Dbeatsmusik @shylajanag @dinakar219 pic.twitter.com/2a6ctFvXZC

    — CSD FAN'S CLUB ® (@CSD_fansclub) March 21, 2019 " class="align-text-top noRightClick twitterSection" data=" ">

ಇಂದು ಬೆಣ್ಣೆದೋಸೆ ನಗರಿ ದಾವಣಗೆರೆಯಲ್ಲಿ ಕಲರ್​ಫುಲ್ ಹೋಳಿ ಹಬ್ಬ ನಡೆಯಿತು. ಎಲ್ಲರೂ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಈ ಸಡಗರಲ್ಲಿ ದಾವಣಗೆರೆ ಜನರು ಬಸಣ್ಣಿಯ ಆರಾಧನೆ ಮಾಡಿದ್ರು. ಡಿಜೆಯಲ್ಲಿ ಈ ಸಾಂಗ್ ಪ್ಲೇ ಮಾಡಿ ಸಖತ್ ಸ್ಟೆಪ್ ಹಾಕಿದ್ರು. ಒಂದೇ ಕಡೆ ನೆರೆದಿದ್ದ ಸಾವಿರಾರು ಜನರು ಬಸಣ್ಣಿ ಬಾ ಸಾಂಗ್​ಗೆ ಕೇಕೆ ಹಾಕಿ ಕುಣಿದು ಕುಪ್ಪಳಿಸಿದರು. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.