ETV Bharat / sitara

ಕೆಂಪೇಗೌಡ-2 ಬಿಡುಗಡೆಗೆ ದಿನಾಂಕ ಫಿಕ್ಸ್... ಕೋಮಲ್​ಗೆ ಅದೃಷ್ಟ ಪರೀಕ್ಷೆ

author img

By

Published : Jul 19, 2019, 11:56 AM IST

ಕೋಮಲ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಕೆಂಪೇಗೌಡ-2 ಸಿನಿಮಾ ಆಗಸ್ಟ್​ 9 ರಂದು ಬಿಡುಗಡೆಯಾಗುತ್ತಿದೆ. ಸುಮಾರು 4 ವರ್ಷಗಳ ಗ್ಯಾಪ್ ನಂತರ ಕೋಮಲ್ ಇದೀಗ ಕೋಮಲ್ ಕುಮಾರ್ ಆಗಿ ಈ ಸಿನಿಮಾ ಮೂಲಕ ಸ್ಯಾಂಡಲ್​​ವುಡ್​​​​ಗೆ ವಾಪಸಾಗಿದ್ದಾರೆ.

ಕೆಂಪೇಗೌಡ-2

ನಾಲ್ಕು ವರ್ಷಗಳ ಗ್ಯಾಪ್ ನಂತರ ಕೋಮಲ್ ಕುಮಾರ್ ಕಮ್​ ಬ್ಯಾಕ್ ಕೆಂಪೇಗೌಡ-2 ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಚಿತ್ರ ವೀಕ್ಷಿಸಿರುವ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರ ನೀಡಿದೆ.

ಕೆಂಪೇಗೌಡ-2 ಆಗಸ್ಟ್​​​​ 9 ರ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗುತ್ತಿದೆ. ಪಂಚಮುಖಿ ಹನುಮಾನ್ ಸಿನಿ ಪ್ರೊಡಕ್ಷನ್ ಲಾಂಛನದಲ್ಲಿ ಎ. ವಿನೋದ್​​​​ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶಂಕರೇಗೌಡ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕ್ರಿಕೆಟಿಗ ಶ್ರೀಕಾಂತ್ ಈ ಸಿನಿಮಾದಲ್ಲಿ ಅಭಿನಯಿಸಿರುವುದು ವಿಶೇಷ. ಅಲ್ಲದೆ ಕೋಮಲ್ ತಮ್ಮ ಪಾತ್ರಕ್ಕಾಗಿ ತೂಕ ಇಳಿಸಿಕೊಂಡು ಈಗ ಸ್ಲಿಮ್ ಆಗಿದ್ದಾರೆ. ಇನ್ನು ಸುದೀಪ್ ಅಭಿನಯದ ಕೆಂಪೇಗೌಡ ಸಿನಿಮಾಗೂ ಈ ಕೆಂಪೇಗೌಡ-2 ಸಿನಿಮಾಗೂ ಯಾವುದೇ ಸಂಬಂಧ ಇಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ. ಲೂಸ್ ಮಾದ ಅಲಿಯಾಸ್ ಯೋಗೀಶ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಉನ್ನಿ ಸಂಗೀತ ನಿರ್ದೇಶನ, ಸಿ. ರವಿಚಂದ್ರ ಸಂಕಲನ, ಮುರಳಿ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಜಾಲಿ ಬಾಸ್ಟಿನ್​​​​ ಸಾಹಸ ನಿರ್ದೇಶನ ಇದೆ. ರಕ್ಷಿಕ ಶರ್ಮ, ತೆಲುಗು ನಟ ಆಲಿ, ಚೇತನ್ ಶರ್ಮ, ಲೋಹಿತಾಶ್ವ, ಸುಚೇಂದ್ರಪ್ರಸಾದ್ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.