ETV Bharat / sitara

ನಿರ್ಮಾಪಕ ಉಮಾಪತಿ ಬರ್ತಡೇ ವಿಶೇಷವಾಗಿ 'ರಾಬರ್ಟ್' ಹೊಸ ಪೋಸ್ಟರ್ ರಿಲೀಸ್​​​

author img

By

Published : Jul 27, 2020, 2:29 PM IST

ತರುಣ್ ಸುಧೀರ್ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ 'ರಾಬರ್ಟ್' ಸಿನಿಮಾದ ಹೊಸ ಪೋಸ್ಟರನ್ನು ಚಿತ್ರತಂಡ ಇಂದು ಬಿಡುಗಡೆ ಮಾಡಿದೆ. ಇಂದು ಉಮಾಪತಿ ಹುಟ್ಟುಹಬ್ಬವಾಗಿದ್ದು ಈ ವಿಶೇಷ ದಿನದಂದು ಗಿಫ್ಟ್ ಆಗಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

Darshan starring Robert
ರಾಬರ್ಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ರಾಬರ್ಟ್'. ಈ ಸಿನಿಮಾ ಟೈಟಲ್ ಜೊತೆಗೆ ಟೀಸರ್ ಹಾಗೂ ಪೋಸ್ಟರ್​​​​​​​​​​​​​ನಿಂದ ಸದ್ದು ಮಾಡುತ್ತಿದೆ. ವಿಶೇಷ ಎಂದರೆ ರಾಬರ್ಟ್ ಸಿನಿಮಾ, ಸ್ಯಾಂಡಲ್​​​ವುಡ್​​​ ಮಾತ್ರವಲ್ಲದೆ, ಬೇರೆ ಭಾಷೆಯಲ್ಲಿ ಕೂಡಾ ಸದ್ದು ಮಾಡುತ್ತಿದೆ.

Darshan starring Robert
'ರಾಬರ್ಟ್' ಹೊಸ ಪೋಸ್ಟರ್

ಬಹುತೇಕ ಚಿತ್ರೀಕರಣ ಮುಗಿಸಿ ಸೆನ್ಸಾರ್ ಟೇಬಲ್ ಮೇಲೆ ಇರುವ ರಾಬರ್ಟ್ ಚಿತ್ರ , ಈಗಾಗಲೇ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಹಾವಳಿಯಿಂದಾಗಿ ಚಿತ್ರಮಂದಿರಗಳು ಸ್ಥಗಿತಗೊಂಡಿರುವ ಕಾರಣ ಚಿತ್ರ ಬಿಡುಗಡೆ ತಡವಾಗುತ್ತಿದೆ. ಈ ಸಿನಿಮಾ, ಅಭಿಮಾನಿಗಳಲ್ಲಿ ಬಹಳ ಕುತೂಹಲ ಮೂಡಿಸಿದೆ. ಆದರೆ ಚಿತ್ರತಂಡ ಅಭಿಮಾನಿಗಳಿಗೆ ನಿರಾಶೆ ಮಾಡಬಾರದು ಎಂಬ ಉದ್ದೇಶದಿಂದ ದರ್ಶನ್ ಅವರ ಹೊಸ ಲುಕ್ ಒಂದನ್ನು ಬಿಡುಗಡೆ ಮಾಡಿದೆ. ಈ ಪೋಸ್ಟರ್​​ನಲ್ಲಿ ದರ್ಶನ್ ಕೈಯ್ಯಲ್ಲಿ ಸಿಗಾರ್ ಹಿಡಿದು ಕುರ್ಚಿಯೊಂದರಲ್ಲಿ ಒರಗಿ ಕುಳಿತಿದ್ದಾರೆ. ದರ್ಶನ್ ಪಕ್ಕದಲ್ಲೇ ಗಿಟಾರ್ ಕೂಡಾ ಇದೆ. ಒಟ್ಟಿನಲ್ಲಿ ಈ ಪೋಸ್ಟರ್ ಬಹಳ ಚೆನ್ನಾಗಿದೆ.

  • ನಮ್ಮ #Roberrt ಚಿತ್ರದ ನಿರ್ಮಾಪಕರಾದ ಉಮಾಪತಿ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಅವರ ಇಷ್ಟಾರ್ಥಗಳೆಲ್ಲವೂ ಈಡೇರಲಿ ಎಂದು ಹಾರೈಸುತ್ತಾ ಚಿತ್ರದ ಪೋಸ್ಟರ್ ನಿಮಗಾಗಿ ಬಿಡುಗಡೆ #RoberrtNewPoster @umap30071 @UmapathyFilms @TharunSudhir @StarAshaBhat pic.twitter.com/eCaQXltATR

    — Darshan Thoogudeepa (@dasadarshan) July 27, 2020 " class="align-text-top noRightClick twitterSection" data=" ">

ಚಿತ್ರದಲ್ಲಿ ದರ್ಶನ್ ಮಾಸ್​​ ಅವತಾರದಲ್ಲಿ ಕಾಣಿಸಿಕೊಂಡಿದ್ದು ಗ್ಯಾಂಗ್​ಸ್ಟರ್​ ಪಾತ್ರ ಮಾಡುತ್ತಿದ್ದಾರೆ. 'ರಾಬರ್ಟ್' ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ‌. ಈ‌ ಹಿಂದೆ 'ಹೆಬ್ಬುಲಿ' ಸಿನಿಮಾ ಮಾಡಿದ್ದ, ಉಮಾಪತಿ 30ಕೋಟಿ ರೂಪಾಯಿ ವೆಚ್ಚದಲ್ಲಿ ಈ‌‌ ಸಿನಿಮಾ ಮಾಡಿದ್ದಾರೆ. ಇಂದು ಚಿತ್ರ ನಿರ್ಮಾಪಕ ಉಮಾಪತಿ ಹುಟ್ಟುಹಬ್ಬವಾಗಿದ್ದು ಈ ವಿಶೇಷ ದಿನದಂದು 'ರಾಬರ್ಟ್' ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರನ್ನು ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅನ್ನದಾತನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಈ ಚಿತ್ರದಲ್ಲಿ ದಾಸನಿಗೆ ಆಶಾ ಭಟ್ ಜೋಡಿಯಾಗಿದ್ದು, ನಿರ್ದೇಶಕ ತರುಣ್ ಸುಧೀರ್ ಆ್ಯಕ್ಷನ್​​​​​​​​​ ಕಟ್ ಹೇಳಿದ್ದಾರೆ. ಒಟ್ಟಿನಲ್ಲಿ ಈ ಹೊಸ ಪೋಸ್ಟರ್​ ಅಭಿಮಾನಿಗಳಿಗಂತೂ ಬಹಳ ಇಷ್ಟ ಆಗಿದೆ.

Darshan starring Robert
ಉಮಾಪತಿ, ದರ್ಶನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.