ನಿನ್ನೆ ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮನ್ ಚಿತ್ರದ ಆಡಿಯೋ ರಿಲೀಸ್ ಆಗಿದೆ. ಈ ಕಾರ್ಯಕ್ರಮಕ್ಕೆ ಆಗಿಮಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡಿಗರು ಇಂತಹ ಸಿನಿಮಾಗಳನ್ನು ಅಂಡು ಬಗ್ಗಿಸಿ ನೋಡ್ರಯ್ಯ ಅಂದಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿ ಬಾಸ್, ಸಂಚಾರಿ ವಿಜಯ್ ಉತ್ತಮ ನಟ. ಇಂತಹ ನಟರಿಗೆ ಹಾಗೂ ಸಿನಿಮಾಗಳಿಗೆ ಬೆನ್ನು ತಟ್ಟಬೇಕು. ಅವರು ನಟಿಸಿದ ’ನಾನು ಅವನಲ್ಲ ಅವಳು’ ಸಿನಿಮಾ ನೋಡಿ ಫಿದಾ ಆದೆ ಅಂತನಾ ಇದೇ ವೇಳೆ ಹೇಳಿದ್ರು. ಅಷ್ಟೇ ಅಲ್ಲ ತೆಲುಗು, ತಮಿಳಿನಲ್ಲಿ ದೊಡ್ಡ ಸಿನಿಮಾ ಮಾಡುತ್ತಾರೆಂದು ಹಲವು ಮಂದಿ ನನಗೆ ಹೇಳಿದ್ದಾರೆ. ಆದ್ರೆ ನಮ್ಮಲ್ಲೂ ಈ ರೀತಿ ಸಿನಿಮಾ ಮಾಡುವಂತೆ ಕೇಳುತ್ತಾರೆ ಎಂದು ದರ್ಶನ್ ಹೇಳಿದ್ರು.
ಕನ್ನದಲ್ಲೂ ಇಂತಹ ಸಿನಿಮಾ ಮಾಡಿ ಅನ್ನುವವರು ಮೊದಲು ’ಅಂಡು ಬಗ್ಗಿಸಿ ಕನ್ನಡ ಸಿನಿಮಾ ನೋಡ್ರಯ್ಯ’ ಅಂತಾನೂ ಇದೇ ವೇಳೆ ಅವರು ಹೇಳಿದ್ದಾರೆ. ಮಾಧ್ಯಮಗಳು ಕೂಡ ಪರಭಾಷೆಯ ಸಿನಿಮಾಗಳು, ಕಲಾವಿದರ ಬಗ್ಗೆ ಸಾಕಷ್ಟು ಬರೆಯುತ್ತಿವೆ. ನಮ್ಮ ಕಲಾವಿದರ ಬಗ್ಗೆಯೂ ಸಂದರ್ಶನ ಮಾಡಿ ಸುದ್ದಿ ಬರೆಯಿರಿ ಅಂತ ಹೇಳಿದ್ರು. ಕಾರ್ಯಕ್ರಮಲ್ಲಿ ಪ್ರಜ್ವಲ್ ದೇವರಾಜ್, ದೇವರಾಜ್ ಸಂಚಾರಿ ವಿಜಯ್ ಸೇರಿದಂತೆ ಹಲವರು ಭಾಗಿಯಾಗಿದ್ರು.