ETV Bharat / sitara

'ಬಬ್ರೂ' ಚಿತ್ರತಂಡಕ್ಕೆ ಶುಭ ಹಾರೈಸಿದ ಚಾಲೆಂಜಿಂಗ್ ಸ್ಟಾರ್​ ದರ್ಶನ್ - ಡಿಸೆಂಬರ್​ 6 ರಂದು ಬಬ್ರೂ ಸಿನಿಮಾ ಬಿಡುಗಡೆ

ಅಮೆರಿಕದಲ್ಲಿ ಸಂಪೂರ್ಣ ಶೂಟಿಂಗ್ ಆದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ 'ಬಬ್ರೂ' ಚಿತ್ರಕ್ಕೆ ಸಿಕ್ಕಿದೆ. 'ಬಬ್ರೂ' ಚಿತ್ರದ ಟ್ರೇಲರನ್ನು ಚಾಲೆಂಜಿಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

darshan
ಚಾಲೆಂಜಿಂಗ್ ಸ್ಟಾರ್​ ದರ್ಶನ್
author img

By

Published : Dec 3, 2019, 12:01 AM IST

ಬೆಳದಿಂಗಳ ಬಾಲೆ ಸುಮನ್ ನಗರ್​​​​ಗರ್ ಬಹಳ ವರ್ಷಗಳ ನಂತರ ಸ್ಯಾಂಡಲ್​​​ವುಡ್​​​ಗೆ ವಾಪಸಾಗಿದ್ದಾರೆ. 'ಬಬ್ರೂ' ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ಅವರು ನಿರ್ಮಿಸಿದ್ದು, ಇದೇ ವಾರ ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 'ಬಬ್ರೂ' ಚಿತ್ರದ ಟ್ರೇಲರನ್ನು ಚಾಲೆಂಜಿಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

'ಬಬ್ರೂ' ಚಿತ್ರತಂಡಕ್ಕೆ ದರ್ಶನ್ ಶುಭ ಹಾರೈಕೆ

'ಅಮೆರಿಕದಿಂದ ಮತ್ತೆ ನಮ್ಮ ನಾಡಿಗೆ ವಾಪಸ್​​​​​ ಬಂದು ಕನ್ನಡ ಚಿತ್ರ ನಿರ್ಮಾಣ ಮಾಡಿದ್ದೀರಿ ನಿಮಗೆ ಒಳ್ಳೆಯಗಾದಲಿ. ಇನ್ನು ಮುಂದೆ ಕೂಡಾ ಇದೇ ರೀತಿ ಸಿನಿಮಾಗಳನ್ನು ಮಾಡುತ್ತಿರಿ ಮಾಡಿ ಎಂದು ಸುಮನ್ ನಗರ್​​​​ಕರ್​​​ಗೆ ದರ್ಶನ್ ಶುಭ ಹಾರೈಸಿದರು. 'ಬಬ್ರೂ' ಸಿನಿಮಾ ಜರ್ಮನಿಯಲ್ಲಿ ಸಾಗುವ ಚಿತ್ರವಾಗಿದ್ದು, ಚಿತ್ರದಲ್ಲಿ ಕಾರು ಪ್ರಮುಖ ಪಾತ್ರ ನಿಭಾಯಿಸಿದೆ. ಅಮೆರಿಕದಲ್ಲಿ ಸಂಪೂರ್ಣ ಶೂಟಿಂಗ್ ಆದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ 'ಬಬ್ರೂ' ಚಿತ್ರಕ್ಕೆ ಸಿಕ್ಕಿದೆ. ಹಾಲಿವುಡ್​​​ ತಂತ್ರಜ್ಞರು, ಕಲಾವಿದರು ಈ ಚಿತ್ರದಲ್ಲಿ ಕೆಲಸ ಮಾಡಿದ್ದು, ಇದೊಂದು ಹಾಲಿವುಡ್​​​ ಕನ್ನಡ ಚಿತ್ರವಾಗಿದೆ ಎಂದು ಚಿತ್ರತಂಡ ಹೇಳಿದೆ. ಇನ್ನು ಬಿಡುಗಡೆಗೂ ಮುನ್ನವೇ ಸಿನಿಮಾ ಅಮೆರಿಕದಲ್ಲಿ ಸೌಂಡ್ ಮಾಡಿದೆ.

ಈಗಾಗಲೇ ಚಿತ್ರತಂಡ ಅಮೆರಿಕದಲ್ಲಿ ಮೂರು ಪ್ರೀಮಿಯರ್ ಶೋ ಮಾಡಿದ್ದು, ಮೂರೂ ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿವೆ. ಚಿತ್ರ ನೋಡಿದ ಕನ್ನಡಿಗರು ಫಿದಾ ಆಗಿದ್ದಾರೆ. ಸಿನಿಮಾವನ್ನು ಸುಜಯ್ ರಾಮಯ್ಯ ನಿರ್ದೇಶನ ಮಾಡಿದ್ದು, ಪ್ರಮುಖ ಪಾತ್ರದಲ್ಲಿ ಸುಮನ್ ನಗರ್​​​​ಗರ್ ಮಹಿ ಹಿರೇಮಠ್, ರೆತೊಸ್ತಾಡೋ , ಸನ್ನಿ ಮೋಜ, ಪ್ರಕೃತಿ ಕಶ್ಯಪ್ ಹಾಗೂ ಮುಂತಾದವರು ನಟಿಸಿದ್ದಾರೆ. ಲೂಸಿಯಾ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಹಾಡುಗಳಿಗೆ ಕೂಡಾ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಡಿಸೆಂಬರ್ 6ರಂದು 'ಬಬ್ರೂ' ತೆರೆ ಮೇಲೆ ಬರಲಿದ್ದು, ಪ್ರೇಕ್ಷಕ ಪ್ರಭುಗಳು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Intro:ಬೆಳದಿಂಗಳ ಬಾಲೆ ಸುಮನ್ ನಗರ್ಕರ್ ಆಫ್ಟರ್ ಲಾಂಗ್ ಟೈಮ್ ಸ್ಯಾಂಡಲ್ವುಡ್ಗೆ ಕಂಬ್ಯಾಕ್ ಮಾಡಿದ್ದು, ಬಬ್ರೂ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ನಿರ್ಮಾಣ ಮಾಡಿದ್ದು, ಇದೇ ವಾರ ರಾಜ್ಯಾದ್ಯಂತ ಬಬ್ರೂ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು‌.ಇಂದು ಬಬ್ರೂ ಚಿತ್ರದ ಟ್ರೈಲರ್ ಅನ್ನು ಬಾಕ್ಸ್ ಅಫೀಸ್ ಸುಲ್ತಾನ ಚಾಲೆಂಜಿಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿ ಬಬ್ರೂ ಚಿತ್ರ ತಂಡಕ್ಕೆ ಶುಭ ಹಾರೈಸಿದ್ರು‌ ಅಲ್ಲದೆ ಅಮೇರಿಕಾದಿಂದ ಮತ್ತೆ ನಮ್ಮ ನಾಡಿಗೆ ವಾಪಸ್ಸು ಬಂದು ಕನ್ನಡ ಚಿತ್ರ ನಿರ್ಮಾಣ ಮಾಡಿದ್ದೀರಿ ನಿಮಗೆ ಒಳ್ಳೆಗಾದಲಿ, ಇನ್ನು ಮುಂದೆಯು ಸಿನಿಮಾಗಳ ಮಾಡಿ ಎಂದು ಸುಮನ್ ನಗರ್ಕರ್ ಗೆ ವಿಶ್ ಮಾಡಿದ್ರು.

Body:ಇನ್ನೂ ಬಬ್ರೂ ಚಿತ್ರ ಕಾರ್ ಜರ್ಮನಿಯಲ್ಲಿ ಸಾಗುವ ಚಿತ್ರವಾಗಿದ್ದು, ಚಿತ್ರದಲ್ಲಿ ಕಾರ್ ಪ್ರಮುಖ ಪಾತ್ರ ನಿಭಾಯಿಸಿದೆ.
ಅಲ್ಲದೆ ಬಬ್ರೂ ಚಿತ್ರದ ಸ್ಪೆಷಲ್ ಅಂದ್ರೆ ಅಮೇರಿಕಾದಲ್ಲಿ ಸಂಪೂರ್ಣ ಶೂಟಿಂಗ್ ಆದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ ಬಬ್ರೂ ಚಿತ್ರಕ್ಕೆ ಸಿಕ್ಕಿದ್ದು. ಬಬ್ರೂ ಒಂದು ರೀತಿ ಹಾಲಿವುಡ್ ಕನ್ನಡ ಚಿತ್ರವಾಗಿದೆ.ಯಾಕಂದ್ರೆ ಹಾಲಿವುಡ್ ತಂತ್ರಜ್ಞರು ಕಲಾವಿದರು ಬಬ್ರೂ ಚಿತ್ರದಲ್ಲಿ ಕೆಲಸ ಮಾಡಿದೆ ಎಂದು ಚಿತ್ರತಂಡ ಹೇಳಿತು.

ಅಲ್ಲದೆ ಬಬ್ರೂ ಚಿತ್ರ ರಿಲೀಸ್ ಗೂ ಮೊದಲೇ ಅಮೇರಿಕಾದಲ್ಲಿ ಸೌಂಡ್ ಮಾಡಿದೆ. ಈಗಾಗಲೇ ಚಿತ್ರತಂಡ ಯುಸ್ ನಲ್ಲಿ ಮೂರು ಪ್ರೀಮಿಯರ್ ಶೋ ಮಾಡಿದ್ದು. ಮೂರು ಶೋಗಳು ಹೌಸ್ ಪುಲ್ ಪ್ರದರ್ಶನ ಕಂಡಿದ್ದು, ಚಿತ್ರ ನೋಡಿದ ಎನ್ ಅರ್ ಐ ಕನ್ನಡಿಗರು ಫಿಧಾ ಆಗಿದ್ದಾರೆ.

ಬಬ್ರೂ ಚಿತ್ರವನ್ನು ಸುಜಯ್ ರಾಮಯ್ಯನಿರ್ದೇಶನಮಾಡಿದ್ದು
ಲೀಡ್ ರೋಲ್ ನಲ್ಲಿ ಸುಮನ್ ನಗರ್ಕರ್ ಮಹಿ ಹಿರೇಮಠ್ ,
ರೇತೋಸ್ತಾಡೋ , ಸನ್ನಿ ಮೋಜ, ಪ್ರಕೃತಿ ಕಶ್ಯಪ್ಮುಂತಾದವರು
ತಾರಾ ಬಳಗದಲ್ಲಿದ್ದು, ಲೂಸಿಯಾ ಖ್ಯಾತಿಯ ಪೂರ್ಣ ತೇಜಸ್ವಿ ಈ ಚಿತ್ರಕ್ಕೆ ಸಂಗೀತ ನೀಡಿದ್ದು ಹಾಡುಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು.ಡಿಸೆಂಬರ್ ೬ ರಂದು ಬಬ್ರೂ ತೆರೆ ಮೇಲೆ ಬರಲಿದ್ದು ಪ್ರೇಕ್ಷಕ ಪ್ರಭುಗಳು ಯಾವ ರೀತಿ ರಿಸೀವ್ ಮಾಡುತ್ತಾರೆ ಕಾದು ನೋಡಬೇಕಿದೆ.

ಸತೀಶ ಎಂಬಿ.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.