ಕೋಡ್ಲು ರಾಮಕೃಷ್ಣ ನಿರ್ದೇಶನದ, ಸಮಾಜದ ಅಂಕು ಡೊಂಕುಗಳ ವಿಡಂಬನೆ ಮಾಡುವ 'ಮತ್ತೆ ಉದ್ಭವ' ಚಿತ್ರದ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. 'ಮತ್ತೆ ಉದ್ಭವ' 90ರ ದಶಕದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದ 'ಉದ್ಭವ' ಚಿತ್ರದ ಸೀಕ್ವೆಲ್ ಆಗಿದ್ದು, ಕೋಡ್ಲು ರಾಮಕೃಷ್ಣ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿರೋದು ಈ ಚಿತ್ರದ ಮೇಲೆ ಭರವಸೆ ಹೆಚ್ಚಿಸಿದೆ. ಇನ್ನು ಈ ಚಿತ್ರ ರಿಲೀಸ್ಗೆ ರೆಡಿಯಾಗಿದ್ದು, ಫೆಬ್ರುವರಿ 7ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿದೆ.
ಉದ್ಭವ ಚಿತ್ರದಲ್ಲಿ ಅನಂತ್ ನಾಗ್ ನಟನೆ ಚಿತ್ರಕ್ಕೆ ಟಾನಿಕ್ ಆಗಿತ್ತು. ಈಗ ಮತ್ತೆ ಉದ್ಭವ ಚಿತ್ರದಲ್ಲಿ ಅನಂತ್ ನಾಗ್ ಮಗನ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದು ಮನರಂಜನೆಗೇನು ಮೋಸ ಇಲ್ಲ ಎಂಬುದು ಚಿತ್ರದ ಟ್ರೈಲರ್ನಲ್ಲಿ ಗೊತ್ತಾಗಿದೆ.
ಚಿತ್ರದಲ್ಲಿ ಪ್ರಸ್ತುತ ರಾಜಕೀಯವನ್ನು ವ್ಯಂಗ್ಯವಾಗಿ ಹೇಳಲು ನಿರ್ದೇಶಕರು ಹೊರಟಿದ್ದು, ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರದೀಪ್ ಈ ಚಿತ್ರದಲ್ಲಿ ಲೀಡ್ ರೋಲ್ ಪ್ಲೇ ಮಾಡಿದ್ದಾರೆ. ಅಲ್ಲದೆ ಚಿತ್ರದಲ್ಲಿ ರಾಜಕಾರಣಿಯಾಗಿ ಮಿಲನ ನಾಗರಾಜ್ ನಟಿಸಿದ್ದಾರೆ.