ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಲ್ಲಿರುವ ಡಿ ಕಂಪನಿ, ಬರೀ ದರ್ಶನ್ ಸಿನಿಮಾ ಪ್ರಚಾರ ಅಲ್ಲದೆ ಆಗಾಗ ಒಳ್ಳೆಯ ಕೆಲಸಗಳನ್ನೂ ಮಾಡ್ತಾ ಬಂದಿದೆ. ಸಮಾಜಮುಖಿ ಕೆಲಸಗಳಲ್ಲಿಯೂ ತೊಡಗಿರುವ ದರ್ಶನ್ ಅಭಿಮಾನಿಗಳ ಈ ಸಂಘ, ಈಗ ಹಾಸನದಲ್ಲಿ ಶಾಲೆಯೊಂದನ್ನು ದತ್ತು ಪಡೆದಿದೆ.
ಹಾಸನ ಜಿಲ್ಲೆ, ಮಳಲಿ ಬಳಿಯ ರಾಮೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದೆ. 2 ವರ್ಷಗಳ ಕಾಲ ದತ್ತು ಪಡೆದಿರುವ ಕಂಪನಿ, ಶಾಲಾ ಮಕ್ಕಳಿಗೆ ಪೀಠೋಪಕರಣ, ಬಟ್ಟೆ, ಪುಸ್ತಕ, ಶಾಲೆಗೆ ಬಣ್ಣ ಪೂರೈಸುವ ಯೋಜನೆ ಹಾಕಿಕೊಂಡಿದೆ.
ಈ ಹಿಂದೆ ಡಿ ಬಾಸ್ ಕಂಪನಿ ಯಾವುದೇ ಕಾರ್ಯಕ್ರಮ ಮಾಡಿದರೂ ಅಲ್ಲಿ 10 ಗಿಡ ವಿತರಿಸುವ ಕೆಲಸ ಮಾಡುತ್ತಾ ಬಂದಿದೆ. ಇಲ್ಲಿಯೂ ಕೂಡ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟು ಶಾಲೆಯನ್ನು ದತ್ತು ಸ್ವೀಕರಿಸಿದೆ. ದತ್ತು ಸ್ವೀಕಾರ ವೇಳೆ ಟಕ್ಕರ್ ಚಿತ್ರದ ನಾಯಕ ಮನೋಜ್, ನಾಯಕಿ ರಂಜನಿ ರಾಘವನ್, ನಿರ್ಮಾಪಕ ಯೋಗೀಶ್ ಕೋಗಿಲು ಉಪಸ್ಥಿತರಿದ್ದರು.