ನಟ ದರ್ಶನ್ ತಮ್ಮ ಮಗ ವಿನೀಶ್ಗೆ ಹಾರ್ಸ್ ರೈಡಿಂಗ್ ಕಲಿಸುತ್ತಿರುವ ವಿಡಿಯೋ ಇದೀಗ ಸಾಮಾಜಿ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನ ತಮ್ಮ ಫಾರ್ಮ್ ಹೌಸ್ನಲ್ಲಿ ಮಗನಿಗೆ ಕುದುರೆ ಸವಾರಿ ಹೇಳಿಕೊಟ್ಟಿದ್ದಾರೆ. ಎರಡು ಬಿಳಿ ಕುದುರೆ ಮೇಲೆ ದರ್ಶನ್ ಮತ್ತು ವಿನೀಶ್ ಸವಾರಿ ಮಾಡುತ್ತಿರುವ ವಿಡಿಯೋ ಯೂಟೂಬ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಅಲ್ಲದೇ ಈ ಇಬ್ಬರ ಹಿಂದೆ ದರ್ಶನ್ ಸ್ನೇಹಿತರು ಕೂಡ ಸಹಾಯಕ್ಕೆ ಬಂದಿದ್ದಾರೆ.
- " class="align-text-top noRightClick twitterSection" data="">
ಈ ವಿಡಿಯೋವನ್ನು ಯೂಟೂಬ್ನ ಡಿ ಕಂಪನಿ ಚಾನೆಲ್ನಲ್ಲಿ ಹಾಕಲಾಗಿದೆ. ವಿಡಿಯೋಕ್ಕೆ ಯಜಮಾನ ಸಿನಿಮಾದ ನಂದಿ ಹಾಡನ್ನು ಹಾಕಲಾಗಿದ್ದು ನೋಡುಗರಿಗೆ ಆನಂದ ತರುವಂತಿದೆ.