ETV Bharat / sitara

ಮತ್ತೆ ಎತ್ತಿನಗಾಡಿ ಏರಿ ಎಂಜಾಯ್ ಮಾಡಿದ ಅಭಿಮಾನಿಗಳ ಐರಾವತ - Darshan busy in Agriculture

ಇತ್ತೀಚೆಗೆ ಧಾರವಾಡದಲ್ಲಿ ಎತ್ತಿನ ಬಂಡಿ ಓಡಿಸಿದ್ದ ದರ್ಶನ್ ಇದೀಗ ಮತ್ತೆ ಮೈಸೂರಿನ ತಮ್ಮ ಫಾರ್ಮ್​ಹೌಸ್​​​ನಲ್ಲಿ ಅಭಿಮಾನಿಯೊಬ್ಬರು ಹೊಸದಾಗಿ ಖರೀದಿಸಿದ್ದ ಗಿಡ್ಡ ತಳಿಯ ಎತ್ತುಗಳನ್ನು ಓಡಿಸಿ ಸಂಭ್ರಮಿಸಿದ್ದಾರೆ.

Darshan Bullock cart
ಐರಾವತ
author img

By

Published : Aug 19, 2020, 1:59 PM IST

ಕಳೆದ 5 ತಿಂಗಳಿಂದ ಸ್ಯಾಂಡಲ್​​ವುಡ್​ನ ಒಬ್ಬೊಬ್ಬ ನಟ-ನಟಿಯರು ಒಂದೊಂದು ರೀತಿ ತಮ್ಮದೇ ಆದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಪ್ರಾಣಿಪ್ರಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ ತಮ್ಮ ಮೆಚ್ಚಿನ ಪ್ರಾಣಿಗಳ ಹಾರೈಕೆ ಹಾಗೂ ವೈಲ್ಡ್ ಫೋಟೋಗ್ರಫಿಯಲ್ಲೇ ಬ್ಯುಸಿ ಇದ್ದಾರೆ.

ಫಾರ್ಮ್​ಹೌಸ್​​ನಲ್ಲಿ ಎತ್ತಿನ ಬಂಡಿ ಓಡಿಸಿದ ದರ್ಶನ್

ಇದೀಗ ಮೇಕೆ ಸಾಗಣಿಗೆ ಕೂಡಾ ಮುಂದಾಗಿರುವ ದರ್ಶನ್ ಕಳೆದ ವಾರವಷ್ಟೇ ಧಾರವಾಡಕ್ಕೆ ತೆರಳಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಡೈರಿಗೆ ಭೇಟಿ ನೀಡಿ ಮೇಕೆಗಳನ್ನು ಕೊಂಡು ತಂದಿದ್ದಾರೆ. ಧಾರವಾಡದಲ್ಲಿ ಕೂಡಾ ಎತ್ತಿನ ಗಾಡಿ ಓಡಿಸಿ 'ಲ್ಯಾಂಬೋರ್ಗಿನಿ ಓಡಿಸಲು ರೆಡಿ, ಎತ್ತಿನ ಬಂಡಿ ಹೊಡೆಯಲೂ ರೆಡಿ' ಎಂಬ ಡೈಲಾಗ್ ಹೇಳಿದ್ದ ದರ್ಶನ್ ಇದೀಗ ಮತ್ತೆ ಫಾರ್ಮ್​ಹೌಸ್​​​ನಲ್ಲಿ ಎತ್ತಿನ ಗಾಡಿ ಏರಿ ಸಂಭ್ರಮಿಸಿದ್ದಾರೆ. ತಮ್ಮ ಅಭಿಮಾನಿಯೊಬ್ಬರು ಹೊಸದಾಗಿ ಖರೀದಿಸಿರುವ ಎತ್ತುಗಳನ್ನು ಗಾಡಿಗೆ ಕಟ್ಟಿ ಮೈಸೂರಿನ ತಮ್ಮ ಫಾರ್ಮ್​ಹೌಸ್​​​ನಲ್ಲಿ ಎತ್ತಿನ ಬಂಡಿ ಓಡಿಸಿದ್ದಾರೆ.

Darshan
ದರ್ಶನ್

ದರ್ಶನ್ ಎತ್ತಿನ ಬಂಡಿ ಓಡಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಗಿಡ್ಡತಳಿಯ ಎತ್ತುಗಳನ್ನು ಗಾಡಿ ಕಟ್ಟಿ ಓಡಿಸುವುದರಲ್ಲಿ ಒಂದು ರೀತಿ ಮಜಾ ಇರುತ್ತದೆ ಎಂದು ದರ್ಶನ್ ಹೇಳಿದ್ದಾರೆ. ಈ ಗಿಡ್ಡ ತಳಿಯ ಎತ್ತುಗಳನ್ನು ಅಭಿಮಾನಿಯೊಬ್ಬರು ಖರೀದಿಸಿ ತಮ್ಮ ಮೆಚ್ಚಿನ ನಟ ದರ್ಶನ್ ಕೈಯಲ್ಲಿ ಮೊದಲು ರೌಂಡ್ ಹಾಕಿಸಿ ಖುಷಿ ಪಟ್ಟಿದ್ದಾನೆ. ಸಾರಥಿ ಕೂಡಾ ಈ ಹೊಸ ಎತ್ತಿನಗಾಡಿಯನ್ನು ಓಡಿಸಿ ಸಂಭ್ರಮಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.