'ಕುರುಕ್ಷೇತ್ರ' ಸಿನಿಮಾ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್, ಔಟ್ ಆ್ಯಂಡ್ ಔಟ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಒಡೆಯ. ಅಣ್ಣ ತಮ್ಮಂದಿರ ಬಾಂಧವ್ಯದ ಜೊತೆಗೆ ಆ್ಯಕ್ಷನ್ ಝಲಕ್ ಕೂಡಾ ಹೊಂದಿರುವ 'ಒಡೆಯ' ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆ.
- " class="align-text-top noRightClick twitterSection" data="">
ಇತ್ತೀಚೆಗೆ ಚಿತ್ರತಂಡ ಸ್ವಿಟ್ಜರ್ಲೆಂಡ್ನಲ್ಲಿ ಹಾಡಿನ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಿತ್ತು. ಸದ್ಯಕ್ಕೆ ದರ್ಶನ್ 'ಒಡೆಯ' ಚಿತ್ರದ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ. ಈ ವಿಡಿಯೋವನ್ನು ಸಂದೇಶ್ ಪ್ರೊಡಕ್ಷನ್ಸ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಿಕೊಂಡಿದೆ. ಆದರೆ ಈ ವಿಡಿಯೋದಲ್ಲಿ ದರ್ಶನ್ ಹೇಳುತ್ತಿರುವ ಡೈಲಾಗ್ ಕೇಳಿಸುವುದಿಲ್ಲ. ಡೈಲಾಗ್ಗಳನ್ನು ಸಸ್ಪೆನ್ಸ್ ಆಗಿ ಇರಿಸುವ ಕಾರಣದಿಂದ ದರ್ಶನ್ ಧ್ವನಿ ತೆಗೆದು ಮ್ಯೂಸಿಕ್ ಸೇರಿಸಲಾಗಿದೆ. ಚಿತ್ರದಲ್ಲಿ ದರ್ಶನ್ಗೆ ಜೋಡಿಯಾಗಿ ಕೊಡಗಿನ ಕುವರಿ ರಾಘವಿ ತಿಮ್ಮಯ್ಯ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾ ತೆಲುಗಿನ 'ವೀರಂ' ಚಿತ್ರದ ರೀಮೇಕ್ ಆಗಿದ್ದು ಚಿತ್ರದಲ್ಲಿ ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ, ಚಿತ್ರಾ ಶೈಣೈ ಸೇರಿದಂತೆ ಇನ್ನಿತರರು ನಟಿಸಿದ್ದಾರೆ. ಬುಲ್ ಬುಲ್, ಪೊರ್ಕಿ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಎಂ.ಡಿ. ಶ್ರೀಧರ್, 'ಒಡೆಯ'ನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರುವ ಈ ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.