ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಚಾಲೆಂಜಿಂಗ್ ಸ್ಟಾರ್ ಆಗಿ, ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ಗೆ ಸುಲ್ತಾನನಾಗಿ, ಕೋಟ್ಯಂತರ ಅಭಿಮಾನಿಗಳ ಪಾಲಿಗೆ ಡಿ ಬಾಸ್ ಎಂದು ಕರೆಸಿಕೊಳ್ಳುವ ನಟ ದರ್ಶನ್, ವೃತ್ತಿ ಜೀವನಕ್ಕೆ ಎರಡು ದಶಕದ ಸಂಭ್ರಮ.
ಒಬ್ಬ ಸಾಮಾನ್ಯ ಲೈಟ್ ಮ್ಯಾನ್ ಆಗಿ ಸಿನಿಮಾ ಇಂಡಸ್ಟ್ರಿಗೆ ಬಂದವರು ದರ್ಶನ್. ಅವರ ಸಿನಿ ಜರ್ನಿ ಇವತ್ತಿಗೆ 24 ವರ್ಷ ತುಂಬುತ್ತಿದೆ. ಈ ಶುಭ ಸಂದರ್ಭವನ್ನು ಸಾರಥಿಯ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಹೀಗಾಗಿ, ದಚ್ಚು ಫ್ಯಾನ್ಸ್, ದರ್ಶನ್ ಅಭಿನಯದ ಮೆಜೆಸ್ಟಿಕ್ ಸಿನಿಮಾದಿಂದ ಹಿಡಿದು ಕೆಲ ತಿಂಗಳ ಹಿಂದೆ ಬಿಡುಗಡೆಯಾದ ರಾಬರ್ಟ್ ಸಿನಿಮಾದ ಎಲ್ಲಾ ಹೆಸರುಗಳು ಹಾಗೂ ಬಿಡುಗಡೆಯಾದ ಸಿನಿಮಾಗಳ ತಾರೀಖುಗಳನ್ನು ಈ ಕಾಮನ್ ಡಿಪಿಯಲ್ಲಿ ಬರೆಯಲಾಗಿದೆ. ಇನ್ನು, ದರ್ಶನ್ ಯಜಮಾನ ಸಿನಿಮಾದಲ್ಲಿ ಕುಳಿತಿರುವ ಪೋಸ್ ಅನ್ನು ಈ ಕಾಮನ್ ಡಿಪಿ ಒಳಗೊಂಡಿದೆ.
ಸುಮಾರು 52ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಟನಾಗಿ ನಟಿಸಿರುವ, ದರ್ಶನ್, ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆರಂಭದಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮೆಜೆಸ್ಟಿಕ್ ಚಿತ್ರದ ಮೂಲಕ, ದರ್ಶನ್ ಪೂರ್ಣ ಪ್ರಮಾಣದ ನಾಯಕನಾಗಿ, ಅದೃಷ್ಟ ಪರೀಕ್ಷೆಗಿಳಿದ ದಾಸ, ಚೊಚ್ಚಲ ಸಿನಿಮಾದಲ್ಲಿ ಗಾಂಧಿನಗರಲ್ಲಿ ಭರವಸೆಯ ಹೀರೊ ಆಗ್ತಾರೆ.
ಒಳ್ಳೆ ಹೈಟ್, ಕಟ್ಟು ಮಸ್ತಾದ ದೇಹ ಹೊಂದಿದ್ದ ದರ್ಶನ್ ಮಾಸ್ ಹೀರೊ ಆಗಿ ಸಕ್ಸಸ್ ಕಾಣ್ತಾರೆ. ಅಷ್ಟೇ ಅಲ್ಲ, ಮಾಸ್ ಹೀರೊ ಎಂಬ ಬ್ರಾಂಡ್ಗೆ ಸೀಮಿತವಾಗದೆ, ಎಲ್ಲ ರೀತಿಯ ಪಾತ್ರಗಳನ್ನು ನಿಭಾಯಿಸಬಲ್ಲ ಸ್ಟಾರ್ ಆಗಿ ಕನ್ನಡ ಚಿತ್ರರಂಗದಲ್ಲಿ ಹೊರ ಹೊಮ್ಮಿದ್ದಾರೆ.
ಇನ್ನು, 24 ವರ್ಷಗಳ ಸಿನಿಮಾ ಜರ್ನಿಯಲ್ಲಿ ದರ್ಶನ್ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ಈ ಎಲ್ಲಾ ಸವಾಲುಗಳನ್ನ ಮೆಟ್ಟಿ ನಿಂತಿರುವ ದರ್ಶನ್, ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದಾರೆ.
ಮೆಜೆಸ್ಟಿಕ್ ಸಿನಿಮಾ ಮೂಲಕ ಸಿನಿಮಾ ಪಯಣ ಶುರು ಮಾಡಿದ ದರ್ಶನ್, ಲಾಲಿಹಾಡು, ಕಲಾಸಿಪಾಳ್ಯ, ದಾಸ, ಕರಿಯ, ಸುಂಟರಗಾಳಿ, ಅಯ್ಯ, ಯೋಧ, ಸಾರಥಿ, ನಮ್ಮ ಪ್ರೀತಿಯ ರಾಮು, ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರ, ರಾಬರ್ಟ್ ಹೀಗೆ ಸುಮಾರು 52ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಸದ್ಯ ಕನ್ನಡ ಚಿತ್ರರಂಗದಲ್ಲಿ 24 ವರ್ಷಗಳನ್ನ ಪೂರೈಸಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಭ್ರಮವನ್ನ, ಅಭಿಮಾನಿಗಳ ಜೊತೆ ಆಚರಣೆ ಮಾಡಿದ್ದು, ದಚ್ಚು ಫ್ಯಾನ್ಸ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಈ ಸಂಭ್ರವನ್ನ ಸೆಲೆಬ್ರೆಟ್ ಮಾಡ್ತಾ ಇದ್ದಾರೆ.