ETV Bharat / sitara

ವ್ಯವಹಾರಗಳಿಂದ ಮ್ಯಾನೇಜರ್ ದೂರವಿಟ್ಟ 'ಡಿಬಾಸ್', ಇದು ಶ್ರೀನಿವಾಸ್ ಸ್ಪಷ್ಟನೆ - ದರ್ಶನ್​ ಮ್ಯಾನೇಜರ್​ ಬದಲಾವಣೆ

ನಟ ದರ್ಶನ್​ಗೆ ಮ್ಯಾನೇಜರ್​ ಆಗಿದ್ದ ಶ್ರೀನಿವಾಸ್ ಅವರನ್ನು ತೂಗುದೀಪ ಪರಿವಾರ ಹಾಗೂ ಅಭಿಮಾನಿ ಸಂಘದ ವ್ಯಾವಹಾರಿಕ ಕೆಲಸಗಳಿಂದ ದೂರ ಇಡಲಾಗಿದೆ.

ಮ್ಯಾನೇಜರ್​ ಶ್ರೀನಿವಾಸ್​ ಜೊತೆ ದರ್ಶನ್​​​​
author img

By

Published : Oct 17, 2019, 10:27 AM IST

Updated : Oct 17, 2019, 1:26 PM IST

ಬಾಕ್ಸ್ ಆಫೀಸು ಸುಲ್ತಾನ ಡಿ ಬಾಸ್ ದರ್ಶನ್ ತಮ್ಮ ಮ್ಯಾನೇಜರ್​ ಬದಲಾವಣೆ ಮಾಡಿದ್ದಾರೆ. ಇಷ್ಟು ದಿನ ದರ್ಶನ್​ಗೆ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಅವರನ್ನು ತೂಗುದೀಪ ಪರಿವಾರ ಹಾಗೂ ಅಭಿಮಾನಿ ಸಂಘದ ವ್ಯಾವಹಾರಿಕ ಕೆಲಸಗಳಿಂದ ದೂರ ಇಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದರ್ಶನ್​, ಶ್ರೀನಿವಾಸ್​ ಮತ್ತು ನನ್ನ ವಿಚಾರವಾಗಿ ಯಾರೂ ಶ್ರೀನಿವಾಸ್​ ಅವರನ್ನು ಸಂಪರ್ಕ ಮಾಡುವುದು ಬೇಡ ಎಂದಿದ್ದಾರೆ.

ಡಿ ಬಾಸ್ ತಂಡದಲ್ಲಿ ಬಹಳ ವರ್ಷಗಳ ಕಾಲ ಇದ್ದ ಮಲ್ಲಿಕಾರ್ಜುನ್ (ಮೊದಲಸಲಾ ಸಿನಿಮಾ ನಿರ್ದೇಶಕ) ಸಹ ಕಳೆದ ವರ್ಷದಿಂದ ನಾಪತ್ತೆಯಾಗಿದ್ದಾರೆ. ಮಲ್ಲಿಕಾರ್ಜುನ್ ಅವರನ್ನು ತೂಗುದೀಪ ವಿತರಣೆ ಸಂಸ್ಥೆಗೆ ನೇಮಕ ಮಾಡಲಾಗಿತ್ತು. ಅವರಿಂದ ವ್ಯವಹಾರದಲ್ಲಿ ದರ್ಶನ್​ಗೆ ಅಪಾರ ನಷ್ಟವಾಗಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು.

ಈಗ ದರ್ಶನ್​ ಜೊತೆಯಿದ್ದ ಮ್ಯಾನೇಜರ್​ ಶ್ರೀನಿವಾಸ್ ಕೂಡಾ ಬದಲಾವಣೆಯಾಗಿದ್ದು ಅಭಿಮಾನಿಗಳ ಪೇಜ್​ನಲ್ಲಿ ತಿಳಿಸಲಾಗಿದೆ. ಆದರೆ ಇದುವರೆಗೂ ದರ್ಶನ್, ಮಲ್ಲಿಕಾರ್ಜುನ್ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

'ದರ್ಶನ್​ ಜೊತೆ ಮನಸ್ತಾಪ ಬಂದಿದ್ದು ನಿಜ'

ದರ್ಶನ್​ ಮತ್ತು ನನ್ನ ನಡುವೆ ಕೆಲಸದ ವಿಚಾರವಾಗಿ ಮನಸ್ತಾಪ ಬಂದಿದ್ದು ನಿಜ ಅಂತ ಮ್ಯಾನೇಜರ್​ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಫೇಸ್​ ಬುಕ್​ನಲ್ಲಿ ಬರೆದುಕೊಂಡಿರುವ ಶ್ರೀನಿವಾಸ್​​​, ನಾನು ಕಳೆದ ಸೆಪ್ಟೆಂಬರ್​ 18 ರಿಂದ ದರ್ಶನ್​ ಬಳಿ ಕೆಲಸ ಬಿಟ್ಟಿದ್ದೇನೆ. ನನ್ನ ಮೇಲೆ ಯಾರೂ ಸಹ ಇಲ್ಲಸಲ್ಲದ ಆರೋಪ ಹೊರಿಸಬೇಡಿ. ನನಗೂ ಕುಟುಂಬ ಇದೆ. ನಾನು ಬೆಂಗಳೂರು ಬಿಟ್ಟು ಎಲ್ಲಿಗೂ ಹೋಗಿಲ್ಲ. ಇಲ್ಲಿಯೇ ಕೆಲಸ ಮಾಡಿಕೊಂಡು ಇದ್ದೇನೆ ಅಂತ ಹೇಳಿದ್ದಾರೆ.

  • " class="align-text-top noRightClick twitterSection" data="">

ಡಿ ಬಾಸ್ ದರ್ಶನ್ ಮ್ಯಾನೇಜರ್ ಬದಲಾವಣೆ

ಬಾಕ್ಸ್ ಆಫೀಸು ಸುಲ್ತಾನ ಡಿ ಬಾಸ್ ದರ್ಶನ್ ಅವರ ಮ್ಯಾನೇಜರ್ ಬದಲಾವಣೆ ಮಾಡಲಾಗಿದೆ. ಅವರೇ ಶ್ರೀನಿವಾಸ್. ಅವರ ಜೊತೆಗೆ ಯಾವುದೇ ಸಂಪರ್ಕ ಯಾರು ನನ್ನ ವಿಚಾರಕ್ಕೆ ಸಂಬಂದ ಪಟ್ಟ ಹಾಗೆ ಮಾಡುವುದು ಬೇಡ ಎಂದು ಡಿ ಬಾಸ್ ಹೇಳಿಕೊಂಡಿದ್ದಾರೆ.

ಡಿ ಬಾಸ್ ತಂಡದಿಂದ ಬಹಳ ವರ್ಷಗಳ ಕಾಲ ಇದ್ದ ಮಲ್ಲಿಕಾರ್ಜುನ್ (ನಿರ್ದೇಶಕ ಮೊದಲ ಸಲಾ ಕನ್ನಡ ಸಿನಿಮಾ) ಸಹ ಕಳೆದ ವರ್ಷದಿಂದ ನಾಪತೆಯಾಗಿದ್ದಾರೆ, ಮಲ್ಲಿಕಾರ್ಜುನ್ ಅವರನ್ನು ತೂಗುದೀಪ ವಿತರಣೆ ಸಂಸ್ಥೆಗೆ ನೇಮಕ ಮಾಡಲಾಗಿತ್ತು. ಮಲ್ಲಿಕಾರ್ಜುನ್ ಅವರಿಂದ ವ್ಯವಹಾರದಲ್ಲಿ ದರ್ಶನ್ ಅವರಿಗೆ ಅಪಾರ ನಷ್ಟ ಉಂಟಾಗಿದೆ ಎಂಬ ಮಾತು ಸಹ ಕೇಳಿಬರುತ್ತಿದೆ. ದರ್ಶನ್ ಹಾಗೂ ದಿನಕರ್ ಕುಟುಂಬದ ಸದಸ್ಯನಂತೆ ಇದ್ದ ಮಲ್ಲಿಕಾರ್ಜುನ್ ನಾಪತ್ತೆ ಆಗಿದ್ದಾರೆ ಸಹ.

ಈಗ ದರ್ಶನ್ ಅವರ ಹತ್ತಿರದ ವ್ಯಕ್ತಿ ಶ್ರೀನಿವಾಸ್ ಸಹ ಬದಲಾವಣೆ ಆಗಿದ್ದು ಅದನ್ನು ದರ್ಶನ್ ಅಭಿಮಾನಿಗಳ ಪೇಜ್ ಅಲ್ಲಿ ಸಹ ತಿಳಿಸಲಾಗಿದೆ.

ಆದರೆ ಇದುವರೆವಿಗೂ ದರ್ಶನ್ ಮಲ್ಲಿಕಾರ್ಜುನ್ ಅವರ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಈಗ ಶ್ರೀನಿವಾಸ್ ವಿಚಾರದಲ್ಲಿ ಅವರ ಜೊತೆ ಯಾರು ವ್ಯವಹಾರದ ಸಂಪರ್ಕ ಬೇಡ ಎಂದು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.

Last Updated : Oct 17, 2019, 1:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.