ಅಂತೂ ದೇಶವೇ ಎದುರು ನೋಡುತ್ತಿದ್ದ ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿ ಗೆಲುವು ಸಾಧಿಸಿದೆ. ಇನ್ನು ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಮಂಡ್ಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ರಾಜ್ಯದ ನಾನಾ ಕಡೆ ಅಂಬರೀಶ್, ಯಶ್, ದರ್ಶನ್ ಅಭಿಮಾನಿಗಳು ಸುಮಲತಾ ಗೆಲುವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಇನ್ನು ಸುಮಲತಾ ಪರ ಪ್ರಚಾರ ಮಾಡಿದ್ದ ನಟ ದರ್ಶನ್ ಅವರಿಗೆ ವೋಟು ನೀಡಿ ಗೆಲ್ಲಿಸಿದ ಮತದಾರರಿಗೆ ಸೆಲ್ಫಿ ವಿಡಿಯೋ ಮಾಡಿ ಅದರನ್ನು ಟ್ವೀಟ್ ಮಾಡುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. ಸದ್ಯಕ್ಕೆ ದರ್ಶನ್ ಪಾಂಡಿಚೇರಿಯಲ್ಲಿ 'ರಾಬರ್ಟ್' ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಿದ್ದು ಅಲ್ಲಿಂದಲೇ ಸುಮಲತಾ ಅವರಿಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಇನ್ನು ಶೂಟಿಂಗ್ ಸೆಟ್ನಲ್ಲೇ 'ಕಂಗ್ರಾಜುಲೇಶನ್ಸ್ ಅಮ್ಮ' ಎಂದು ಬರೆದಿರುವ ಕೇಕ್ ಕಟ್ ಮಾಡುವ ಮೂಲಕ ಚಿತ್ರತಂಡದೊಂದಿಗೆ ಸಂತೋಷ ಹಂಚಿಕೊಂಡಿದ್ದಾರೆ.
-
ಸುಮಲತಾ ಅಂಬರೀಶ್ ಅಮ್ಮ ರವರ ಅಭೂತಪೂರ್ವ ಗೆಲುವಿಗೆ ಕಾರಣರಾದ ಮಂಡ್ಯದ ಆತ್ಮೀಯ ಮತದಾರ ಬಂಧುಗಳೆ ಮತ್ತು ನನ್ನೆಲ್ಲಾ ಪ್ರೀತಿಯ ಅಭಿಮಾನಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು.🙏🙏🙏🙏 @sumalathaA pic.twitter.com/qfM4dZPARz
— Darshan Thoogudeepa (@dasadarshan) May 23, 2019 " class="align-text-top noRightClick twitterSection" data="
">ಸುಮಲತಾ ಅಂಬರೀಶ್ ಅಮ್ಮ ರವರ ಅಭೂತಪೂರ್ವ ಗೆಲುವಿಗೆ ಕಾರಣರಾದ ಮಂಡ್ಯದ ಆತ್ಮೀಯ ಮತದಾರ ಬಂಧುಗಳೆ ಮತ್ತು ನನ್ನೆಲ್ಲಾ ಪ್ರೀತಿಯ ಅಭಿಮಾನಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು.🙏🙏🙏🙏 @sumalathaA pic.twitter.com/qfM4dZPARz
— Darshan Thoogudeepa (@dasadarshan) May 23, 2019ಸುಮಲತಾ ಅಂಬರೀಶ್ ಅಮ್ಮ ರವರ ಅಭೂತಪೂರ್ವ ಗೆಲುವಿಗೆ ಕಾರಣರಾದ ಮಂಡ್ಯದ ಆತ್ಮೀಯ ಮತದಾರ ಬಂಧುಗಳೆ ಮತ್ತು ನನ್ನೆಲ್ಲಾ ಪ್ರೀತಿಯ ಅಭಿಮಾನಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು.🙏🙏🙏🙏 @sumalathaA pic.twitter.com/qfM4dZPARz
— Darshan Thoogudeepa (@dasadarshan) May 23, 2019
'ರಾಬರ್ಟ್' ಸಿನಿಮಾ ದರ್ಶನ್ ಅಭಿನಯದ 53ನೇ ಚಿತ್ರವಾಗಿದ್ದು ತರುಣ್ ಸುಧೀರ್ ನಿರ್ದೇಶಿಸುತ್ತಿದ್ದಾರೆ. 'ಹೆಬ್ಬುಲಿ' ಖ್ಯಾತಿಯ ಉಮಾಪತಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ನಾಯಕಿ ಆಯ್ಕೆ ನಡೆಯುತ್ತಿದ್ದು ಬೆಂಗಳೂರು, ಹೈದರಾಬಾದ್, ವಿಶಾಖಪಟ್ಟಣಂ, ಚೆನ್ನೈ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲು ನಿರ್ದೇಶಕ ತರುಣ್ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.