'ಕುರುಕ್ಷೇತ್ರ' ಚಿತ್ರದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಒಡೆಯ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ವೈಲ್ಡ್ ಲೈಫ್ ಫೋಟೋಗ್ರಫಿಗಾಗಿ ಕೀನ್ಯಾ ತೆರಳಿದ್ದ ದರ್ಶನ್ ಇದೀಗ ಮತ್ತೆ ಸ್ವಿಡ್ಜರ್ಲೆಂಡ್ಗೆ ತೆರಳಿದ್ದಾರೆ. ಆದರೆ ಇದು ಫೋಟೋಗ್ರಫಿಗಲ್ಲ, 'ಒಡೆಯ' ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ.
![Odeya team in Switzerland](https://etvbharatimages.akamaized.net/etvbharat/prod-images/kn-bng-03-switzerlandnasongshootinignaledarshan-photos_23102019204653_2310f_1571843813_502.jpg)
ಎಂ.ಡಿ. ಶ್ರೀಧರ್ ಆ್ಯಕ್ಷನ್ ಕಟ್ ಹೇಳುತ್ತಿರುವ 'ಒಡೆಯ' ಸಿನಿಮಾ ಬಹುತೇಕ ಟಾಕಿ ಪೋಷನ್ ಮುಗಿಸಿದೆ. ಸದ್ಯಕ್ಕೆ ಚಿತ್ರತಂಡ ಸ್ವಿಡ್ಜರ್ಲೆಂಡ್ನಲ್ಲಿ ಟೆಂಟ್ ಹಾಕಿದ್ದು, ಅಲ್ಲಿ ಹಾಡಿನ ಚಿತ್ರೀಕರಣ ಕೂಡಾ ಮುಗಿಸಿದೆ. ಕೆಲವು ದಿನಗಳ ಹಿಂದೆ ಸ್ವಿಡ್ಜರ್ಲೆಂಡ್ನ ಹಿಮ ಇರುವ ಲೊಕೇಶನ್ನಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿತ್ತು. ಇದೀಗ ನಗರದಲ್ಲಿ ಚಿತ್ರೀಕರಣ ಮಾಡಲಾಗುತ್ತಿದ್ದು, ಚಿತ್ರತಂಡ ಒಟ್ಟಾಗಿ ಇರುವ ಪೋಟೋಗಳು ರಿವೀಲ್ ಆಗಿವೆ. ಈ ಫೋಟೋದಲ್ಲಿ ದರ್ಶನ್, ಕೊಡಗಿನ ಕುವರಿ ರಾಘವಿ, ನಿರ್ಮಾಪಕ ಸಂದೇಶ್, ಕ್ಯಾಮರಾಮ್ಯಾನ್ ಕೃಷ್ಣಕುಮಾರ್ ಹಾಗೂ ಫಾರಿನ್ ಡ್ಯಾನ್ಸರ್ಗಳು ಸೇರಿದಂತೆ ಇಡೀ 'ಒಡೆಯ' ಚಿತ್ರತಂಡ ಕ್ಯಾಮರಾಗೆ ಪೋಸ್ ನೀಡಿದೆ. ಇನ್ನು ಒಂದು ವಾರ ಸ್ವಿಡ್ಜರ್ಲೆಂಡ್ನಲ್ಲಿ ಶೂಟಿಂಗ್ ಮುಗಿಸಿ ಚಿತ್ರತಂಡ ಬೆಂಗಳೂರಿಗೆ ವಾಪಸ್ ಆಗಲಿದೆ. ಅಂದುಕೊಂಡಂತೆ ಎಲ್ಲ ಕೆಲಸಗಳು ಮುಗಿದರೆ ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಸಿನಿಮಾ ತೆರೆಗೆ ಬರಲಿದೆ.
![Odeya team in Switzerland](https://etvbharatimages.akamaized.net/etvbharat/prod-images/kn-bng-03-switzerlandnasongshootinignaledarshan-photos_23102019204653_2310f_1571843813_832.jpg)