'ಲವ್ ಮಾಕ್ಟೇಲ್' ಚಿತ್ರದ ಯಶಸ್ಸಿನ ನಂತರ ನಾಯಕ 'ಮದರಂಗಿ' ಕೃಷ್ಣ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದಾರೆ. ಈಗಾಗಲೇ ಅವರು 'ಕೃಷ್ಣ ಅಟ್ ಜಿಮೇಲ್ ಡಾಟ್ಕಾಂ', 'ಲವ್ ಮಾಕ್ಟೇಲ್ 2' ಮತ್ತು 'ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 'ಶುಗರ್ ಫ್ಯಾಕ್ಟರಿ' ಎಂಬ ಇನ್ನೊಂದು ಹೊಸ ಚಿತ್ರದಲ್ಲೂ ಅವರು ನಟಿಸಬೇಕಿದೆ. ಈ ಮಧ್ಯೆ, ಕೃಷ್ಣ ಅಭಿನಯದ ಇನ್ನೊಂದು ಹೊಸ ಚಿತ್ರದ ಘೋಷಣೆಯಾಗಿದೆ.
- " class="align-text-top noRightClick twitterSection" data="
">
ಹೊಸ ವರ್ಷದ ಪ್ರಯುಕ್ತ ಕೃಷ್ಣ ಅಭಿನಯದ ಹೊಸ ಚಿತ್ರವೊಂದರ ಘೋಷಣೆಯಾಗಲಿದೆ ಎಂಬ ಸುದ್ದಿಯೊಂದು ಕೆಲವು ದಿನಗಳ ಹಿಂದೆ ಕೇಳಿ ಬಂದಿತ್ತು. ಅದರಂತೆ, ಶುಕ್ರಾರ ಬೆಳಗ್ಗೆ 'ಮಿಸ್ಟರ್ ಬ್ಯಾಚುಲರ್' ಎಂಬ ಹೊಸ ಚಿತ್ರದ ಘೋಷಣೆಯಾಗಿದೆ. ಈ ಚಿತ್ರದಲ್ಲಿ ಕೃಷ್ಣ 'ಮಿಸ್ಟರ್ ಬ್ಯಾಚುಲರ್' ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರ ಹೊಸ ನಿರ್ಮಾಪಕರು ಮತ್ತು ನಿರ್ದೇಶಕರಿಂದ ತಯಾರಾಗ್ತಿದೆ. ಶ್ರೀನಿವಾಸ್ ಮತ್ತು ಸ್ವರ್ಣಲತಾ ಎನ್ನುವವರು ಈ ಚಿತ್ರವನ್ನು ನಿರ್ಮಿಸಿದ್ರೆ, ನಾಯ್ಡು ಬಂಡಾರ್ ಎನ್ನುವವರು ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸುತ್ತಿರುವ ಈ ಚಿತ್ರದ ಶೀರ್ಷಿಕೆ ಮಾತ್ರ ಈಗ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.