ಪುನೀತ್ ರಾಜ್ ಕುಮಾರ್ ಒಡೆತನದ ಪಿಆರ್‌ಕೆ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಕಾಮಿಡಿ ಸಿನಿಮಾ ಒನ್ ಕಟ್ ಟು ಕಟ್. ಫ್ರೆಂಚ್ ಬಿರಿಯಾನಿ ಸಿನಿಮಾ ಆದಮೇಲೆ ಡ್ಯಾನಿಶ್ ಸೇಠ್ ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿರೋ ಎರಡನೇ ಸಿನಿಮಾ ಇದು. ಚಿತ್ರದ ಟೈಟಲ್ ನಿಂದಲೇ ಸ್ಯಾಂಡಲ್ ವುಡ್ನಲ್ಲಿ ಗಮನ ಸೆಳೆದ ಒನ್ ಕಟ್ ಟು ಕಟ್ ಸಿನಿಮಾದ ಟ್ರೈಲರ್ ಬಿಡುಡಗೆ ಆಗಿದೆ.
- " class="align-text-top noRightClick twitterSection" data="">
ವಂಶಿಧರ್ ಭೋಗರಾಜು ನಿರ್ದೇಶನದ ಒನ್ ಕಟ್ ಟು ಕಟ್ ಚಿತ್ರದ ಟ್ರೈಲರ್ ಕಾಮಿಡಿ ಜೊತೆಗೆ ಶಿಕ್ಷಣದ ಗಂಭೀರತೆಯ ಕಥೆಯಾಗಿದೆ. ಡ್ಯಾನಿಶ್ ಸೇಠ್ ಈ ಚಿತ್ರದಲ್ಲಿ ಗೋಪಿ ಎಂಬ ಶಿಕ್ಷಕನ ಪಾತ್ರ ಮಾಡಿದ್ದಾರೆ. ಕಲೆ ಮತ್ತು ಕರಕುಶಲ ಶಿಕ್ಷಕ ಗೋಪಿಯ ಸುತ್ತ ಕಥೆ ಸುತ್ತುತ್ತದೆ. ನಾಲ್ಕು ಜನ ಒತ್ತೆಯಾಳಾಗಿರಿಸಿಕೊಂಡಿರುವ, ಶಾಲೆಯನ್ನು ಉಳಿಸುವ ಕಾರ್ಯ ಇವರದ್ದು.
ಡ್ಯಾನಿಶ್ ಸೇಠ್ ಜೊತೆಯಾಗಿ ಸಂಯುಕ್ತ ಹೊರನಾಡ್ ಕಾಣಿಸಿಕೊಂಡಿದ್ದಾರೆ. ಇವರೊಟ್ಟಿಗೆ ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ವಿನೀತ್ ಬೀಪ್ ಕುಮಾರ್ ಮತ್ತು ಸಂಪತ್ ಮೈತ್ರೇಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಂಶಿಧರ್ ಭೋಗರಾಜು ನಿರ್ದೇಶನದ ಮತ್ತು ಪಿಆರ್‌ಕೆ ಬ್ಯಾನರ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಗುರುದತ್ತ ತಲ್ವಾರ್ ನಿರ್ಮಾಣ ಮಾಡಿದ್ದಾರೆ.
ಒನ್ ಕಟ್ ಟು ಕಟ್ ಸಿನಿಮಾ ಬಗ್ಗ ಮಾತನಾಡಿರೋ ಡ್ಯಾನಿಶ್ ಸೇಠ್, ಫ್ರೆಂಚ್ ಬಿರಿಯಾನಿ ಮತ್ತು ಹಂಬಲ್ ಪೊಲಿಟಿಷಿಯನ್ ನೋಗರಾಜ್ ನಂತರ, ಇದು ಅಮೆಜಾನ್ ಪ್ರೈಮ್ ವಿಡಿಯೋದೊಂದಿಗೆ ನನ್ನ ಮೂರನೇ ಸಹಯೋಗವಾಗಿದೆ. ಗೋಪಿ ಪಾತ್ರವನ್ನು ಪೂರ್ಣ ಪ್ರಮಾಣದ ಚಿತ್ರಕ್ಕೆ ವಿಸ್ತರಿಸುವುದರಲ್ಲಿ ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ.
ಪಿಆರ್‌ಕೆ ಪ್ರೊಡಕ್ಷನ್ಸ್‌ನೊಂದಿಗೆ ನನ್ನ ಎರಡನೇ ಸಿನಿಮಾ. ನಾನು ಈ ಹಿಂದೆ ವಂಶಿಧರ್ ಅವರೊಂದಿಗೆ ಕೆಲಸ ಮಾಡಿದ್ದೇನೆ. ಆದ್ದರಿಂದ ಅವರೊಂದಿಗೆ ಮತ್ತೆ ಕೆಲಸ ಮಾಡುವುದು ನನಗೆ ಮನೆಗೆ ಮರಳಿದ ಹಾಗಿದೆ. ಗೋಪಿ ಪಾತ್ರ ಪ್ರೇಕ್ಷಕರಿಂದ ಹೆಚ್ಚಿನ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆದಿದೆ. ಈ ಚಿತ್ರದಲ್ಲಿ ಒತ್ತೆಯಾಳಾಗುವುದು ಮತ್ತು ಸಾಮಾಜಿಕ ಮಾಧ್ಯಮದ ಕಾರ್ಯಕರ್ತರನ್ನು ಎದುರಿಸುವುದನ್ನು ವೀಕ್ಷಕರು ನೋಡಬಹುದು ಅಂತಾ ಡ್ಯಾನಿಶ್ ಸೇಠ್ ಹೇಳಿದ್ದಾರೆ. ಫೆಬ್ರವರಿ 3ರಂದು ಭಾರತದಲ್ಲಿ ಮತ್ತು 240 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಒನ್ ಕಟ್ ಟು ಕಟ್ ಸಿನಿಮಾವನ್ನ ನೋಡಬಹುದಾಗಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ