ವಾಷಿಂಗ್ಟನ್: ಡೇನಿಯಲ್ ಕ್ರೇಮ್ ಅಭಿನಯದ ಜೇಮ್ಸ್ ಬಾಂಡ್ ಸೀರೀಸ್ ನ 25ನೇ ಸಿನಿಮಾ "ನೋ ಟೈಮ್ ಟು ಡೈ" ಬಿಡುಗಡೆ ದಿನಾಂಕವನ್ನು ಮತ್ತೆ ಮುಂದೂಡಲಾಗಿದೆ. ಏಪ್ರಿಲ್ 2 ರಂದು ಚಿತ್ರ ರಿಲೀಸ್ ಮಾಡಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೀಗ ಅಕ್ಟೋಬರ್ 8 ರಂದು ಚಿತ್ರಮಂದಿರಕ್ಕೆ ಬರುವುದಾಗಿ ಚಿತ್ರ ತಂಡ ತಿಳಿಸಿದೆ.
ಬಹಳ ನಿರೀಕ್ಷೆ ಮೂಡಿಸಿರುವ ಹಾಲಿವುಡ್ ಚಿತ್ರ ಕೊರೊನಾ ಸೋಂಕಿನ ಕಾರಣದಿಂದಾಗಿ ಬಿಡುಗಡೆ ದಿನಾಂಕ ಮುಂದೆ ಹೋಗಿದೆ ಎಂದು ವೆರೈಟಿ ವರದಿ ಮಾಡಿದೆ. ಡೆನೀಯಲ್ ಕ್ರೇಗ್ ನಟಿಸಿರುವ ಈ ಚಿತ್ರ ಇದುವರೆಗೂ ಬಿಡುಗಡೆಗೊಂಡಿರುವ ಬಾಂಡ್ ಚಿತ್ರಗಳಲ್ಲೇ ಅತಿ ಹೆಚ್ಚು ಆದಾಯ ಗಳಿಸುವ ನಿರೀಕ್ಷೆ ಇದ್ದು, ಈ ಚಿತ್ರವು 200 ಮಿಲಿಯನ್ ಡಾಲರ್ ಬೆಲೆ ಹೊಂದಿದೆ. ಚಿತ್ರವು ಯೂನಿವರ್ಸಲ್ ರೈಟ್ಸ್ ಹೊಂದಿದೆ.
ರಿ ಜೋಜಿ ನಿರ್ದೇಶನದ ಚಿತ್ರದಲ್ಲಿ ಡೇನಿಯಲ್ ಕ್ರೇಗ್, ನೌಮೈ ಹ್ಯಾರೀಸ್, ಬೆನ್ ವಿಶ್ಹಾ, ಅನಾಡೇ ಅಮ್ಸ್‌ರ್, ಬಿಲ್ಲಿ ಮ್ಯಾಗ್ನಾಸಿನ್, ರೋರಿ ಕಿನ್ನಿಯರ್ ಸೇರಿದಂತೆ ಸಾಕಷ್ಟು ನಟ-ನಟಿಯರು ಈ ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ.