ಬಹಳ ದಿನಗಳ ನಂತ್ರ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿರುವ ರಾಧಿಕಾ ಕುಮಾರಸ್ವಾಮಿ ಇದೀಗ ದಮಯಂತಿ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ರಿಗೂ ಗೊತ್ತಿದೆ. ಈ ಚಿತ್ರ ಟೈಟಲ್ ಮತ್ತು ಟೀಸರ್ನಿಂದಲೇ ಹೆಚ್ಚು ಸದ್ದು ಮಾಡಿತ್ತು. ಇದೀಗ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ರಾಧಿಕಾ ಕುಮಾರಸ್ವಾಮಿಯ ಉಗ್ರಾವತಾರ ಬಹಿರಂಗವಾಗಿದೆ.
ಈ ಸಿನಿಮಾದ ಮತ್ತೊಂದು ವಿಶೇಷತೆ ಏನಂದ್ರೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ 5 ಭಾಷೆಯಲ್ಲಿ ಟೀಸರ್ ತಯಾರಾಗಿದ್ದು ಒಂದೇ ಬಾರಿ ಪಂಚ ಭಾಷೆಯಲ್ಲಿ ರಿಲೀಸ್ ಆಗಿತ್ತು. ಐದು ಭಾಷೆಗಳಲ್ಲಿ ಬರಲು ರೆಡಿಯಾಗಿರುವ ದಮಯಂತಿಯ ಅವತಾರ ಹೇಗಿದೆ ಎಂಬುದನ್ನು ಸಿನಿಮಾ ನೋಡಿಯೇ ಕಣ್ತುಂಬಿಕೊಳ್ಳಬೇಕು.
- " class="align-text-top noRightClick twitterSection" data="">
ಇಂದು ರಿಲೀಸ್ ಆಗಿರುವ ಟ್ರೇಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಲೋಕಾರ್ಪಣೆ ಮಾಡಿದ್ದಾರೆ. ಈ ಸಿನಿಮಾಕ್ಕೆ ನವರಸನ್ ನಿರ್ದೇಶನವಿದ್ದು, ಅವರೇ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಶ್ರೀ ಲಕ್ಷ್ಮೀ ವೃಶಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ತಯಾರಾಗಿರೋ ಈ ಸಿನಿಮಾಗೆ ಆರ್.ಎಸ್. ಗಣೇಶ್ ನಾರಾಯಣ್ ಸಂಗೀತ ಸಂಯೋಜಿಸಿದ್ದಾರೆ. ಮಹೇಶ್ ರೆಡ್ಡಿ ಸಂಕಲನವಿರೋ ಈ ಸಿನಿಮಾಗೆ ಪಿಕೆಎಚ್ ದಾಸ್ ಕ್ಯಾಮೆರಾ ಕಣ್ಣಾಗಿದ್ದಾರೆ. ಸದ್ಯ ಟ್ರೇಲರ್ ಯೂ ಟ್ಯೂಬ್ನಲ್ಲಿ ಬಾರಿ ಸದ್ದು ಮಾಡುತ್ತಿದೆ.