ETV Bharat / sitara

'ಬಡವ ರಾಸ್ಕಲ್' ಸಿನಿಮಾಗೆ ಡಾಲಿ ಧನಂಜಯ್ 'ಉಡುಪಿ ಹೋಟೆಲ್..' ಹಾಡು - ಬಡವ ರಾಸ್ಕಲ್ ಸಿನಿಮಾ

ಪಕ್ಕಾ ಮಧ್ಯಮವರ್ಗದ ಹುಡುಗನ ಕಥೆ ಆಧರಿಸಿರುವ ಬಡವ ರಾಸ್ಕಲ್ ಸಿನಿಮಾಕ್ಕೆ ಇಷ್ಟು ದಿನ ಸಹಾಯಕ ನಿರ್ದೇಶಕರಾಗಿದ್ದ ಗುರು ಶಂಕರ್ ಆಕ್ಷನ್ ಕಟ್ ಹೇಳಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ನಾಯಕ ಧನಂಜಯ್ ಜೊತೆ ನಟಿ ಅಮೃತಾ ಅಯ್ಯಂಗಾರ್ ತೆರೆ ಹಂಚಿಕೊಂಡಿದ್ದಾರೆ.

daali-dhananjay-wrote-song-for-badava-rascal-movie
'ಬಡವ ರಾಸ್ಕಲ್' ಸಿನಿಮಾಗೆ ಡಾಲಿ ಧನಂಜಯ್ 'ಉಡುಪಿ ಹೋಟೆಲ್..' ಹಾಡು
author img

By

Published : Aug 7, 2021, 2:00 AM IST

ಕನ್ನಡ ಚಿತ್ರರಂಗದಲ್ಲಿ ಮಾಸ್ ಶೀರ್ಷಿಕೆಯಿಂದಲೇ ಸದ್ದು ಮಾಡ್ತಿರುವ ಚಿತ್ರ 'ಬಡವ ರಾಸ್ಕಲ್'. ಡಾಲಿ ಧನಂಜಯ್ ಪಕ್ಕಾ ಮಾಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಡವ ರಾಸ್ಕಲ್ ಚಿತ್ರ, ಸೆಪ್ಟೆಂಬರ್ 24ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗೋದಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ಸದ್ಯ ಪೋಸ್ಟರ್​​ನಿಂದಲೇ ಕುತೂಹಲ ಹೆಚ್ಚಿಸಿರುವ ಈ ಚಿತ್ರಕ್ಕೆ ಒಂದು ತಿಂಗಳು ಮುಂಚಿತವಾಗಿಯೇ ಪ್ರಮೋಷನ್ ಮಾಡಲಾಗ್ತಿದೆ. ಧನಂಜಯ್ ನಟನೆ ಅಲ್ಲದೆ, ಸಾಹಿತ್ಯ ಬರೆಯೋದಕ್ಕೂ ಸೈ ಎನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಬಡವ ರಾಸ್ಕಲ್ ಚಿತ್ರದಲ್ಲಿ ಅಭಿನಯದ ಜೊತೆಗೆ 'ಉಡುಪಿ ಹೋಟೆಲ್...' ಎಂಬ ಹಾಡನ್ನ ಬರೆದಿದ್ದಾರೆ. ಈ ಹಾಡು ಇದೇ ಆಗಸ್ಟ್ 9ರಂದು ಬಿಡುಗಡೆ ಆಗುತ್ತಿದೆ.

ಈ ಹಾಡಿನ ಬಗ್ಗೆ ಧನಂಜಯ್, ನಿರ್ದೇಶಕ ಗುರು ಶಂಕರ್, ಸಂಗೀತ ನಿರ್ದೇಶಕ ವಾಸುಕಿ ವೈಭವ್ ನಡುವೆ ಹಾಡು ಬರೆಯವುದರ ಬಗ್ಗೆ ಚರ್ಚೆಯ ಸಂದರ್ಭವು ನೋಡುಗರ ಗಮನ ಸೆಳೆದಿದೆ. ನಟರು, ನಿರ್ಮಾಪಕರು ಹೇಗೆಲ್ಲಾ ಯೋಚನೆ ಮಾಡ್ತಾರೆ ಎಂಬುದನ್ನು ಈ ವಿಡಿಯೋ ಮೂಲಕ ಹೇಳಲಾಗಿದೆ.

ಚರ್ಚೆಯ ವಿಡಿಯೋ

ಪಕ್ಕಾ ಮಧ್ಯಮವರ್ಗದ ಹುಡುಗನ ಕಥೆ ಆಧರಿಸಿರುವ ಬಡವ ರಾಸ್ಕಲ್ ಸಿನಿಮಾಕ್ಕೆ ಇಷ್ಟು ದಿನ ಸಹಾಯಕ ನಿರ್ದೇಶಕರಾಗಿದ್ದ ಗುರು ಶಂಕರ್ ಆಕ್ಷನ್ ಕಟ್ ಹೇಳಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ. ನಾಯಕ ಧನಂಜಯ್ ಜೊತೆ ನಟಿ ಅಮೃತಾ ಅಯ್ಯಂಗಾರ್ ತೆರೆ ಹಂಚಿಕೊಂಡಿದ್ದಾರೆ. 'ಪಾಪ್‌ಕಾರ್ನ್ ಮಂಕಿ ಟೈಗರ್' ಬಳಿಕ ಈ ಜೋಡಿ ಮತ್ತೆ ಒಂದಾಗಿದೆ. ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಧನಂಜಯ್ ಜೊತೆ ಗುಜ್ಮಾಲ್ ಪುರುಷೋತ್ತಮ್ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ: ಸ್ನಾನ ಗೃಹದಲ್ಲಿ ಜಾರಿ ಬಿದ್ದ ಹಿರಿಯ ನಟಿ ಡಾ. ಲೀಲಾವತಿ ಬೆನ್ನುಮೂಳೆಗೆ ಸಣ್ಣ ಪೆಟ್ಟು: ಒಂದು ತಿಂಗಳ ವಿಶ್ರಾಂತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.