ನಟ ಆ ದಿನಗಳು ಚೇತನ್ ಸಂಸ್ಥಾಪನೆಯ 'ಫೈರ್' ಸಂಸ್ಥೆ ಹಾಗೂ ವಿಶೇಷ ಚೇತನರ ಅಭಿವೃದ್ಧಿ ಫೌಂಡೇಷನ್ ವತಿಯಿಂದ ವಿಶೇಷ ಚೇತನರಿಗಾಗಿ ಅನಿಕೇತನ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇದೇ ತಿಂಗಳ 27ರಂದು ಆಯೋಜಿಸಲಾಗಿದೆ.
ಮೂರು ವರ್ಷಗಳಿಂದ ವಿಶೇಷ ಚೇತನರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ 'ಅಭಿವೃದ್ಧಿ ಫೌಂಡೇಶನ್' ಸಂಸ್ಥೆ 'ಫೈರ್' ಸಂಸ್ಥೆ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಕುರುಬರಹಳ್ಳಿ ವೃತ್ತದಲ್ಲಿರುವ ಡಾ. ರಾಜ್ಕುಮಾರ್ ಕ್ರೀಡಾಂಗಣದಲ್ಲಿ ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕವಿತಾ ಲಂಕೇಶ್, ನಟ ಚೇತನ್, ನಿರ್ದೇಶಕ ಕವಿರಾಜ್, ಜಯಲಕ್ಷ್ಮಿ ಪಾಟೀಲ್ ಭಾಗಿಯಾಗಲಿದ್ದಾರೆ.
ಇನ್ನು ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಫೈರ್ ಸಂಸ್ಥೆ ಸಂಸ್ಥಾಪಕ ನಟ ಚೇತನ್ ಹಾಗೂ ಅಭಿವೃದ್ಧಿ ಫೌಂಡೇಶನ್ ಸದಸ್ಯರು ಸುದ್ದಿಗೋಷ್ಠಿ ನಡೆಸಿ ಅನಿಕೇತನ ಸಾಂಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿಸಿದ್ರು.
ಅಲ್ಲದೆ ಈ ಕಾರ್ಯಕದಲ್ಲಿ ವಿಶೇಷ ಚೇತನರ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ಪ್ರವಾಹ ಪೀಡಿತರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವಿಶೇಷ ಚೇತನ 4 ಕುಟುಂಬಗಳಿಗೆ ಧನಸಹಾಯ ಮಾಡಲಾಗುತ್ತದೆ ಎಂದು ನಟ ಚೇತನ್ ಕಾರ್ಯಕ್ರಮದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡ್ರು.