ETV Bharat / sitara

'ಕ್ರಿಟಿಕಲ್ ಕೀರ್ತನೆಗಳು' ಮೊದಲ ಪ್ರತಿ ಸಿದ್ಧ...ಶೀಘ್ರದಲ್ಲೇ ಸಿನಿಮಾ ಬಿಡುಗಡೆ - Tabala nani starring new film

ಅಪೂರ್ವ, ತಬಲಾ ನಾಣಿ, ರಾಜೇಶ್​​ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಕ್ರಿಟಿಕಲ್ ಕೀರ್ತನೆಗಳು' ಬಿಡುಗಡೆಗೆ ಸಿದ್ಧವಿದೆ. ಚಿತ್ರದ ಮೊದಲ ಪ್ರತಿ ರೆಡಿಯಾಗಿದ್ದು ಅಕ್ಟೋಬರ್​​ನಲ್ಲಿ ಸಿನಿಮಾ ಬಿಡುಗಡೆ ಸಾಧ್ಯತೆ ಇದೆ.

Critical keertanegalu
'ಕ್ರಿಟಿಕಲ್ ಕೀರ್ತನೆಗಳು'
author img

By

Published : Sep 22, 2020, 9:09 AM IST

ಕೇಸರಿ ಫಿಲ್ಮ್ ಕ್ಯಾಪ್ಚರ್ಸ್ ಬ್ಯಾನರ್ ಅಡಿಯಲ್ಲಿ ಕುಮಾರ್ ಮತ್ತು ಸ್ನೇಹಿತರು ನಿರ್ಮಿಸಿರುವ 'ಕ್ರಿಟಿಕಲ್ ಕೀರ್ತನೆಗಳು' ಚಿತ್ರದ ಮೊದಲ ಪ್ರತಿ ಸಿದ್ಧ ಆಗಿದ್ದು ಸೆನ್ಸಾರ್ ಮುಂದೆ ತೆರಳಲಿದೆ. ಮುಂದಿನ ತಿಂಗಳು ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆ ಎನ್ನಲಾಗಿದೆ.

Critical keertanegalu
ಅಪೂರ್ವ , ತಬಲಾ ನಾಣಿ

ಈ ಚಿತ್ರಕ್ಕೆ ಕುಮಾರ್​​​. ಎಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಕುಮಾರ್ ಇದಕ್ಕೂ ಮುನ್ನ'ಕೆಮಿಸ್ಟ್ರಿ ಆಫ್ ಕರಿಯಪ್ಪ' ನಿರ್ದೇಶನ ಮಾಡಿ ಹೆಸರು ಮಾಡಿದವರು. ಚಿತ್ರಕ್ಕೆ ಶಿವಸೇನಾ ಹಾಗೂ ಶಿವಶಂಕರ್ ಛಾಯಾಗ್ರಹಣ, ವೀರ ಸಮರ್ಥ್ ಸಂಗೀತ ಸಂಯೋಜನೆ ಇದೆ. ಬೆಂಗಳೂರು, ಕುಂದಾಪುರ, ಮಂಡ್ಯ, ಬೆಳಗಾವಿ ಹಾಗೂ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.

Critical keertanegalu
ದೀಪಾ ಜಗದೀಶ್

ಸದ್ಯಕ್ಕೆ ಐಪಿಎಲ್ ಪಂದ್ಯಾವಳಿಗಳು ನಡೆಯುತ್ತಿದ್ದು ಕ್ರಿಕೆಟ್​​​ನಲ್ಲಿ ಹೇಗೆ ಬೆಟ್ಟಿಂಗ್​ ಇರಲಿದೆ ಎಂದು ಈ ಚಿತ್ರದಲ್ಲಿ ಹೇಳಲಾಗಿದೆ. ಚಿತ್ರದಲ್ಲಿ ಹಾಸ್ಯ ಕೂಡಾ ಇದೆ ಎನ್ನಲಾಗಿದೆ. ತಬಲಾ ನಾಣಿ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ತರಂಗ ವಿಶ್ವ, ಅಪೂರ್ವ, ಅಪೂರ್ವ ಭಾರದ್ವಾಜ್, ಅರುಣ ಬಾಲರಾಜ್, ಧರ್ಮ, ದೀಪಾ ಜಗದೀಶ್​​, ದಿನೇಶ್​​​​ ಮಂಗಳೂರು ಹಾಗೂ ಇನ್ನಿತರರು 'ಕ್ರಿಟಿಕಲ್ ಕೀರ್ತನೆಗಳು' ಚಿತ್ರದ ತಾರಾಬಳಗದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.