ನವದೆಹಲಿ: ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಅನೇಕರು ತಮ್ಮ ಕೈಲಾದ ಸಹಾಯ ಮಾಡ್ತಿದ್ದು, ಇದೀಗ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಕೂಡ ಈ ಹಾದಿ ತುಳಿದಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಆಕ್ಸಿಜನ್ ಕೊರತೆ ನೀಗಿಸಲು ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ದಾನ ಮಾಡುವುದಾಗಿ ಅಕ್ಷಯ್ ಹಾಗೂ ಪತ್ನಿ ಟ್ವಿಂಕಲ್ ಖನ್ನಾ ಘೋಷಣೆ ಮಾಡಿದ್ದರು. ಅದರಂತೆ 100 ಆಮ್ಲಜನಕ ಸಾಂದ್ರಕ ದಾನ ಸಹ ಮಾಡಿದ್ದರು.
ಇದನ್ನೂ ಓದಿ: ಪಿಪಿಇ ಕಿಟ್ ಧರಿಸಿ ಮೃತ ಶಿಕ್ಷಕನ ಅಂತ್ಯ ಸಂಸ್ಕಾರ ಮಾಡಿದ ವಿದ್ಯಾರ್ಥಿಗಳು
ಸದ್ಯ ಟ್ವಿಂಕಲ್ ಖನ್ನಾ ದೆಹಲಿ ಹಾಗೂ ಪಂಜಾಬ್ಗೆ ಮತ್ತಷ್ಟು ಆಕ್ಸಿಜನ್ ಸಾಂದ್ರಕ ರವಾನೆ ಮಾಡಿದ್ದಾರೆ. ಈ ಮೂಲಕ ಜನರ ತೊಂದರೆಗೆ ಸ್ಪಂದಿಸಿದ್ದಾರೆ.