ದೇಶದೆಲ್ಲೆಡೆ ಕೊರೊನಾ ಭೀತಿ ಮನೆ ಮಾಡಿದ್ದು, ವೈರಸ್ ಹರಡದಂತೆ ಆಯಾ ರಾಜ್ಯಗಳು ಕ್ರಮ ಕೈಗೊಳ್ಳುತ್ತಿವೆ. ಇದೇ ಹಿನ್ನೆಲೆಯಲ್ಲಿ ತಮ್ಮ ರಾಜ್ಯ ಸರ್ಕಾರಗಳ ಸಲಹೆಯ ಮೇರೆಗೆ ಜಮ್ಮು ಮತ್ತು ಕಾಶ್ಮೀರ, ಕೇರಳ ಹಾಗೂ ದೆಲಿಯಲ್ಲಿರುವ ಪಿವಿಆರ್ ಚಿತ್ರ ಮಂದಿರಗಳನ್ನು ಮಾರ್ಚ್ 31ರವರೆಗೆ ಸ್ಥಗಿತಗೊಳಿಸಲಾಗಿದೆ.
ಈ ಬಗ್ಗೆ ಗುರುವಾರ ಪಿವಿಆರ್ ಮುಖ್ಯಸ್ಥರು ಅಧಿಕೃತವಾಗಿ ಟ್ವೀಟ್ ಮೂಲಕ ತಿಳಿಸಿದ್ದು, ಕೇರಳ, ದೆಹಲಿ, ಜಮ್ಮ ಮತ್ತು ಕಾಶ್ಮೀರ ಸರ್ಕಾರದ ಸಲಹೆಯ ಮೇರೆಗೆ ನಮ್ಮ ಪಿವಿಆರ್ ಸಿನಿಮಾವನ್ನು ಮಾರ್ಚ್ 31ರವರೆಗೆ ಸ್ಥಗಿತಗೊಳಿಸುತ್ತೇವೆ. ಕೋವಿಡ್ 19 ಭೀತಿ ಇರುವುದಿಂದ ಸರ್ಕಾರದ ಮನವಿಗೆ ನಾವು ಸ್ಪಂದಿಸುತ್ತೇವೆ ಎಂದು ಹೇಳಿದ್ದಾರೆ.
-
In adherence of the government's precautionary advisory against #COVID19, #PVR will shut down all cinema halls in Kerala, Delhi, UT of Jammu and Kashmir till 31st March.
— PVRCinemas 🎬 (@_PVRCinemas) March 12, 2020 " class="align-text-top noRightClick twitterSection" data="
Read the media statement to know more. pic.twitter.com/u0qDmweQ3C
">In adherence of the government's precautionary advisory against #COVID19, #PVR will shut down all cinema halls in Kerala, Delhi, UT of Jammu and Kashmir till 31st March.
— PVRCinemas 🎬 (@_PVRCinemas) March 12, 2020
Read the media statement to know more. pic.twitter.com/u0qDmweQ3CIn adherence of the government's precautionary advisory against #COVID19, #PVR will shut down all cinema halls in Kerala, Delhi, UT of Jammu and Kashmir till 31st March.
— PVRCinemas 🎬 (@_PVRCinemas) March 12, 2020
Read the media statement to know more. pic.twitter.com/u0qDmweQ3C
ಪಿವಿಆರ್ ಸಿನಿಮಾಕ್ಕೆ ಬರುವ ಪ್ರೇಕ್ಷಕರ ಕಾಳಜಿಯನ್ನು ಮತ್ತು ಸರ್ಕಾದ ನಿರ್ಧಾರವನ್ನು ನಾವು ಗೌರವಿಸುತ್ತೇವೆ ಎಂದು ಪಿವಿಆರ್ ತಿಳಿಸಿದೆ. ಅಲ್ಲದೆ ಮುಂದಿನ ಏಪ್ರಿನ್ 1ರಿಂದ ಸಿನಿಮಾಗಳನ್ನು ಪ್ರದರ್ಶನ ಮಾಡುವುದಾಗಿಯೂ ತಿಳಿಸಲಾಗಿದೆ.
ನಿನ್ನೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಷ್ಟ್ರ ರಾಜಧಾನಿಯಲ್ಲಿರುವ ಚಿತ್ರಮಂದಿರಗಳು ಮತ್ತು ಪಲ್ಟಿಪ್ಲೆಕ್ಸ್ಗಳನ್ನು ಸ್ಥಗಿತಗೊಳಿಸುವಂತೆ ಕೇಳಿಕೊಂಡಿದ್ದರು.