ETV Bharat / sitara

ಸಂಜನಾ ತಂದೆ-ತಾಯಿಗೆ ಕೊರೊನಾ: ಖಿನ್ನತೆಗೊಳಗಾದ್ರಾ ನಟಿಮಣಿಯರು? - Actress Sanjana

ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟು ಆರೋಪ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ಸಂಜನಾ ತಂದೆ-ತಾಯಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದಾಗಿ ನಟಿ ಸಂಜನಾ ಖಿನ್ನತೆಗೊಳಗಾಗಿದ್ದಾರೆ ಎನ್ನಲಾಗ್ತಿದೆ.

Corona positive for Sanjana Parents
ನಟಿ ರಾಗಿಣಿ ಮತ್ತು ಸಂಜನಾ
author img

By

Published : Nov 4, 2020, 9:57 AM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟು ಆರೋಪ ಪ್ರಕರಣದಲ್ಲಿ ಬಂಧಿಯಾಗಿರುವ ನಟಿಮಣಿಯರು ಬಹಳ ಬೇಸರದಿಂದ ಪರಪ್ಪನ ಅಗ್ರಹಾರದಲ್ಲಿ ಸಮಯ ಕಳಿಯುತ್ತಿದ್ದಾರೆ. ಹೈಕೋರ್ಟ್​ನಿಂದ ತಮಗೆ ರಿಲೀಫ್ ಸಿಗುತ್ತೆ ಎಂದುಕೊಂಡಿದ್ದವರ ನಿರೀಕ್ಷೆ ಹುಸಿಯಾಗಿದೆ. ಇಬ್ಬರು ನಟಿಯರ ಮೇಲಿನ ಆರೋಪಕ್ಕೆ ಸಾಕಷ್ಟು ಪುರಾವೆಗಳು ಸದ್ಯ ತನಿಖಾಧಿಕಾರಿಗಳ ಕೈಯಲ್ಲಿವೆ ಎಂದು ಹೇಳಲಾಗ್ತಿದೆ.

ಸಂಜನಾಗೆ ಡಿಪ್ರೆಶನ್: ಸದ್ಯ ನಟಿ ಸಂಜನಾ ಗಲ್ರಾನಿ ಪರಪ್ಪನ ಅಗ್ರಹಾರದಲ್ಲಿದ್ದು, ಜಾಮೀನು ಸಿಕ್ಕಿಲ್ಲವೆಂಬ ಬೇಸರ ಅವರಿಗೆ ಕಾಡುತ್ತಿಲ್ಲ. ಬದಲಾಗಿ ಅವರ ತಂದೆ ತಾಯಿಗೆ ಕೊರೊನಾ ಸೋಂಕು ತಗುಲಿದ ಕಾರಣ ಸಂಜನಾಗೆ ಫುಲ್ ಟೆನ್ಶನ್​ ಆಗಿದ್ದಾರೆ. ತನ್ನ ಅಪ್ಪ-ಅಮ್ಮನ ಆರೋಗ್ಯದ ಬಗ್ಗೆ ಜೈಲಾಧಿಕಾರಿಗಳ ಬಳಿ ಕೇಳುತ್ತಿದ್ದಾರೆ. ತಂದೆ-ತಾಯಿ ಪರಿಸ್ಥಿತಿ ಹೇಗಿದೆ? ಅವರ ಜೊತೆ ಮಾತಾಡಬೇಕು ಎಂದು ಸಂಜನಾ ಕೇಳಿಕೊಂಡಿದ್ದಾರೆ ಎನ್ನಲಾಗ್ತಿದೆ.

ದೀಪಾವಳಿ ಆಚರಿಸಲು ಪ್ಲಾನ್​ ಮಾಡಿದ್ದ ರಾಗಿಣಿ: ಇತ್ತ ರಾಗಿಣಿ ತನಗೆ ಜಾಮೀನು ಸಿಗುತ್ತದೆ ಎಂದು ಭಾರಿ ಭರವಸೆಯಲ್ಲಿದ್ದರು. ಈ ಬಗ್ಗೆ ಜೈಲಾಧಿಕಾರಿಗಳ ಜೊತೆ ಕೂಡ ಮಾತುಕತೆ ನಡೆಸಿದ್ದರು. ದೀಪಾವಳಿ ಹಬ್ಬ ಬಹಳ ಸಂಭ್ರಮದಿಂದ ಆಚರಿಸುತ್ತೇವೆ. ತನಗೆ ‌ಜಾಮೀನು ಸಿಕ್ಕಿದರೆ ಮನೆಗೆ ತೆರಳಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುವುದಾಗಿ ತಿಳಿಸಿದ್ದರು ಎನ್ನಲಾಗ್ತಿದೆ. ಆದರೆ ಹೈಕೋರ್ಟ್ ಜಾಮೀನು ಅರ್ಜಿ ವಜಾ ಮಾಡಿದ ಕಾರಣ ಸದ್ಯ ಪರಪ್ಪನ ಅಗ್ರಹಾರದಲ್ಲಿ ಜೀವನ ಕಳೆಯುವಂತಾಗಿದೆ.

ರಾಗಿಣಿ ಜೈಲಿನಲ್ಲಿ ಸುಮಾರು 50 ದಿನ ಅವಧಿ ಕಳೆದಿದ್ದು, ಸಂಜನಾ 46 ದಿನ ಕಳೆದಿದ್ದಾರೆ. ಸದ್ಯ ಇನ್ನಷ್ಟು ದಿನ ಪರಪ್ಪನ ಅಗ್ರಹಾರದಲ್ಲಿ ಕಳೆಯುವುದು ಅನಿವಾರ್ಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.