ETV Bharat / sitara

ಎಲ್ಲರನ್ನು ನಗಿಸಲು ಬರ್ತಿದೆ ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್-2 - ರಕ್ಷಿತಾ

ಇಂದಿನಿಂದ ಪ್ರತಿ ಶನಿವಾರ ರಾತ್ರಿ 7.30 ರಿಂದ 10.30ರವರೆಗೆ ಸರಿಗಮಪ ಸೀಸನ್-17 ಹಾಗೂ ಕಾಮಿಡಿ ಕಿಲಾಡಿಗಳು ಚಾಂಪಿಯನ್‍ಶಿಪ್-2 ಮೂಲಕ ಬರ್ತಿದ್ದಾರೆ..

Comedy Killadigalu Championship 2
ಎಲ್ಲರನ್ನು ನಗಿಸಲು ಬರ್ತಿದೆ ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್-2
author img

By

Published : Sep 12, 2020, 5:23 PM IST

ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಕಿರುತೆರೆಯಲ್ಲಿ ಮನರಂಜನೆ ನೀಡುತ್ತಿರುವ ಜೀ ಕನ್ನಡ, ಕಾಮಿಡಿ ಕಿಲಾಡಿಗಳು ಕಲಾವಿದರ ಮೂಲಕ ಕಳೆದ ಬಾರಿಗಿಂತ ಮತ್ತಷ್ಟು ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಕಾಮಿಡಿ ಕಿಲಾಡಿಗಳು ಸೀಸನ್ 1 ಮತ್ತು 2ರ ಕಿಲಾಡಿಗಳ ಜೊತೆ ಸೀಸನ್ 3ರ ಕಿಲಾಡಿಗಳು ಹೊಸದಾಗಿ ತಂಡಗಳಿಗೆ ಸೇರ್ಪಡೆಯಾಗಿ ತಮ್ಮ ತಂಡದ ಬಲವನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ.

36 ಜನ ಕಲಾವಿದರು 6 ತಂಡಗಳಾಗಿ ಫೀಲ್ಡ್​​​​​​ಗೆ ಇಳಿದು ಭರ್ಜರಿಯಾಗಿ ಬ್ಯಾಟಿಂಗ್ ಮಾಡಿ ನಗುವಿನ ಬೌಂಡರಿ, ಸಿಕ್ಸರ್‌ಗಳನ್ನ ಬಾರಿಸುತ್ತಾ ನಿಮ್ಮನ್ನ ಮನರಂಜಿಸಲಿದ್ದಾರೆ.

ಎಲ್ಲರನ್ನು ನಗಿಸಲು ಬರ್ತಿದೆ ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್-2

ಶಿವರಾಜ್‌ ಕೆಆರ್‌ಪೇಟೆ, ಗೋವಿಂದೇಗೌಡ, ನಯನ, ಮಡೇನೂರು ಮನು, ಅಪ್ಪಣ್ಣ ಹಾಗೂ ಸೂರಜ್ ಟೀಮ್‍ನ ಕ್ಯಾಪ್ಟನ್‍ಗಳಾಗಿ ತಮ್ಮ ತಂಡಗಳನ್ನು ಮುನ್ನಡೆಸಲಿದ್ದಾರೆ. ಕಾರ್ಯಕ್ರಮದ ಮುಖುಟಗಳಾದ ನವರಸ ನಾಯಕ ಜಗ್ಗೇಶ್, ಕ್ರೇಜಿ ಕ್ವೀನ್ ರಕ್ಷಿತಾ ಹಾಗೂ ನಿರ್ದೇಶಕ ವಿಕಟಕವಿ ಯೋಗರಾಜ್ ಭಟ್ ಈ ಬಾರಿಯು ಚಾಂಪಿಯನ್‍ಶಿಪ್‍ನ ತೀರ್ಪುಗಾರರಾಗಿ ಹಾಗೂ ತಲಾ ಎರಡು ತಂಡಗಳ ಮಾಲೀಕರಾಗಿ ತಮ್ಮ ತಂಡ ಹುರಿದುಂಬಿಸಿ ಎದುರಾಳಿ ತಂಡಗಳಿಗೆ ಪ್ರಬಲ ಪೈಪೋಟಿ ನೀಡಲಿದ್ದಾರೆ.

ಎಂದಿನಂತೆ ಮಾಸ್ಟರ್ ಆನಂದ್​​ ಕಾರ್ಯಕ್ರಮದ ಸಾರಥಿಯಾಗಿ ತಮ್ಮ ಮಾತಿನ ಚಟಾಕಿಯ ಮೂಲಕ ಕಾರ್ಯಕ್ರಮ ನಿರೂಪಿಸಲಿದ್ದಾರೆ. "ನಾವೆಲ್ಲ ಸೇರಿ ಎದುರಿಸಬೇಕಾದಂತಹ ಪರಿಸ್ಥಿತಿ ಬಂತು. ಇಂತಹ ಸಂಕಷ್ಟದ ಸಮಯದಲ್ಲಿ ಜನ ನಗು ಅನ್ನೋದನ್ನೇ ಮರೆತಿದ್ದರು. ನೊಂದಿರುವ ಮನಸ್ಸುಗಳನ್ನು ನಗಿಸುವುದಕ್ಕೆ ಮತ್ತೆ ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ ಪ್ರಾರಂಭಿಸಲಾಗುತ್ತಿದೆ ಎನ್ನುತ್ತಾರೆ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು.

ಇಂದಿನಿಂದ ಪ್ರತಿ ಶನಿವಾರ ರಾತ್ರಿ 7.30 ರಿಂದ 10.30ರವರೆಗೆ ಸರಿಗಮಪ ಸೀಸನ್-17 ಹಾಗೂ ಕಾಮಿಡಿ ಕಿಲಾಡಿಗಳು ಚಾಂಪಿಯನ್‍ಶಿಪ್-2 ಮೂಲಕ ಬರ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.