IRCTC Green Triangle of Uttarakhand Tour: ದೇವಭೂಮಿ ಉತ್ತರಾಖಂಡ ಪ್ರಸಿದ್ಧ ಆಧ್ಯಾತ್ಮಿಕ ಪ್ರದೇಶಗಳಿಗೆ ಹೆಸರುವಾಸಿ. ಪ್ರಸಿದ್ಧ ದೇವಾಲಯಗಳು, ಹಸಿರುಮಯ ಬೆಟ್ಟ, ಕಣಿವೆಗಳು ಮತ್ತು ಸುಂದರ ತಾಣಗಳನ್ನು ಇಲ್ಲಿ ಆನಂದಿಸಬಹುದಾಗಿದೆ. ಅದಕ್ಕಾಗಿಯೇ ಅನೇಕರು ದೇವಭೂಮಿಗೆ ಭೇಟಿ ಕೊಡಲು ಹಂಬಲಿಸುತ್ತಾರೆ. ನೀವೂ ಇದೇ ಪಟ್ಟಿಯಲ್ಲಿ ಇದ್ದರೆ ಇಲ್ಲಿದೆ ಅವಕಾಶ!
ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್(IRCTC) ನೂತನ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದೆ. ಇದಕ್ಕೆ "ಗ್ರೀನ್ ಟ್ರಯಾಂಗಲ್ ಆಫ್ ಉತ್ತರಾಖಂಡ" ಎಂದು ಹೆಸರಿಟ್ಟಿದೆ. ಈ ಪ್ಯಾಕೇಜ್‌ಗೆ ತಗಲುವ ವೆಚ್ಚವೆಷ್ಟು? ಯಾವ ತಾಣಗಳನ್ನು ವೀಕ್ಷಿಸಬಹುದು? ಮತ್ತು ಯಾವಾಗ ಪ್ರಯಾಣ ಆರಂಭ ಎಂಬಿತ್ಯಾದಿ ವಿವರಗಳನ್ನು ತಿಳಿಯೋಣ.
ಈ ಪ್ರವಾಸ 7 ರಾತ್ರಿ ಮತ್ತು 8 ಹಗಲುಗಳನ್ನು ಒಳಗೊಂಡಿದ್ದು ನೈನಿತಾಲ್, ಅಲ್ಮೋರಾ, ಮುಕ್ತೇಶ್ವರ್, ದೆಹಲಿಗೆ ಭೇಟಿ ನೀಡಬಹುದು.
ಪ್ರಯಾಣದ ವಿವರ:
1ನೇ ದಿನ: ಬೆಳಗ್ಗೆ 6ಕ್ಕೆ ಹೈದರಾಬಾದ್‌ನಿಂದ ರೈಲು (ಸಂಖ್ಯೆ- 12723) ಪ್ರಯಾಣ ಪ್ರಾರಂಭ. ಇಡೀ ದಿನ ಪ್ರಯಾಣ.
2ನೇ ದಿನ: ಬೆಳಗ್ಗೆ ದೆಹಲಿ ತಲುಪುವುದು. ಅಲ್ಲಿಂದ ಹೋಟೆಲ್‌ಗೆ ತೆರಳಿ ಫ್ರೆಶ್ ಅಪ್ ಆಗಿ ಉಪಹಾರ ಸೇವನೆ. ಚೆಕ್ ಔಟ್ ಮಾಡಿ, ಕಾರ್ಬೆಟ್‌ಗೆ ಹೊರಡುವುದು. ಸಂಜೆ ಅಲ್ಲಿ ತಲುಪಿದ ನಂತರ ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿ, ರಾತ್ರಿ ಉಳಿದುಕೊಳ್ಳುವುದು.
3ನೇ ದಿನ: ಉಪಹಾರದ ನಂತರ ಸಫಾರಿ ಹಾಗೂ ಕಾರ್ಬೆಟ್ ಜಲಪಾತಗಳಿಗೆ ಭೇಟಿ. ಆ ನಂತರ, ನೈನಿತಾಲ್‌ಗೆ ಪ್ರಯಾಣ ಆರಂಭ. ಅಲ್ಲಿ ತಲುಪಿದ ನಂತರ, ಹೋಟೆಲ್‌ನಲ್ಲಿ ಚೆಕ್ಇನ್ ಮಾಡಿ, ಆ ದಿನ ಅಲ್ಲಿಯೇ ಉಳಿಯುವುದು.
4ನೇ ದಿನ: ದಿನ ಪೂರ್ತಿ ನೈನಿತಾಲ್‌ನ ವಿವಿಧ ಪ್ರವಾಸಿ ಸ್ಥಳಗಳಿಗೆ ಭೇಟಿ. ಬಳಿಕ ಹೋಟೆಲ್ ತಲುಪಿ ರಾತ್ರಿ ಅಲ್ಲಿಯೇ ತಂಗುವುದು.
5ನೇ ದಿನ: ಅಲ್ಮೋರಾ ಹಾಗೂ ಮುಕ್ತೇಶ್ವರದ ಅನೇಕ ಸ್ಥಳಗಳಿಗೆ ಭೇಟಿ. ಅಂದು ರಾತ್ರಿ ನೈನಿತಾಲ್ನಲ್ಲಿ ತಂಗುವುದು.
6ನೇ ದಿನ: ಹೋಟೆಲ್‌ನಿಂದ ಚೆಕ್ ಔಟ್ ಮಾಡಿ ದೆಹಲಿಗೆ ಹೊರಡುಗುವುದು. ಅಲ್ಲಿ ತಲುಪಿದ ನಂತರ ಅಕ್ಷರಧಾಮ ದೇವಾಲಯಕ್ಕೆ ಭೇಟಿ. ಅಂದು ರಾತ್ರಿ ದೆಹಲಿಯಲ್ಲಿ ತಂಗುವುದು.
7ನೇ ದಿನ: ಹೋಟೆಲ್‌ನಿಂದ ಚೆಕ್ ಔಟ್ ಮಾಡುವುದು. ಕುತುಬ್ ಮಿನಾರ್, ಲೋಟಸ್ ಟೆಂಪಲ್‌ಗೆ ಭೇಟಿ. ಬಳಿಕ ದೆಹಲಿ ರೈಲು ನಿಲ್ದಾಣಕ್ಕೆ ತೆರಳುವುದು. ಅಲ್ಲಿಂದ ಸಂಜೆ 4ಕ್ಕೆ ರೈಲು ಪ್ರಯಾಣ ಪ್ರಾರಂಭ. ಇಡೀ ರಾತ್ರಿ ಪ್ರಯಾಣ.
8ನೇ ದಿನ: ಸಂಜೆ 5ಕ್ಕೆ ಹೈದರಾಬಾದ್ ತಲುಪುವುದು. ಈ ಮೂಲಕ ಪ್ರವಾಸ ಮುಕ್ತಾಯ.
ಪ್ರವಾಸ ದರ:
1ರಿಂದ 3 ಪ್ರಯಾಣಿಕರು:
- ಕಂಫರ್ಟ್ (3A)ನಲ್ಲಿ ಸಿಂಗಲ್ ಶೇರಿಂಗ್‌ಗೆ ₹60,910
- ಡಬಲ್ ಶೇರಿಂಗ್‌ಗೆ ₹34,480
- ಟ್ರಿಪಲ್ ಶೇರಿಂಗ್‌ಗೆ ₹27,020 ಪಾವತಿಸಬೇಕು.
- 5ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಹಾಸಿಗೆ ಸಹಿತ ₹19,960 ಶುಲ್ಕ ಪಾವತಿಸಬೇಕು.
- ಸ್ಟ್ಯಾಂಡರ್ಡ್ (SL) ನಲ್ಲಿ ನೀವು ಸಿಂಗಲ್ ಶೇರಿಂಗ್‌ಗೆ ₹58,220
- ಡಬಲ್ ಶೇರಿಂಗ್‌ಗೆ ₹31,630
- ಟ್ರಿಪಲ್ ಶೇರಿಂಗ್‌ಗೆ ₹24,120 ಪಾವತಿಸಬೇಕು.
- 5 ರಿಂದ 11 ವರ್ಷದ ಮಕ್ಕಳಿಗೆ ಹಾಸಿಗೆ ಸಹಿತ ₹16,970, ಹಾಸಿಗೆ ರಹಿತ ₹15,440 ಶುಲ್ಕ ಪಾವತಿಸಬೇಕಾಗುತ್ತದೆ.
4ರಿಂದ 6 ಪ್ರಯಾಣಿಕರಿಗೆ:
- ಕಂಫರ್ಟ್ (3A) ನಲ್ಲಿ ನೀವು ಡಬಲ್ ಶೇರಿಂಗ್‌ಗೆ ₹29,730
- ಟ್ರಿಪಲ್ ಆಕ್ಯುಪೆನ್ಸಿಗೆ ₹25,530
- 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಹಾಸಿಗೆ ಸಹಿತ ₹19,960 ಶುಲ್ಕ ಪಾವತಿಸಬೇಕಾಗುತ್ತದೆ.
- ಸ್ಟ್ಯಾಂಡರ್ಡ್ (SL) ಡಬಲ್ ಆಕ್ಯುಪೆನ್ಸಿಗೆ ₹26,870
- ಟ್ರಿಪಲ್ ಹಂಚಿಕೆಗೆ ₹22,640
- 5ರಿಂದ 11 ವರ್ಷದ ಮಕ್ಕಳಿಗೆ ಹಾಸಿಗೆ ಸಹಿತ ₹16,970, ಹೊರ ಹಾಸಿಗೆ ರಹಿತ ₹15,440 ಶುಲ್ಕ ಪಾವತಿಸಬೇಕಾಗುತ್ತದೆ.
ಪ್ಯಾಕೇಜ್ನಲ್ಲಿ ಏನೆಲ್ಲಾ ಸೇರಿದೆ?:
- ರೈಲು ಟಿಕೆಟ್‌ಗಳು (ಹೈದರಾಬಾದ್ - ದೆಹಲಿ - ಹೈದರಾಬಾದ್)
- ಹೋಟೆಲ್ ವಸತಿ
- 6 ಉಪಹಾರಗಳು
- ಪ್ಯಾಕೇಜ್ ಪ್ರಕಾರ ಸೈಟ್ ವೀಕ್ಷಿಸುವ ವಾಹನ
- ಪ್ರಯಾಣ ವಿಮೆ
- ಪ್ರಸ್ತುತ ಈ ಪ್ಯಾಕೇಜ್ ಜನವರಿ 7ರಿಂದ ಲಭ್ಯವಿದೆ.
- ಪ್ಯಾಕೇಜ್‌ನ ಸಂಪೂರ್ಣ ವಿವರ ಮತ್ತು ಬುಕ್ಕಿಂಗ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ: IRCTCಯಿಂದ ಅದ್ಭುತ ಪ್ರವಾಸ: ಕಡಿಮೆ ದರದಲ್ಲಿ ಮಧ್ಯಪ್ರದೇಶದ ಪ್ರವಾಸಿ ತಾಣಗಳ ಸೌಂದರ್ಯ ವೀಕ್ಷಿಸಿ