ಕನ್ನಡ ಚಿತ್ರರಂಗದ ಹಾಸ್ಯನಟ ಮೈಕಲ್ ಮಧು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಸೂರ್ಯವಂಶ , ಓಂ , ಶ್, ಸ್ನೇಹಲೋಕ ಸೇರಿ ಸಾಕಷ್ಟು ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ಮಧು ಇಂದು ಸಂಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿದ ನಂತರ ಮಧು ಇದ್ದಕ್ಕಿದ್ದಂತೆ ಕೆಳಗೆ ಬಿದ್ದು ಒದ್ದಾಡಿದ್ದಾರೆ. ಕೂಡಲೇ ಕುಟುಂಬದವರು ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧು ಕೊನೆಯುಸಿರೆಳೆದಿದ್ದಾರೆ. ಮಧು ಪಾರ್ಥೀವ ಶರೀರ ಸದ್ಯಕ್ಕೆ ಕಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿದ್ದು ನಾಳೆ ಬೆಳಗ್ಗೆ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು. ತಮ್ಮದೇ ಸ್ಟೈಲ್ನಿಂದ ಹಾಸ್ಯಪ್ರಿಯರ ಗಮನ ಸೆಳೆದಿದ್ದ ಮೈಕಲ್ ಮಧು ಅವಕಾಶಗಳ ಕೊರತೆಯಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ಈ ಕಾರಣದಿಂದ ಮಧು ಖಿನ್ನತೆ ಒಳಗಾಗಿದ್ದರು ಎನ್ನಲಾಗಿದೆ. ಆದರೆ ಇಂದು ಅವರು ಇಹಲೋಹ ತ್ಯಜಿಸಿದ್ದಾರೆ. ಮಧು ನಿಧನಕ್ಕೆ ಕನ್ನಡ ಚಿತ್ರರಂಗ ಹಾಗೂ ಸಿನಿಪ್ರಿಯರು ಕಂಬನಿ ಮಿಡಿದಿದ್ದಾರೆ.