ETV Bharat / sitara

ನಿರಾಶ್ರಿತರಿಗೆ 'ಅನ್ನದಾತ'ನಾದ ಹಾಸ್ಯ ನಟ ಚಿಕ್ಕಣ್ಣ - comedy actor chikkanna

ಕಷ್ಟದ ದಾರಿಯಲ್ಲಿ ಸಾಕಷ್ಟು ಬಾರಿ ಹಸಿವಿನಿಂದ ಬಳಲಿ ಬೆಳೆದ ನಟ ಇಂದು ತನ್ನಲ್ಲಿ ಇದ್ದಷ್ಟು ಬೇರೆಯವರಿಗೆ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ. ಸದ್ಯ ಚಿಕ್ಕಣ್ಣನವರ ಮಾನವೀಯ ಕೆಲಸ ಕಂಡ ಅಭಿಮಾನಿಗಳು, ಹೆಸರಲ್ಲಿ ಚಿಕ್ಕಣ್ಣ ಹೊರತು ಹೃದಯ ವೈಶಾಲ್ಯತೆಯಲ್ಲಿ ದೊಡ್ಡಣ್ಣ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

comedy-actor-chikkanna-providing-food-for-refugees
ಹಾಸ್ಯ ನಟ ಚಿಕ್ಕಣ್ಣ
author img

By

Published : May 15, 2021, 4:49 PM IST

ಮೈಸೂರು: ಲಾಕ್‌ಡೌನ್​​ನಿಂದ ಸಂಕಷ್ಟಕ್ಕೆ ಸಿಲುಕಿರುವ ಬೀದಿಬದಿ ಜನರಿಗೆ ಹಾಸ್ಯ ನಟ ಚಿಕ್ಕಣ್ಣ ಸದ್ದಿಲ್ಲದೆ ಅನ್ನ ದಾಸೋಹ ಕಾರ್ಯವನ್ನು ಮಾಡುತ್ತಿದ್ದಾರೆ.

comedy actor chikkanna providing food for Refugees
ನಿರಾಶ್ರಿತರಿಗೆ 'ಅನ್ನದಾತ'ನಾದ ಹಾಸ್ಯ ನಟ 'ಚಿಕ್ಕಣ್ಣ'

ಸದ್ಯ ಲಾಕ್​ಡೌನ್​ನಿಂದಾಗಿ ಚಿಕ್ಕಣ್ಣ ಮೈಸೂರಿನ ಹೊರವಲಯದಲ್ಲಿರುವ ತಮ್ಮ ತೋಟದ ಮನೆಯಲ್ಲಿ ಇದ್ದಾರೆ. ಹಸಿದ ಹೊಟ್ಟೆ ತುಂಬಿಸುವ ಕಾರ್ಯವನ್ನು ಸದ್ದಿಲ್ಲದೆ ಕೈಗೆತ್ತಿಕೊಂಡಿರುವ ನಟ, ಮೈಸೂರಿನ ನಂಜಬಹದ್ದೂರ್ ಛತ್ರದ ನಿರಾಶ್ರಿತ ಆಶ್ರಯ ಶಿಬಿರದಲ್ಲಿ ಇರುವ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.

ಲಾಕ್​ಡೌನ್​ ಸಂಕಷ್ಟದ ಸಮಯದಲ್ಲಿ ಸಹಾಯಹಸ್ತ ಚಾಚಿದ ಹಾಸ್ಯ ನಟ

ಅಷ್ಟೆ ಅಲ್ಲದೆ, ಕೆ.ಆರ್. ಆಸ್ಪತ್ರೆ ಹಾಗೂ ಆರ್ಯುವೇದಿಕ್‌ ಸರ್ಕಲ್‌ ಮುಂಭಾಗ ರಸ್ತೆ ಬದಿಯಲ್ಲಿರುವ ಸುಮಾರು 300 ಜನ ನಿರಾಶ್ರಿತರಿಗೆ ನಿನ್ನೆ ಸಂಜೆಯಿಂದ 10 ದಿನಗಳ ಕಾಲ ಆಹಾರ ನೀಡಲು ಸಜ್ಜಾಗಿದ್ದಾರೆ.

ಚಿಕ್ಕಣ್ಣನ ಅನ್ನಸಂತರ್ಪಣೆ ಕಾರ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.