ETV Bharat / sitara

ಸೃಜನ್​ ಜತೆ ಮಜಾ ಮಾಡೋಕೆ ಬಂದ್ರು ವಿಶೇಷ ಅತಿಥಿಗಳು - ಮಜಾ ಟಾಕೀಸ್​​ನಲ್ಲಿ ಸೀರಿಯಲ್​ ಕಲಾವಿದರು

ಮಜಾ ಟಾಕೀಸ್ ನಲ್ಲಿ ಅನುಬಂಧ ಸ್ಪೆಷಲ್ ಎನ್ನುವ ವಿಶೇಷ ಸಂಚಿಕೆ ಪ್ರಸಾರವಾಗುತ್ತಿದ್ದು, ಅದರಲ್ಲಿ ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿಯ ಕಲಾವಿದರು ಭಾಗವಹಿಸಲಿದ್ದಾರೆ. ಅಂತೆಯೇ ಈ ವಾರ ಮಂಗಳಗೌರಿ ಮದುವೆ ಮಿಥುನರಾಶಿ ಹಾಗೂ ಕನ್ನಡತಿ ತಂಡಗಳು ಆಗಮಿಸಲಿವೆ.

colors kannada serial artist visit to  majaa  talkies

author img

By

Published : Dec 2, 2020, 6:36 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕಾಮಿಡಿ ಶೋ ಮಜಾ ಟಾಕೀಸ್ ನವಿರಾದ ಹಾಸ್ಯದ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಔತಣವನ್ನು ಒದಗಿಸುತ್ತಲೇ ಬಂದಿದೆ. ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಮಜಾ ಟಾಕೀಸ್ ಜನರ ಮೆಚ್ಚಿನ ಶೋ ಆಗಿರುವುದಂತೂ ದಿಟ. ಪ್ರಸ್ತುತ ಶೋನಲ್ಲಿ ಸೆಲೆಬ್ರಿಟಿಗಳನ್ನು ಕರೆಸಿ ಅವರೊಂದಿಗೆ ಸಂವಹನ ನಡೆಸಿ ಅವರ ವೃತ್ತಿ ಹಾಗೂ ವೈಯಕ್ತಿಕ ಬದುಕನ್ನು ವೀಕ್ಷಕರ ಮುಂದೆ ತೆರೆದಿಡಲಾಗುತ್ತದೆ.

colors kannada serial artist visit to  majaa  talkies
ಧಾರಾವಾಹಿ ಕಲಾವಿದರು

ಇಂತಿಪ್ಪ ಮಜಾ ಟಾಕೀಸ್ ನಲ್ಲಿ ಅನುಬಂಧ ಸ್ಪೆಷಲ್ ಎನ್ನುವ ವಿಶೇಷ ಸಂಚಿಕೆ ಪ್ರಸಾರವಾಗುತ್ತಿದ್ದು, ಅದರಲ್ಲಿ ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿಯ ಕಲಾವಿದರು ಭಾಗವಹಿಸಲಿದ್ದಾರೆ. ಅಂತೆಯೇ ಈ ವಾರ ಮಂಗಳಗೌರಿ ಮದುವೆ ಮಿಥುನರಾಶಿ ಹಾಗೂ ಕನ್ನಡತಿ ತಂಡಗಳು ಆಗಮಿಸಲಿವೆ. ಜೊತೆಗೆ ನವಿರಾದ ಹಾಸ್ಯಗಳ ಮೂಲಕ ಮಜಾ ಮನೆಯ ಮಾಜಾವನ್ನು ಹೆಚ್ಚಿಸಲಿದೆ. ಕಳೆದ ವಾರ ಗಿಣಿರಾಮ ಹಾಗೂ ನನ್ನರಸಿ ರಾಧೆ ಧಾರಾವಾಹಿಯ ತಂಡಗಳು ಬಂದಿದ್ದವು.

ಮಜಾ ಟಾಕೀಸ್ ಮನೆಗೆ ಇತ್ತೀಚೆಗಷ್ಟೇ ಡುಬಾಕ್ ಸೈಂಟಿಸ್ಟ್ ಆಗಿ ವಿಠಲ್ ರಾವ್ ಖ್ಯಾತಿಯ ನಟ ರವಿಶಂಕರ್ ಎಂಟ್ರಿ ನೀಡಿದ್ದರು. ಇದರ ಜೊತೆಗೆ ಮಗನ ಜನನದಿಂದಾಗಿ ಒಂದೂವರೆ ವರ್ಷಗಳ ಕಾಲ ನಟನೆಯಿಂದ ದೂರ ಉಳಿದಿದ್ದ ಶ್ವೇತಾ ಚಂಗಪ್ಪ ರಾಣಿಯಾಗಿ ಮತ್ತೆ ಮರಳಿದ್ದಾರೆ. ಒಟ್ಟಿನಲ್ಲಿ ಕಿರುತೆರೆ ವೀಕ್ಷಕರಿಗೆ ವಾರಾಂತ್ಯದ ಮಜಾ ಸಿಗುವುದಂತೂ ಗ್ಯಾರಂಟಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.