ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಇದೀಗ ಎಲ್ಲೆಲ್ಲೂ ಸಖತ್ ಸದ್ದು ಮಾಡ್ತಿದೆ. ಇನ್ನು ಪೈಲ್ವಾನನ ಹವಾ ಹೇಗಿದೆ ಅಂದ್ರೆ, ಪೈಲ್ವಾನ್ ರೂಪದ ಮಣ್ಣಿನ ಗಣೇಶ ಈಗ ಮಾರ್ಕೆಟ್ ಗೆ ಎಂಟ್ರಿ ಕೊಟ್ಟಿದ್ದಾನೆ.
ಹೌದು ಇದೀಗ ಗಣೇಶ ಹಬ್ಬ ಸಮೀಪಿಸುತ್ತಿದ್ದು ಪೈಲ್ವಾನ್ ಗಣೇಶನಿಗೆ ಮಾರ್ಕೆಟ್ ನಲ್ಲಿ ಸಖತ್ ಡಿಮ್ಯಾಂಡ್ ಹಾಗೂ ಗಣೇಶನ ಕ್ರೇಜ್ ಜೋರಾಗಿದೆ. ಈ ಪೈಲ್ವಾನ್ ಗಣೇಶ ಶಿವಮೊಗ್ಗದಲ್ಲಿ ಭರ್ಜರಿಯಾಗಿ ಸೇಲ್ ಆಗ್ತಿದ್ದು ಪೈಲ್ವಾನ್ ಫಿವರ್ ಜೋರಾಗಿದೆ.
ಪೈಲ್ವಾನ್ಗೂ ಮುನ್ನ ಕಬಾಲಿ ಗಣೇಶ, ಮೋದಿ ಗಣೇಶ, ಕೆಜಿಎಫ್ ಗಣೇಶ ಮಾರ್ಕೆಟ್ ಗೆ ಎಂಟ್ರಿ ಕೊಟ್ಟಿದ್ದವು. ಈಗ ಪೈಲ್ವಾನ್ ಗಣೇಶ ಮಾರ್ಕೆಟ್ನಲ್ಲಿ ಹವಾ ಸೃಷ್ಟಿಸಿದ್ದಾನೆ.