ETV Bharat / sitara

ನಿರ್ಮಾಪಕ ವರ್ಸಸ್ ಪ್ರದರ್ಶಕ ಜಟಾಪಟಿ: 5 ರೂಪಾಯಿ ಗಲಾಟೆ!

ಸ್ಯಾಂಡಲ್​ವುಡ್​ನಲ್ಲಿ 5 ರೂ.ಗಾಗಿ ನಿರ್ಮಾಪಕ ವಲಯ ಹಾಗೂ ಪ್ರದರ್ಶಕ ವಲಯದಲ್ಲಿ ಅಸಮಾಧಾನ ವ್ತಕ್ತವಾಗಿದೆ. ಟಿಕೆಟ್​ನಲ್ಲಿ 5 ರೂ. ಹೆಚ್ಚಳ ಮಾಡಿ, ಆ ಹಣವನ್ನು ಯಾರು ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಗಲಾಟೆ ಶುರುವಾಗಿದೆ.

author img

By

Published : May 30, 2020, 3:37 PM IST

ನಿರ್ಮಾಪಕ ವರ್ಸಸ್ ಪ್ರದರ್ಶಕ ಜಟಾಪಟಿ
ನಿರ್ಮಾಪಕ ವರ್ಸಸ್ ಪ್ರದರ್ಶಕ ಜಟಾಪಟಿ

ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕ ಹಾಗೂ ಪ್ರದರ್ಶಕ ವಲಯದಲ್ಲಿ ಜಟಾಪಟಿ ನಡೆಯುತ್ತಿದೆ. ಅದು ಕೇವಲ 5 ರೂಪಾಯಿ ವಿಚಾರವಾಗಿ ಗಲಾಟೆ ಶರುವಾಗಿದೆ.

ಕರ್ನಾಟಕ ಚಲನಚಿತ್ರ ಪ್ರದರ್ಶಕರ ವಲಯದ ಅಧ್ಯಕ್ಷ ಕೆ. ವಿ. ಚಂದ್ರಶೇಖರ್ ಅವರು ಲಾಕ್​ಡೌನ್ ತೆರವುಗೊಳಿಸಿದ ಬಳಿಕ ಸಿನಿಮಾ ಮಂದಿರಗಳು ತೆರೆಯುತ್ತವೆ. ಆಗ ಪ್ರತೀ ಟಿಕೆಟ್​ ಬೆಲೆಯಲ್ಲಿ 5 ರೂ. ಹೆಚ್ಚಿಸಬೇಕು ಎಂದು ಅನಿಸಿಕೆ ಮಂಡಿಸಿದ್ದರು. ಆದರೆ ಇದಕ್ಕೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್(ರಾಮಕೃಷ್ಣ) ವಿರೋಧ ವ್ಯಕ್ತಪಡಿಸಿದ್ದಾರೆ.

5 ರೂಪಾಯಿಯ ಒಟ್ಟು ಹಣ ಪ್ರದರ್ಶಕ ವಲಯಕ್ಕಿಂತ ನಿರ್ಮಾಪಕರ ವಲಯಕ್ಕೆ ಸೇರಬೇಕು. ಆ ಹಣವನ್ನು ನಿರ್ಮಾಪಕರ ಸಂಕಷ್ಟದ ಹಣವಾಗಿ ಸಂಗ್ರಹಿಸಿ ಇಡಬೇಕು. ನಿರ್ಮಾಪಕ ಇದ್ದರೆ ಪ್ರದರ್ಶನ ಮಂದಿರ ಎಂದು ಹೇಳಿದ್ದಾರೆ.

ಇತ್ತೀಚೆಗೆ ನಿರ್ಮಾಪಕರ ವಲಯ ಹಾಗು ಪ್ರದರ್ಶಕರ ಸಂಘ ಲಾಕ್​ಡೌನ್​ ವಿಚಾರವಾಗಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಮನವಿಯನ್ನು ಸಲ್ಲಿಸಿ ಈ ವಿಚಾರವಾಗಿ ಪ್ರಸ್ತಾಪ ಮಾಡಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ಯಾವ ರೀತಿ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.