ETV Bharat / sitara

ಏರ್​ಪೋರ್ಟ್​ನಲ್ಲಿ ಸಲ್ಮಾನ್​ ಖಾನ್​ ತಡೆದು ದಾಖಲೆ ಪರಿಶೀಲನೆ, ಅಧಿಕಾರಿಗೆ ಸಂಕಷ್ಟ! - ಟೈಗರ್ 3 ಚಿತ್ರ

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನ ಏರ್​ಪೋರ್ಟ್​ನಲ್ಲಿ ತಡೆದು ಪರಿಶೀಲನೆ ನಡೆಸಿದ್ದಕ್ಕಾಗಿ ಅಧಿಕಾರಿಯೊಬ್ಬರಿಗೆ ಇದೀಗ ಸಂಕಷ್ಟ ಎದುರಾಗಿದೆ.

ASI Somnath Mohanty
ASI Somnath Mohanty
author img

By

Published : Aug 24, 2021, 3:46 PM IST

Updated : Aug 24, 2021, 4:01 PM IST

ಮುಂಬೈ(ಮಹಾರಾಷ್ಟ್ರ): ಬಾಲಿವುಡ್​ ನಟ ಸಲ್ಮಾನ್ ಖಾನ್​ ಅವರನ್ನ ಮುಂಬೈ ಏರ್​ಪೋರ್ಟ್​ನಲ್ಲಿ ತಡೆದು ದಾಖಲೆ ಪರಿಶೀಲನೆ ನಡೆಸಿದ್ದಕ್ಕಾಗಿ CISF ಅಧಿಕಾರಿಯೊಬ್ಬನಿಗೆ ಇದೀಗ ಸಂಕಷ್ಟ ಎದುರಾಗಿದೆ. ಈಗಾಗಲೇ ಅಧಿಕಾರಿಗಳು ಅವರ ಮೊಬೈಲ್​ ಫೋನ್​ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ?

ಸಲ್ಮಾನ್ ಖಾನ್​​ ಅವರ ಬಹುನಿರೀಕ್ಷಿತ ಚಿತ್ರ ‘ಟೈಗರ್​ 3’ ಚಿತ್ರದ ಶೂಟಿಂಗ್​ಗಾಗಿ ರಷ್ಯಾಕ್ಕೆ ತೆರಳಿದ್ದರು. ಅಲ್ಲಿಂದ ಮುಂಬೈಗೆ ಬಂದಿಳಿದಿದ್ದ ಅವರನ್ನ ಏರ್​ಪೋರ್ಟ್​ನಲ್ಲಿ ಸಿಐಎಸ್​ಎಫ್​ ಅಧಿಕಾರಿ ಸೋಮನಾಥ್​ ಮೊಹಂತಿ ತಡೆದು ನಿಲ್ಲಿಸಿ, ಐಡಿ ಕಾರ್ಡ್ ಸೇರಿದಂತೆ ಪ್ರಮುಖ ದಾಖಲೆಗಳ ಪರಿಶೀಲನೆ ನಡೆಸಿದ್ದರು.

ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿತ್ತು. ಜತೆಗೆ ಅಧಿಕಾರಿಯ ನಡೆಗೆ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗಿತ್ತು. ವಿಡಿಯೋ ವೈರಲ್​ ಆಗುತ್ತಿದ್ದಂತೆ ಕೆಲವೊಂದು ಮಾಧ್ಯಮ ಸಂಸ್ಥೆಗಳು ಮೊಹಂತಿ ಅವರಿಗೆ ಫೋನ್ ಮಾಡಿ, ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಳ್ಳುಲು ಶುರು ಮಾಡಿದ್ದವು. ಜತೆಗೆ ಅವರನ್ನ ಹೀರೋ ರೀತಿಯಲ್ಲಿ ಬಿಂಬಿಸಲು ಆರಂಭಿಸಿದ್ದವು.

ಅಧಿಕಾರಿ ಮಾಡಿರುವ ತಪ್ಪೇನು?

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(CISF) ಪ್ರೋಟೋಕಾಲ್​​ ಪ್ರಕಾರ ಅಧಿಕಾರಿಗಳು ಯಾವುದೇ ಮಾಧ್ಯಮಗಳ ಜೊತೆ ಮಾತುಕತೆ ನಡೆಸುವಂತಿಲ್ಲ. ಆದರೆ, ಸೋಮನಾಥ್​ ಮೊಹಂತಿ ನಿಯಮ ಉಲ್ಲಂಘನೆ ಮಾಡಿ, ಮೊಬೈಲ್​ ಫೋನ್​​ ಮೂಲಕ ಕೆಲವೊಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆಂದು ತಿಳಿದು ಬಂದಿದ್ದು, ಇದೇ ಅವರ ಪಾಲಿಗೆ ಸಂಕಷ್ಟ ತಂದೊಡ್ಡಿದೆ. ಹೀಗಾಗಿ ಅಧಿಕಾರಿಗಳು ಅವರ ಮೊಬೈಲ್​ ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿರಿ: ಆನ್​ಲೈನ್​ನಲ್ಲಿ ಲೀಕ್​ ಆಯ್ತು 'ಟೈಗರ್​ 3' ಸಿನಿಮಾದ ಸಲ್ಮಾನ್​ ಖಾನ್​​ ಲುಕ್​..

ರಷ್ಯಾದಲ್ಲಿ ಶೂಟಿಂಗ್ ಮುಗಿಸಿದ ಬಳಿಕ ಸಲ್ಮಾನ್ ಖಾನ್​ ಅಲ್ಲಿನ ಪ್ರಮುಖ ಬೀದಿಗಳಲ್ಲಿ ತಿರುಗಾಡಿದ್ದರು. ಅದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದವು.

Last Updated : Aug 24, 2021, 4:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.